ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತಂತ್ರಜ್ಞಾನದಿಂದ ಪ್ರತಿಭೆಗೆ ಹಿನ್ನಡೆ’

Last Updated 18 ಏಪ್ರಿಲ್ 2017, 7:04 IST
ಅಕ್ಷರ ಗಾತ್ರ

ವಿಟ್ಲ: ಕೇಪು ಗ್ರಾಮದ ಮೈರ ದುರ್ಗಾ ರಂಗ ಮಂದಿರದಲ್ಲಿ ಕೇಪು-ಮೈರ ಶ್ರೀ ದುರ್ಗಾ ಮಿತ್ರ ವೃಂದದ ವಾರ್ಷಿ ಕೋತ್ಸವ, ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ನಡೆಯಿತು.ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಪ್ರೌಢಶಾಲೆ ಮುಖ್ಯೋಪಾಧ್ಯಾಯ ರಘು ಟಿ.ವೈ ಮಾತನಾಡಿ, ‘ವರ್ತಮಾನ ಕಾಲ ಘಟ್ಟ ಮಾನವನನ್ನು ದುಡಿಯದಂತೆ ಮಾಡುತ್ತವೆ. ಅವುಗಳನ್ನು ಅವಲಂಬಿ ಸುವಂತೆ ಮಾಡುತ್ತವೆ. ಯಂತ್ರಗ ಳೊಂದಿಗೆ ಪೈಪೋಟಿ ಎದುರಿಸುವ ಸ್ಥಿತಿ ನಿರ್ಮಿಸುತ್ತದೆ. ಆಧುನಿಕ ತಂತ್ರಜ್ಞಾ ನಗಳು ಪ್ರತಿಭೆಗಳನ್ನು ಕಮರಿಸುತ್ತವೆ. ಆದುದರಿಂದ ಅವುಗಳನ್ನು ಯೋಗ್ಯ ರೀತಿಯಲ್ಲಿ ಬಳಸಬೇಕು’ ಎಂದು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಗಳಾಗಿ ಪುತ್ತೂರು ಶಂಕರ್ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಸತ್ಯಶಂಕರ ಭಟ್ ಅವರು ಮಾತನಾಡಿ, ‘ಉನ್ನತವಾದ ಗುರಿ ಒಂದೇ ಇರಲಿ ಮತ್ತು ಹಲವು ಗುರಿಗ ಳನ್ನು ಇರಿಸಿ, ಮುನ್ನಡೆದಾಗ ಯಶಸ್ವಿ ಯಾಗಲು ಅಸಾಧ್ಯ. ಅನಾರೋಗ್ಯದಿಂದ ಬಳಲುತ್ತಿರುವ ಹರ್ಷಿತಾ ಅವರಿಗೆ ಕಂಪ್ಯೂಟರ್ ನೀಡುವುದಾಗಿ ಅವರು ಭರವಸೆ’ ನೀಡಿದರು.30 ವರ್ಷಗಳ ಕಾಲ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ, ಮಾಜಿ ಅಧ್ಯಕ್ಷ, ಸಹಕಾರಿ ಧುರೀಣ, ಧಾರ್ಮಿಕ ಮುಖಂಡ ಶ್ರೀನಿವಾಸ ರೈ ಕುಂಡಕೋಳಿ ಅವರನ್ನು ಸನ್ಮಾನಿಸಲಾಯಿತು.

ಅನಾರೋಗ್ಯದಿಂದ ಬಳಲುತ್ತಿರುವ ಹರ್ಷಿತಾ ಅವರಿಗೆ ಸಂಘದ ವತಿಯಿಂದ ₹10,800 ಧನಸಹಾಯ ಮಾಡಲಾ ಯಿತು. ಕೇಪು ಗ್ರಾಮದ ಪ್ರತಿಭಾನ್ವಿತ ರಾದ ಶ್ರೇಯ ಬಿ., ಚರಣ್ ಡಿ.ಎಸ್., ಶ್ರೀಪ್ರಿಯ ಕೆ., ಶ್ರಾವ್ಯಾ, ಚೈತ್ರಾ ಕೆ.ಟಿ., ವಿನಯಶಂಕರ ಉಪಾಧ್ಯಾಯ, ಸುಶ್ಮಿತಾ ಕೆ., ಭರತ್ ಎ.ಕೆ., ದೀಕ್ಷಾ ಜೋಗಿ, ಗಾಯತ್ರಿ ಕೆ.ಎಸ್., ಶಿವಪ್ರಸಾದ್, ಕ್ಷಿತಿಜ್ ರೈ ಕೆ., ಶ್ರುತಿ ಕೆ.ಆರ್., ತೇಜಸ್ ಎ.ಕೆ., ಪ್ರತೀಕ್, ಅಭಿಷೇಕ್ ಎಂ., ಯಶಸ್, ಬಿಪಿನ್ ಕೆ., ಪವನ್ ಕುಮಾರ್ ಕೆ.ಎಸ್., ಅವರನ್ನು ಸನ್ಮಾನಿಸಲಾಯಿತು.

