ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರಿಯಾದಲ್ಲಿ ನಿರಾಶ್ರಿತರ ಸ್ಥಳಾಂತರ ವೇಳೆ ಆತ್ಮಾಹುತಿ ಬಾಂಬ್ ದಾಳಿಗೆ 112 ಮಂದಿ ಸಾವು

Last Updated 16 ಏಪ್ರಿಲ್ 2017, 10:17 IST
ಅಕ್ಷರ ಗಾತ್ರ

ರಶಿದಿನ್‌: ಸಿರಿಯಾದ ನಿರಾಶ್ರಿತರನ್ನು ಗುರಿಯಾಗಿರಿಸಿ ಎರಡು ಬಸ್‌ಗಳ ಮೇಲೆ ಆತ್ಮಾಹುತಿ ಕಾರ್‌ ಬಾಂಬ್‌ ದಾಳಿ ನಡೆದಿದ್ದು, ಮಕ್ಕಳು ಸೇರಿದಂತೆ 112 ಮಂದಿ ಸಾವೀಗೀಡಾಗಿದ್ದಾರೆ.

ಸಿರಿಯಾ ನಿರಾಶ್ರಿತರ ಸ್ಥಳಾಂತಕ್ಕೆ ಬಸ್‌ನಲ್ಲಿ ಕರೆದೊಯ್ಯಲಾಗುತ್ತಿದ್ದ ವೇಳೆ ಸರ್ಕಾರಿ ಪಡೆಗಳ ನಿಯಂತ್ರಣದಲ್ಲಿರುವ ಪಶ್ಚಿಮ ಅಲೆಪ್ಪೊದ ಉಪ ನಗರ ರಶಿದಿನ್‌ನಲ್ಲಿ ಆತ್ಮಾಹುತಿ ಬಾಂಬ್‌ ದಾಳಿ ನಡೆದಿದೆ.

ದಾಳಿಯಲ್ಲಿ 43 ಜನ ಸಾವೀಗೀಡಾಗಿದ್ದಾರೆ ಎಂದು ಅಧಿಕೃತವಾಗಿ ಹೇಳಲಾಗಿದೆ. ಆದರೆ, ಈ ಭೀಕರ ದಾಳಿಗೆ 112 ಜನ ಸಾವಿಗೀಡಾಗಿದ್ದಾರೆ ಎಂದು ಸಿರಿಯಾದಲ್ಲಿನ ಅಮೆರಿಕ ಮೂಲದ ಮಾನವ ಹಕ್ಕು ಮೇಲ್ವಿಚಾರಣಾ ಸಂಸ್ಥೆ ಭಾನುವಾರ ಹೇಳಿದೆ.

ದಾಳಿಯ ತೀವ್ರತೆಗೆ ಬಸ್‌ ಹಾಗೂ ಕಾರುಗಳು ಛಿದ್ರವಾಗಿದ್ದು, ಶವಗಳು ಚಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಭೀಕರ ದೃಶ್ಯ ಅದಾಗಿತ್ತು, ಅದೆಷ್ಟು ಜನ ಸತ್ತರೊ ಗೊತ್ತಿಲ್ಲ. ಬದುಕುಳಿದವರಿಗಾಗಿ ಹುಡುಕಾಟ ನಡೆದಿತ್ತು, ಗಾಯಾಳುಗಳನ್ನು ಆ್ಯಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಪ್ರತ್ಯಕ್ಷ ದರ್ಶಿಯೊಬ್ಬರು ಹೇಳಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ.

ಬಂಡುಕೋರರು ಮತ್ತು ಸರ್ಕಾರದ ಮಧ್ಯೆ ಸಂಘರ್ಷ ಮುಂದುವರಿದಿದ್ದು, ರಕ್ಕಾದಲ್ಲಿ ಅಮೆರಿಕ ಪಡೆ ಮುನ್ನಡೆ ಸಾಧಿಸುತ್ತಿದ್ದ ವೇಳೆ ಈ ದಾಳಿ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT