ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದಿಂದ ಆಫ್ಘಾನಿಸ್ತಾನದ ಮೇಲೆ ದೊಡ್ಡ ಬಾಂಬ್

Last Updated 13 ಏಪ್ರಿಲ್ 2017, 17:55 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಎಎಫ್‌ಪಿ): ಅಮೆರಿಕವು ಆಫ್ಘಾನಿಸ್ತಾನದ ನಂಗರ್‌ಹಾರ್‌  ಮೇಲೆ ಈವರೆಗಿನ ಅತ್ಯಂತ ದೊಡ್ಡ ಸಾಂಪ್ರದಾಯಿಕ ಬಾಂಬ್‌ ಎಸೆದಿದೆ.
ನಂಗರ್‌ಹಾರ್‌ನಲ್ಲಿ ಈಚೆಗೆ, ಇಸ್ಲಾಮಿಕ್‌ ಸ್ಟೇಟ್ ಉಗ್ರರ ವಿರುದ್ಧದ ಹೋರಾಟದಲ್ಲಿ ಅಮೆರಿಕದ ‘ಗ್ರೀನ್ ಬೆರೆಟ್‌’ ಪಡೆಯ ಸೈನಿಕರು ಮೃತಪಟ್ಟಿದ್ದರು. ಇದಕ್ಕೆ ಪ್ರತೀಕಾರವಾಗಿ ಈ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಬಾಂಬ್‌ ಅನ್ನು ‘ಮ್ಯಾಸಿವ್ ಆರ್ಡಿನೆನ್ಸ್ ಏರ್‌ ಬ್ಲ್ಯಾಸ್ಟ್–ಎಂಒಎಬಿ’ ಎಂದು  ಕರೆಯಲಾಗುತ್ತದೆ. 10.3 ಟನ್‌ ತೂಕದ ಈ ಬಾಂಬ್‌ ಭಾರಿ ಗಾತ್ರದಾದ್ದರಿಂದ, ‘ಮದರ್‌ ಆಫ್‌ ಆಲ್‌ ಬಾಂಬ್ಸ್’ ಎಂದೂ ಅಡ್ಡ ಹೆಸರಿನಿಂದ ಕರೆಯಲಾಗುತ್ತದೆ.

ಅಮೆರಿಕ 2003ರಲ್ಲಿ ಈ ಬಾಂಬ್‌ನ ಅಂತಿಮ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿತ್ತು. ಆದರೆ ಇದೇ ಮೊದಲ ಬಾರಿ ಪ್ರಯೋಗಿಸಿದೆ.
ಗುರುವಾರ ಸಂಜೆ 7 ಗಂಟೆಗೆ ದಾಳಿ ನಡೆದಿದೆ.

ದಾಳಿಯಿಂದ ಆಗಿರುವ ಜೀವ ಮತ್ತು ಆಸ್ತಿ ಹಾನಿಯ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT