ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಭೂಮಿ ಕಲಾವಿದರ ಅಂಚೆ ಲಕೋಟೆ ಬಿಡುಗಡೆ

Last Updated 27 ಮಾರ್ಚ್ 2017, 20:33 IST
ಅಕ್ಷರ ಗಾತ್ರ

ಬೆಂಗಳೂರು: ಹತ್ತು ರಂಗಕಲಾವಿದರ ಭಾವಚಿತ್ರವುಳ್ಳ ವಿಶೇಷ ಅಂಚೆ ಲಕೋಟೆಯನ್ನು ನಗರದಲ್ಲಿ ಸೋಮ ವಾರ ನಡೆದ ವಿಶ್ವ ರಂಗಭೂಮಿ ದಿನಾಚರಣೆಯಲ್ಲಿ ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಚಾರ್ಲ್ಸ್ ಲೋಬೊ ಅವರು ಬಿಡುಗಡೆ ಮಾಡಿದರು.

ಅಂಚೆ ಲಕೋಟೆಯನ್ನು ಕನ್ನಡ ಮತ್ತು ಸಂಸ್ಕೃತಿ  ಸಚಿವೆ ಉಮಾಶ್ರೀ ಅವರಿಗೆ ಹಸ್ತಾಂತರಿಸಿ ಮಾತನಾಡಿದ ಅವರು, ‘ಏಪ್ರಿಲ್ 18ರ ವಿಶ್ವ ಪಾರಂಪರಿಕ ದಿನದ ಪ್ರಯುಕ್ತವಾಗಿ ಅಂಚೆ ಇಲಾಖೆಯಿಂದ ಬೇಲೂರು, ಹಳೇಬೀಡು, ತಲಕಾಡಿನ ದೇಗುಲ ಹಾಗೂ ಇತ್ತಿಚೆಗೆ ನಿಧನರಾದ ಮಣಿಪಾಲದ ವಿಜಯನಾಥ ಶೆಣೈ ಅವರ ಭಾವಚಿತ್ರವುಳ್ಳ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡುತ್ತೇವೆ’ ಎಂದು ತಿಳಿಸಿದರು.

ಕರ್ನಾಟಕ ರಂಗಭೂಮಿಯ ಇತಿಹಾಸ ಸಾರುವ ‘ಕರ್ನಾಟಕ ರಂಗಭೂಮಿ ಹಕ್ಕಿನೋಟ’ ಎಂಬ ಪುಸ್ತಕ, ಸಾಕ್ಷ್ಯ ಚಿತ್ರ ಹಾಗೂ ಕಿರುಚಿತ್ರವನ್ನು ಬಿಡುಗಡೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT