ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲುಬಾಯಿ ರೋಗ ನಿರೋಧಕ ಲಸಿಕೆ: ಚಾಲನೆ

Last Updated 18 ಏಪ್ರಿಲ್ 2017, 5:22 IST
ಅಕ್ಷರ ಗಾತ್ರ
ಕಾರಟಗಿ: ಜಾನುವಾರುಗಳಿಗೆ ಕಾಲುಬಾಯಿ ರೋಗ ನಿರೋಧಕ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಶಾಸಕ ಶಿವರಾಜ್ ತಂಗಡಗಿ ಸೋಮವಾರ ಇಲ್ಲಿನ ಪಶು ಆಸ್ಪತ್ರೆಯಲ್ಲಿ ಚಾಲನೆ ನೀಡಿದರು.
 
ಬದಲಾಗುವ ವಾತಾವರಣಕ್ಕೆ ತಕ್ಕಂತೆ ಜಾನುವಾರುಗಳಲ್ಲಿ ಅನೇಕ ರೋಗಗಳು ಕಾಣಿಸಿಕೊಳ್ಳುತ್ತವೆ. ಬೇಸಿಗೆ ಸಮಯದಲ್ಲಿ ಕಾಲು, ಬಾಯಿ ರೋಗ ಕಾಣಿಸಿಕೊಳ್ಳುವುದು ಸಾಮಾನ್ಯ.  ನಿರೋಧಕ ಲಸಿಕೆ ಹಾಕಿಸುವುದರೊಂದಿಗೆ ಜಾನುವಾರುಗಳ ರಕ್ಷಣೆ ಮಾಡಬೇಕು ಎಂದು ತಂಗಡಗಿ ಹೇಳಿದರು.
 
ಪಶುಆಸ್ಪತ್ರೆ ಪ್ರಭಾರ ಸಹಾಯಕ ನಿರ್ದೇಶಕ ಡಾ.ಚನ್ನಬಸಪ್ಪ ಹಳ್ಳದ ಮಾತನಾಡಿ, ಮೇ 9ರವರೆಗೆ ಲಸಿಕೆ ಹಾಕುವ ಕಾರ್ಯಕ್ರಮ ನಡೆಯಲಿದೆ. ಲಸಿಕೆ ಹಾಕಲು 7 ತಂಡ ರಚಿಸಲಾಗಿದ್ದು, ತಂಡಗಳು ಮನೆ, ಮನೆಗೆ ಭೇಟಿ ನೀಡಿ ಲಸಿಕೆ ಹಾಕುವರು ಎಂದರು.
 
ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ಡಾ.ಮಲ್ಲಯ್ಯ, ವಿಶೇಷ ಎಪಿಎಂಸಿ ಅಧ್ಯಕ್ಷ ಶಶಿಧರಗೌಡ, ಉದ್ಯಮಿ ಕೆ.ಸಿದ್ದನಗೌಡ, ಬಾಪುಗೌಡ ಹುಳ್ಕಿಹಾಳ, ಡಾ.ಮಹೇಂದ್ರ, ಸಿಬ್ಬಂದಿ ಮಲ್ಕಪ್ಪ, ಕನಕಪ್ಪ, ಚಂದ್ರಕಾಂತ, ಅಮೃತ, ಗೋಣೆಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT