ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಗ

Last Updated 20 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ನಟ ಮಿತ್ರ ಅವರು ನಿರ್ಮಿಸಿರುವ, ಪಿ.ಸಿ.ಶೇಖರ್ ನಿರ್ದೇಶನದ ‘ರಾಗ’ ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. ಮಿತ್ರ ಈ ಚಿತ್ರದಲ್ಲಿ ಕಣ್ಣಿಲ್ಲದವನ ಪಾತ್ರ ನಿರ್ವಹಿಸಿದ್ದಾರೆ. ಭಾಮ, ಅವಿನಾಶ್, ಜೈ ಜಗದೀಶ್, ರಮೇಶ್ ಭಟ್, ಸಿಹಿಕಹಿ ಚಂದ್ರು, ಸಿಹಿಕಹಿ ಗೀತಾ, ಕಡ್ಡಿಪುಡಿ ಚಂದ್ರು, ರೂಪಿಕಾ, ಚಂದನ್ ಶರ್ಮ, ನಂದಿನಿ ತಾರಾಬಳಗದಲ್ಲಿದ್ದಾರೆ. ವೈದಿ ಛಾಯಾಗ್ರಹಣ, ಸರವಣನ್ ಸಂಕಲನ ಹಾಗೂ ಅರ್ಜುನ್ ಜನ್ಯ ಸಂಗೀತ ಚಿತ್ರಕ್ಕಿದೆ.

ಪಾರ್ಟ್ 2
ಜೆ.ವಿ.ಎಸ್. ಶ್ರೀನಿವಾಸ್ ರಘುರಾಮಕೃಷ್ಣ ನಿರ್ಮಿಸಿರುವ ಹಾರರ್ ಚಿತ್ರ ‘ಪಾರ್ಟ್ 2’ ಇಂದು ತೆರೆಕಾಣುತ್ತಿದೆ. ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ ಬುದ್ಧದೇವ್. ಚಿತ್ರಕ್ಕೆ ಎಲ್.ಆರ್. ಜೀವಾ ಸಂಭಾಷಣೆ, ಜೀವಾ ಆಂಟನಿ ಛಾಯಾಗ್ರಹಣ, ರಾಜ್ ಕಿಶೋರ್‌ರಾವ್ ಸಂಗೀತ, ಮಹೇಶ್ ಕಲೆ, ಅಲ್ಟಿಮೇಟ್ ಶಿವು ಸಾಹಸ, ಎಸ್.ಎಂ. ಕೃಷ್ಣ ಸಂಕಲನವಿದೆ. ತಾರಾಗಣದಲ್ಲಿ ಗೋವಿಂದು, ಪಲ್ಲವಿ, ವೆಂಕಟೇಶ್, ಲೋಹಿತ್, ಜೀವನ್ ಶ್ರೀಧರ್ ಇದ್ದಾರೆ.

ಇಂಜಿನಿಯರ್ಸ್ 
ಅಮರೇಂದ್ರ ಪ್ರಭು ಅವರು ನಿರ್ಮಿಸಿರುವ ‘ಇಂಜಿನಿಯರ್ಸ್‘ ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. ವಿನಯ್ ರತ್ನಸಿದ್ದಿ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ರವಿ ದೇವ್ ಸಂಗೀತ ನೀಡಿದ್ದಾರೆ. ದೇವು ಛಾಯಾಗ್ರಹಣ ಹಾಗೂ ಶಿವರಾಜ ಮೇಹು ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ವಿನಯ್ ರತ್ನಸಿದ್ದಿ, ಶಮಾ ತಾಜ್, ಚಂದನ, ರಕ್ಷಾ ಶೆಣೈ, ಕಾವ್ಯ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT