, ‘ಹನುಮಾನ್ ದಾ ದಮ್‌ದಾರ್‌’: ಯುವ ಹನುಮನಿಗೆ ಧ್ವನಿ ನೀಡಿದ ಸಲ್ಮಾನ್‌ ಖಾನ್ | ಪ್ರಜಾವಾಣಿ
ಮೋಷನ್ ಪೋಸ್ಟರ್ ಬಿಡುಗಡೆ

‘ಹನುಮಾನ್ ದಾ ದಮ್‌ದಾರ್‌’: ಯುವ ಹನುಮನಿಗೆ ಧ್ವನಿ ನೀಡಿದ ಸಲ್ಮಾನ್‌ ಖಾನ್

ಹನುಮಜಯಂತಿಯ ದಿನವಾದ ಮಂಗಳವಾರ ಚಲನಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ರುಚಿ ನಾರಾಯಣ್ ನಿರ್ದೇಶನದ ಈ ಚಲನಚಿತ್ರ ಮೇ 19ರಂದು ಬಿಡುಗಡೆಯಾಗಲಿದೆ.

ಮುಂಬೈ: ಆ್ಯನಿಮೇಷನ್ ಚಲನಚಿತ್ರ ‘ಹನುಮಾನ್ ದಾ ದಮ್‌ದಾರ್‌’ನಲ್ಲಿ ಯುವ ಹನುಮನಿಗೆ ಧ್ವನಿಯಾಗಿದ್ದಾರೆ ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್.

ಹನುಮಜಯಂತಿಯ ದಿನವಾದ ಮಂಗಳವಾರ ಚಲನಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ.

ರಾಮನನ್ನು ಭೇಟಿಯಾದ ಸಂದರ್ಭದ ಯುವ ಹನುಮನ ಕತೆಯನ್ನೊಳಗೊಂಡಿರುವ, ರುಚಿ ನಾರಾಯಣ್ ನಿರ್ದೇಶನದ ಈ ಚಲನಚಿತ್ರ ಮೇ 19ರಂದು ಬಿಡುಗಡೆಯಾಗಲಿದೆ. ಹನುಮನಿಗೆ ತನ್ನ ಶಕ್ತಿಯ ಬಗ್ಗೆ ಅರಿವಿಲ್ಲದೆ ಇದ್ದದ್ದು, ರಾಮನನ್ನು ಭೇಟಿಯಾದ ಮೇಲೆ ಸ್ಫೂರ್ತಿ ಪಡೆದದ್ದು, ತನ್ನ ಯೋಗ್ಯತೆ ಏನೆಂಬುದನ್ನು ಅರಿತದ್ದು ಮತ್ತಿತರ ಅಂಶಗಳು ಚಲನಚಿತ್ರದಲ್ಲಿ ಅಡಕವಾಗಿರಲಿವೆ ಎನ್ನಲಾಗಿದೆ.

ರವೀನಾ ಟಂಡನ್, ಸೌರಭ್ ಶುಕ್ಲಾ, ಜಾವೇದ್ ಅಖ್ತರ್, ಕುನಾಲ್ ಖೇಮು, ಮಕರಂದ್ ದೇಶಪಾಂಡೆ, ವಿನಯ್ ಪಾಠಕ್ ಮತ್ತು ಚಂಕಿ ಪಾಂಡೆ ಸಹ ಚಲನಚಿತ್ರಕ್ಕೆ ಧ್ವನಿ ನೀಡಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
‘ಅಲಮೇಲಮ್ಮ’ನ ಯಶಸ್ಸಿನ ಯಾತ್ರೆ

ಕಲೆಕ್ಷನ್‌ ಚೆನ್ನಾಗಿದೆ
‘ಅಲಮೇಲಮ್ಮ’ನ ಯಶಸ್ಸಿನ ಯಾತ್ರೆ

28 Jul, 2017

ವಿಸ್ಮಯ
ಈ ವಾರ ತೆರೆಗೆ- ವಿಸ್ಮಯ

ಅರ್ಜುನ್ ಸರ್ಜಾ ಅಭಿನಯಿಸಿರುವ, ಅರುಣ್ ವೈದ್ಯನಾಥನ್ ನಿರ್ದೇಶನದ ಚಿತ್ರ ಇದು. ಇದು ಆ್ಯಕ್ಷನ್ ಆಧಾರಿತ ಚಿತ್ರ. ಶ್ರುತಿ ಹರಿಹರನ್ ಈ ಚಿತ್ರದ ನಾಯಕಿ. ಸುಧಾರಾಣಿ,...

28 Jul, 2017
ತಿರ್ಬೋಕಿಗಳು ಬರುತ್ತಿದ್ದಾರೆ ದಾರಿಬಿಡಿ!

ಹಾಸ್ಯ ಪ್ರಧಾನ ಚಿತ್ರ
ತಿರ್ಬೋಕಿಗಳು ಬರುತ್ತಿದ್ದಾರೆ ದಾರಿಬಿಡಿ!

28 Jul, 2017
ಮೊದಲ ನೋಟಕ್ಕೆ ಹೊಳೆದ ಸಾಲುಗಳು

ಕವಿ ಸಮಯ
ಮೊದಲ ನೋಟಕ್ಕೆ ಹೊಳೆದ ಸಾಲುಗಳು

28 Jul, 2017
ಆ ಎರಡು ವರ್ಷಗಳ ಕಥೆ ಹೇಳಲಿದ್ದಾರೆ...

ಸಿನಿತೆರೆ
ಆ ಎರಡು ವರ್ಷಗಳ ಕಥೆ ಹೇಳಲಿದ್ದಾರೆ...

28 Jul, 2017