ಕೇಪು ಗ್ರಾ. ಪಂ. ಅಧ್ಯಕ್ಷ ಕೆ. ತಾರಾ ನಾಥ ಆಳ್ವ ಮದಕ, ಪುರೋಹಿತ ಬಾಲಕೃಷ್ಣ ಕಾರಂತ ಎರುಂಬು, ಕೇಪು ಗ್ರಾ.ಪಂ.ಸದಸ್ಯರಾದ ನಿರಂಜನ ಕಲ್ಲ ಪಾಪು, ದಿವ್ಯಾ ಮೈರ, ವೃಂದದ ಗೌರ ವಾಧ್ಯಕ್ಷ ಜಗಜ್ಜೀವನರಾಂ  ಶೆಟ್ಟಿ, ಉಪಾ ಧ್ಯಕ್ಷ ಪುರುಷೋತ್ತಮ ಗೌಡ ಕಲ್ಲಂಗಳ, ಗಿರೀಶ್ ಕಲ್ಲಪಾಪು, ಉಮೇಶ್ ಕಲ್ಲಪಾಪು, ಜತೆಕಾರ್ಯದರ್ಶಿ ರಾಜೇಶ್ ಮೈರ, ಸತೀಶ್ ಕೇಪು, ದೀಕ್ಷಿತ್ ಮೈರ, ಸಾಂಸ್ಕೃತಿಕ ಕಾರ್ಯದರ್ಶಿ ಸಂತೋಷ್ ಕರವೀರ, ಸೇಸಪ್ಪ ಮಾಸ್ಟರ್ ಕಲ್ಲಪಾಪು, ಅಶೋಕ ಕರವೀರ, ಸಂಘಟನ ಕಾರ್ಯ ದರ್ಶಿ ಬಾಲಕೃಷ್ಣ ಪೆಲತ್ತಡಿ ಕೇಪು, ಭರತ್ ಮೈರ, ಬಾಲಕೃಷ್ಣ ಮೈರ, ಮಿಥುನ್ ಮೈರ, ರಘುನಾಥ ಮೈರ, ಸಿದ್ಧೀಕ್ ಸಿ.ಎಂ., ಚಿದಾನಂದ, ಶೈಲೇಶ್ ಅಮೈ, ಪದ್ಮನಾಭ ಕಲ್ಲಂಗಳ, ಭರತ್ ಎ.ಕೆ., ಸಂದೇಶ್, ಶ್ರೇಯಸ್, ಪ್ರವೀಣ ಶೆಟ್ಟಿ, ಮಾಧವ ಮೈರ, ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ರೂಪೇಶ್ ರೈ ಅಳಿಕೆಗುತ್ತು, ಗೋವಿಂದರಾಯ ಶೆಣೈ ಅಡ್ಯನಡ್ಕ, ಪ್ರಕಾಶ್ ಶೆಟ್ಟಿ ಕಲ್ಲಂಗಳಗುತ್ತು, ರಾಮ ಚಂದ್ರ ಉಳಯ, ರಾಜಶೇಖರ ರೈ ತಾಳಿ ಪಡ್ಪು, ವಿಜಯ ಕುಮಾರ್ ಮಂಗ ಳೂರು, ಮೋನಪ್ಪ ಕುಲಾಲ್ ಇದ್ದರು.

ವೃಂದದ ಅಧ್ಯಕ್ಷ ಅಶೋಕ ಎ. ಇರಾಮೂಲೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಶೀನ ನಾಯ್ಕ ಕಲ್ಲಪಾಪು ವರದಿ ಮಂಡಿಸಿದರು. ಕೋಶಾಧಿಕಾರಿ ಪುರುಷೋತ್ತಮ್ ಮೈರ ಸಮ್ಮಾನ ಪತ್ರ ವಾಚಿಸಿದರು. ಮಹಮ್ಮದ್ ಹಾರೀಸ್ ಮೈರ ಪ್ರತಿಭಾನ್ವಿತರ ಪಟ್ಟಿ ವಾಚಿಸಿದರು. ತೇಜಸ್ ಎ.ಕೆ. ಆಶಯಗೀತೆ ಹಾಡಿದರು. ಉಪಾಧ್ಯಕ್ಷ ರಾಜೇಶ್ ಕರವೀರ ವಂದಿ ಸಿದರು. ಬಾಲಕೃಷ್ಣ ಶೆಟ್ಟಿ ಬೇಂಗ್ರೋಡಿ, ಸುರೇಶ್ ಕೋಡಂದೂರು ಕಾರ್ಯಕ್ರಮ ನಿರ್ವಹಿಸಿದರು. ಶಾರದಾ ಕಲಾ ಆರ್ಟ್ಸ್‌್ ಅವರಿಂದ ‘ಸುದ್ದಿ ತಿಕ್ಕ್‍ಂಡ’ ಎಂಬ ನಾಟಕ ಪ್ರದರ್ಶನವಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT