ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತೃಪ್ತಿ ಜೀವನಕ್ಕೆ ಮಠಗಳ ಕೊಡುಗೆ ಅಪಾರ

Last Updated 21 ಏಪ್ರಿಲ್ 2017, 5:39 IST
ಅಕ್ಷರ ಗಾತ್ರ

ಸೇಡಂ: ‘ಮಾನವ ತನ್ನ ಬದುಕಿನಲ್ಲಿ ನಿರಾಶೆಯಾದಾಗ ಮಠಗಳ ಮೊರೆ ಹೋಗಿ ಸ್ವಾಮೀಜಿಯವರಿಂದ ಆಶೀರ್ವಾದ ಪಡೆದು ಸಂತೃಪ್ತಿಯ ಜೀವನ ನಡೆಸುತ್ತಿದ್ದಾನೆ’ ಎಂದು ಅಬ್ಬೆತುಮಕೂರಿನ ಗಂಗಾಧರ ಶಿವಾಚಾರ್ಯರು ತಿಳಿಸಿದರು.ತಾಲ್ಲೂಕಿನ ಬಿಬ್ಬಳ್ಳಿ ಗ್ರಾಮದಲ್ಲಿ ಗುರುವಾರ ನಡೆದ ಗ್ರಾಮದೇವತೆ ದೇವಮ್ಮ ದೇವಸ್ಥಾನದ ಉದ್ಘಾಟನೆ ಹಾಗೂ ಕಳಸಾರೋಹಣ, ಧರ್ಮಸಭೆಯಲ್ಲಿ ಅವರು ಮಾತನಾಡಿದರು.

‘ಬಿಬ್ಬಳ್ಳಿ ಗ್ರಾಮಸ್ಥರು ಜಾತಿ ಭೇದ ಮರೆತು ಧಾರ್ಮಿಕ ಐಕ್ಯತೆಯ ಸಂದೇಶ ಸಾರುವ ದೇವಮ್ಮ ದೇವಸ್ಥಾನ ನಿರ್ಮಿಸಿರುವುದು ಅತ್ಯಂತ ಶ್ಲಾಘನೀಯ. ಮುಂಬರುವ ದಿನಗಳಲ್ಲಿ ಗ್ರಾಮದಲ್ಲಿ ಶಾಂತಿ, ಸಮಾನತೆ ಹೆಚ್ಚುತ್ತದೆ’ ಎಂದರು.ಕೊತ್ತಲ ಬಸವೇಶ್ವರ ದೇವಾಲಯದ ಸದಾಶಿವ ಸ್ವಾಮೀಜಿ ಮಾತನಾಡಿ, ‘ಗ್ರಾಮೀಣ ಭಾಗದ ಜನರು ಗ್ರಾಮ ದೇವತೆಗೆ ಪ್ರಾಣಿ ಬಲಿ ಕೊಡುವುದನ್ನು ನಿಲ್ಲಿಸಿ, ಉತ್ತಮ ಚಿಂತನೆ ಅಳವಡಿಸಿಕೊಳ್ಳಬೇಕು. ಇದರಿಂದ ಪ್ರತಿಯೊಬ್ಬರ ಕುಟುಂಬದಲ್ಲೂ ನೆಮ್ಮದಿ ನೆಲೆಸುತ್ತದೆ’ ಎಂದರು.

ಕಾಡಾ ಅಧ್ಯಕ್ಷ ಮಹಾಂತಪ್ಪ ಸಂಗಾವಿ, ಶಿವಶರಣಪ್ಪ ಪಾಟೀಲ ತೆಲ್ಕೂರ ಮಾತನಾಡಿದರು. ಕರ್ನಾಟಕ ತೋಟಗಾರಿಕೆ ಮಹಾಮಂಡಳದ ಘಟಕದ ಅಧ್ಯಕ್ಷ ಬಸವರಾಜ ಪಾಟೀಲ ಊಡಗಿ, ಹಾಲಪ್ಪಯ್ಯ ವಿರಕ್ತಮಠದ ಪಂಚಾಕ್ಷರಿ ಸ್ವಾಮೀಜಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ್ವರರಾವ ಮಾಲಿಪಾಟೀಲ, ಗ್ರಾಮ ಪಂಚಾಯಿತಿ ಸದಸ್ಯ ಮಲ್ಲಿಕಾರ್ಜುನ ಸ್ವಾಮಿ, ಸುದರ್ಶನರೆಡ್ಡಿ ಪಾಟೀಲ, ಚೆನ್ನಬಸ್ಸಪ್ಪ ಹಾಗರಗಿ, ವಿಶ್ವನಾಥ ಪಾಟೀಲ, ಕರೆಪ್ಪ ಪಿಲ್ಲಿ, ರವಿಗೌಡ, ಶಿವಯ್ಯ ಸ್ವಾಮಿ, ಮಲ್ಲಿಕಾರ್ಜುನ ಶಾಸ್ತ್ರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT