ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಪತ್ರೆಯಲ್ಲಿ ಸಿಗುವ ಸೌಲಭ್ಯಗಳ ಫಲಕ ಹಾಕಿ

Last Updated 16 ಏಪ್ರಿಲ್ 2017, 5:32 IST
ಅಕ್ಷರ ಗಾತ್ರ

ಮಾಲೂರು: ಆಸ್ಪತ್ರೆಯಲ್ಲಿ  ಸಾರ್ವಜನಿಕರಿಗೆ ದೊರಕುವ  ಸೌಲಭ್ಯಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಮಾಹಿತಿಯುಳ್ಳ ಫಲಕಗಳನ್ನು ಪ್ರದರ್ಶಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ವಿ ಶ್ರೀನಿವಾಸ್  ತಿಳಿಸಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ  ಶನಿವಾರ ನಡೆದ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಮಾತನಾಡಿದರು.  ‘ಆಸ್ಪತ್ರೆಗೆ ಬರುವ ಜನರ ಅನುಕೂಲಕ್ಕಾಗಿ  ತಜ್ಞ ವೈದ್ಯರ ಹೆಸರು ಮತ್ತು ರೋಗಿಗಳಿಗೆ ದೊರಕುವ ಸೌಲಭ್ಯಗಳ ವಿವರದ ಫಲಕ ಹಾಕುವುದರಿಂದ  ಸಾಮಾನ್ಯ ರೋಗಿಗಳಿಗೆ ಅನುಕೂಲವಾಗುತ್ತದೆ’ ಎಂದು ತಿಳಿಸಿದರು.

‘ಆಸ್ಪತ್ರೆಯಲ್ಲಿ ಶವಾಗಾರ ಪರೀಕ್ಷೆ ಮಾಡಿಸಲು ವಾರುಸುದಾರರಿಂದ ನೌಕರರು ಹಾಗೂ ಕೆಲವು ವೈದ್ಯರು ಹಣ ವಸೂಲಿ ಮಾಡುತ್ತಿದ್ದಾರೆ’ ಎಂದು  ಪುರಸಭೆ ಸದಸ್ಯ ಮುರಳಿಧರ್ ದೂರಿದರು.ಆರೋಗ್ಯಾಧಿಕಾರಿ ಪ್ರಸನ್ನಕುಮಾರ್  ಮಾತನಾಡಿ,‘ಆರೋಗ್ಯಾಧಿಕಾರಿ ಆಸ್ಪತ್ರೆಯಲ್ಲಿದ್ದ  ಡಿ ಗ್ರೂಪ್ ನೌಕರರ ಸಮಸ್ಯೆ ನಿವಾರಣೆಯಾಗಿದೆ. ಜಿಲ್ಲಾ ಆರೋಗ್ಯ ಇಲಾಖೆಯಿಂದ 32 ಡಿ ಗ್ರೂಪ್ ನೌಕರರನ್ನು ಗುತ್ತಿಗೆ ಆಧಾರದಲ್ಲಿ ನಿಯೋಜಿಸಲಾಗಿದೆ. ಹಳೇ ಶಸ್ತ್ರ ಚಿಕಿತ್ಸಾ ಕೊಠಡಿಯಿಂದ ಸ್ಕ್ಯಾನಿಂಗ್ ಕೊಠಡಿ, ರಕ್ತ ಶೇಖರಣ ಕೊಠಡಿಗಳಿಗೆ ಜನರೇಟರ್ ಸಂಪರ್ಕ ಕಲ್ಪಿಸಲಾಗುವುದು’ ಎಂದು ತಿಳಿಸಿದರು.

ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಶವ ಪರೀಕ್ಷೆಗೆ ಬರುವ ಶವಗಳಿಗೆ ಅಗತ್ಯವಿರುವ ಸಾಮಗ್ರಿಗಳ ಖರೀದಿಸಲು ಮೃತರ ಸಂಬಂಧಿಕರಿಂದ ಹಣ ಪಡೆಯುವ ಅಗತ್ಯವಿಲ್ಲ. ಆರೋಗ್ಯ ರಕ್ಷಾ ಸಮಿತಿ ನಿಧಿಯಿಂದ ಖರೀದಿಸಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಬಿಪಿಎಲ್ ಕಾರ್ಡು ಹೊಂದಿರುವ ಕುಟುಂಬಗಳಿಗೆ  ಸಿಸರಿನ್, ಫೈಲ್ಸ್, ಅಫೆಂಡಿಕ್ಸ್ನಂತಹ ಶಸ್ತ್ರ ಚಿಕಿತ್ಸೆಗಳನ್ನು ಉಚಿತವಾಗಿ ಮಾಡಲು ತೀರ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT