ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ಮುನ್ನುಡಿ ಆಗಲಿ

Last Updated 20 ಏಪ್ರಿಲ್ 2017, 7:55 IST
ಅಕ್ಷರ ಗಾತ್ರ

ಮಂಗಳೂರು: ‘ಕರಾವಳಿ ಭಾಗದಲ್ಲಿ ಎಲ್ಲವೂ ಇದೆ. ಆದರೆ, ಕ್ರೀಡಾ ಕ್ಷೇತ್ರದಲ್ಲಿ ಕರಾವಳಿಯ ಸಾಧನೆ ಹೇಳಿಕೊಳ್ಳು ವಂತಿಲ್ಲ. ಇಂಥ ಸಂದರ್ಭದಲ್ಲಿ ಆರಂಭ ವಾಗಿರುವ ಕರಾವಳಿ ಕ್ರಿಕೆಟ್ ಅಕಾಡೆಮಿ, ಕ್ರೀಡಾ ಕ್ಷೇತ್ರದ ಪ್ರಗತಿಗೆ ಮುನ್ನುಡಿ ಆಗಲಿ’ ಎಂದು ಮೇಯರ್ ಕವಿತಾ ಸನಿಲ್ ಆಶಿಸಿದರು.ನಗರದ ಹಂಪನಕಟ್ಟೆಯ ಮಂಗ ಳೂರು ವಿಶ್ವವಿದ್ಯಾಲಯ ಕಾಲೇಜಿನ ಮೈದಾನದಲ್ಲಿ ಬುಧವಾರ ಕರಾವಳಿ ಕ್ರಿಕೆಟ್ ಅಕಾಡೆಮಿ ಉದ್ಘಾಟಿಸಿ ಅವರು ಮಾತನಾಡಿದರು.

‘ಅಕಾಡೆಮಿಗಳ ಆರಂಭದಿಂದ ಈ ಭಾಗದ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ದೊರೆಯಲಿದೆ. ಕ್ರೀಡೆಯಲ್ಲೂ ಮಂಗ ಳೂರು ಹೆಸರು ಮಾಡು ವಂತಾಗಬೇಕು’ ಎಂದರು.
ಪಾಲಿಕೆ ಸದಸ್ಯ ಎ.ಸಿ. ವಿನಯರಾಜ್ ಮಾತನಾಡಿ, ‘ಕ್ರೀಡಾಪಟುವಾದ ಮೇಯರ್ ಅವರಿಂದಲೇ ಅಕಾಡೆಮಿ ಉದ್ಘಾಟಿಸಿರುವುದು ಅರ್ಥಪೂರ್ಣ ವಾಗಿದೆ. ಮಕ್ಕಳು ಹೆಚ್ಚು ಅಂಕಗಳಿಸಿ, ಎಂಜಿನಿಯರ್, ಡಾಕ್ಟರ್ ಆಗಬೇಕು ಎನ್ನುವ ಬಯಕೆ ಹೊಂದಿರುವ ಪಾಲಕರೇ ಹೆಚ್ಚಾಗಿದ್ದಾರೆ. ಅಲ್ಲದೇ ಈ ಭಾಗದಲ್ಲಿ ತರಬೇತಿ ಸಂಸ್ಥೆಗಳ ಕೊರತೆಯಿಂದ ಕ್ರೀಡಾ ಪ್ರತಿಭೆಗಳು ಬೆಳಕಿಗೆ ಬರಲು ಸಾಧ್ಯವಾಗುತ್ತಿಲ್ಲ. ಈ ಕೊರತೆಯನ್ನು ಈ ಅಕಾಡೆಮಿ ನೀಗಿಸುವ ವಿಶ್ವಾಸವಿದೆ’ ಎಂದು ಹೇಳಿದರು.

ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯ ಪ್ರಸನ್ನಕುಮಾರ ರೈ, ‘ಕ್ರಿಕೆಟ್ ವೈಯಕ್ತಿಕ ಆಟವಲ್ಲ. ಸಂಘಟಿತ ಆಟ. ಕ್ರಿಕೆಟ್ ದೈಹಿಕ ಸಾಮರ್ಥ್ಯದ ಜತೆಗೆ ಒಳ್ಳೆಯ ಮನುಷ್ಯರನ್ನು ರೂಪಿಸುತ್ತದೆ. ತರಬೇತಿಯನ್ನು ಗಂಭೀರವಾಗಿ ತೆಗೆದು ಕೊಂಡು ಉತ್ತಮ ಸಾಧನೆ ಮಾಡಬೇಕು’ ಎಂದು ಸಲಹೆ ನೀಡಿದರು.ಸಿಂಡಿಕೇಟ್ ಸದಸ್ಯರಾದ ಹರೀಶ್ ಆಚಾರ್, ಮೋಹನ್ ಚಂದ್ರ ನಂಬಿಯಾರ್, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮಂಗಳೂರು ವಲಯದ ಅಧ್ಯಕ್ಷ ರತನ್ ಕುಮಾರ್, ಸಂಸ್ಥೆ ಅಧ್ಯಕ್ಷೆ ಶಾಂತಿ ಮೋಹನ್ ವೇದಿಕೆಯಲ್ಲಿದ್ದರು. ಕಾಂಗ್ರೆಸ್ ಮುಖಂಡರಾದ ಪಿ.ವಿ. ಮೋಹನ್, ಬಾಲಕೃಷ್ಣ ಶೆಟ್ಟಿ, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ ಸಬಿತಾ ಮಿಸ್ಕಿತ್, ಅಕಾಡೆಮಿ ಕಾರ್ಯದರ್ಶಿ ಸಂತೋಷ್ ಮಿಸ್ಕಿತ್ ಪಾಲ್ಗೊಂಡಿದ್ದರು.ತರಬೇತುದಾರರಾದ ಶ್ರೀಲಂಕಾದ ಸಂಪತ್ ಪಿರೇರಾ, ಕೇರಳದ ಶ್ರೀಕಾಂತ ಅವರನ್ನು ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT