ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡಿಗ ಮನೀಷ್ ಪಾಂಡೆ ಅರ್ಧ ಶತಕ ಮಿಂಚು: ‘ಹ್ಯಾಟ್ರಿಕ್‌’ ಗೆಲುವು ಸಾಧಸಿದ ಕೆಕೆಆರ್‌

Last Updated 17 ಏಪ್ರಿಲ್ 2017, 14:31 IST
ಅಕ್ಷರ ಗಾತ್ರ

ನವದೆಹಲಿ: ಫಿರೋಜ್‌ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಗೌತಮ್‌ ಗಂಭೀರ್‌ ಸಾರಥ್ಯದ ನೈಟ್‌ರೈಡರ್ಸ್‌ ತಂಡ ಆತಿಥೇಯ ಡೆಲ್ಲಿ ಡೇರ್‌ಡೆವಿಲ್ಸ್‌ ಸವಾಲಿಗೆ ಎದೆಯೊಡಿತ್ತು.

ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಡೇರ್‌ಡೆವಿಲ್ಸ್‌ 20 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 168 ರನ್ ಗಳಿಸಿತ್ತು.

ಈ ಗುರಿಯನ್ನು ಬೆನ್ನತ್ತಿದ ಕೆಕೆಆರ್‌ 19.5 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 169 ರನ್‌ ಗಳಿಸಿ ಡೆಲ್ಲಿ ಡೇರ್‌ಡೆವಿಲ್ಸ್‌ ವಿರುದ್ಧ ನಾಲ್ಕು ವಿಕೆಟ್‌ಗಳ ಗೆಲುವು ಸಾಧಿಸಿತ್ತು.

ಗೌತಮ್‌ ಗಂಭೀರ್‌(14), ಕಾಲಿನ್‌ ಡಿ ಗ್ರಾಂಡ್‌ಹೊಮ್ಮೆ(01), ರಾಬಿನ್‌ ಉತ್ತಪ್ಪ(04) ಔಟ್‌ ಆಗುವ ಮೂಲಕ ಆರಂಭಿಕ ಆಘಾತ ಎದುರಿಸಿತ್ತು. ನಂತರ ಬ್ಯಾಟ್‌ ಮಾಡಿದ ಯೂಸುಫ್‌ ಪಠಾಣ್‌(59), ಮನೀಷ್ ಪಾಂಡೆ(69*) ಉತ್ತಮ ಜತೆಯಾಟ ತಂಡದ ಗೆಲುವಿಗೆ ಕಾರಣವಾಯಿತು.  

ಡೆಲ್ಲಿ ಡೇರ್‌ಡೆವಿಲ್ಸ್‌ ಪರ: ಜಹೀರ್‌ ಖಾನ್‌ 2, ಪ್ಯಾಟ್‌ ಕಮಿನ್ಸ್‌ 2, ಕ್ರಿಸ್‌ ಮೋರಿಸ್‌ 1, ಅಮಿತ್‌ ಮಿಶ್ರಾ 1 ವಿಕೆಟ್‌ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT