ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲತಿ ನದಿ ಮರಳು ಕ್ವಾರಿಗೆ ಚಾಲನೆ

Last Updated 20 ಏಪ್ರಿಲ್ 2017, 4:57 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಹೊಸ ಮರಳು ನೀತಿ ಅನ್ವಯ ಬುಧವಾರ ತಾಲ್ಲೂಕಿನ ಬಗ್ಗೊಡಿಗೆ ಗ್ರಾಮದ  ಮಾಲತಿ ನದಿಯಲ್ಲಿನ ಮರಳು ಕ್ವಾರಿಗೆ ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್‌  ಚಾಲನೆ ನೀಡಿದರು.ಗ್ರಾಹಕರಿಗೆ ಸುಲಭ ದರದಲ್ಲಿ ಮರಳು ಲಭ್ಯವಾಗುವಂತೆ ಕ್ವಾರಿಯ ನಿರ್ವಹಣೆ ಅಗತ್ಯವಾಗಿದೆ. ಜಿಲ್ಲೆಯ ಹೊರ ಭಾಗಕ್ಕೆ ಮರಳು ಪೂರೈಕೆ ಆಗುವುದು ಕಂಡು ಬಂದರೆ ಕ್ವಾರಿ ಹರಾಜು ಗುತ್ತಿಗೆ ಪಡೆದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಲೋಕೇಶ್‌ ಎಚ್ಚರಿಸಿದರು.

‘ಮರಳು ಕ್ವಾರಿ ಪ್ರದೇಶದಲ್ಲಿ ಜಿಪಿಎಸ್‌ ಯಂತ್ರದ ಅಳವಡಿಕೆ ಕಡ್ಡಾಯ. ಮರಳು ಸಾಗಣೆ ಪ್ರಮಾಣ ಗುರುತಿಸಿ ಪರಿಸರಕ್ಕೆ ಹಾನಿ ಆಗದಂತೆ ಎಚ್ಚರವಹಿಸಿ. ಪರಿಸರ ಸಂರಕ್ಷಣಾ ಕ್ರಮಗಳನ್ನು ತಪ್ಪದೇ ಪಾಲಿಸಿ’ ಸೂಚಿಸಿದರು.ಅನಗತ್ಯ ವಿವಾದಕ್ಕೆ ಕಾರಣವಾಗದಂತೆ ಎಚ್ಚರ ವಹಿಸಬೇಕು. ನಿಯಮ, ಷರತ್ತು ಮೀರಿ ಕ್ವಾರಿ ನಿರ್ವಹಿಸುವುದು ಕಂಡುಬಂದರೆ ಸಂಬಂಧಪಟ್ಟವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದುಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.

ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಹಿರಿಯ ಭೂ  ವಿಜ್ಞಾನಿಗಳಾದ ರಶ್ಮಿ, ವಿಂಧ್ಯಾ, ಶಿರಸ್ತೆದಾರ್‌ ಅರಸು, ಆಗುಂಬೆ ಹೋಬಳಿ ಕಂದಾಯ ನಿರೀಕ್ಷಕ ಸುಧೀರ್‌, ಕಾಂಗ್ರೆಸ್‌ ಮುಖಂಡ ಬಾಳೇಹಳ್ಳಿ ಪ್ರಭಾಕರ್‌, ಹೆಗ್ಗೋಡು ಗ್ರಾಮ ಪಂಚಾಯ್ತಿ ಸದಸ್ಯ ಹರೀಶ್‌, ಗುತ್ತಿಗೆದಾರ ರಾಘವೇಂದ್ರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT