ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಕೊಳವೆ ಬಾವಿ ನೀರು ಪಡೆಯಲು ಕ್ರಮ

Last Updated 21 ಏಪ್ರಿಲ್ 2017, 7:14 IST
ಅಕ್ಷರ ಗಾತ್ರ

ಬಸವನಬಾಗೇವಾಡಿ: ತಾಲ್ಲೂಕಿನ ಬಹು­­ತೇಕ ಗ್ರಾಮಗಳಲ್ಲಿ ಬಹುಹಳ್ಳಿ ಕುಡಿ­ಯುವ ನೀರಿನ ವ್ಯವಸ್ಥೆ ಇರು­ವುದರಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿಲ್ಲ ಎಂದು ಜಿಲ್ಲಾ ಪಂಚಾಯ್ತಿ ಸಹಾಯಕ ಕಾರ್ಯನಿರ್ವಾಹಕ ಎಂಜನಿ­ಯರ್‌ (ನೀರು ಸರಬರಾಜು ಘಟಕ) ಪಿ.ಎಚ್‌.ಬಂಡಿ ಹೇಳಿದರು.ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಭವನದಲ್ಲಿ ಬುಧವಾರ ಜರುಗಿದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು,  ಮೇ 15ರ ನಂತರ ಸ್ವಲ್ಪ ಮಟ್ಟಿಗೆ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಮುಂಜಾಗ್ರತೆಗಾಗಿ ಜಿಲ್ಲಾ­ಧಿಕಾರಿ ಹಾಗೂ ಜಿಲ್ಲಾ ಪಂಚಾಯ್ತಿ ಸಿಇಓ ಅವರೊಂದಿಗೆ ಚಿರ್ಚಿಸಲಾಗಿದೆ. ನೀರಿನ ಸಮಸ್ಯೆ ಕಂಡುಬಂದರೆ ಖಾಸಗಿ ವ್ಯಕ್ತಿಗಳ ಕೊಳವೆ ಬಾವಿ ಮಾಲೀಕರಿಗೆ ತಿಂಗಳಿಗೆ ₹18 ಸಾವಿರ ನೀಡಿ ನೀರು ಪಡೆದು­ಕೊಳ್ಳುವಂತೆ ಸೂಚನೆ ನೀಡಿದ್ದಾರೆ ಎಂದು ಹೇಳಿದರು.

ತಾಲ್ಲೂಕಿನ ದಿಂಡವಾರ ಹಾಗೂ ಕಾಮನಕೇರಿ ಗ್ರಾಮದಲ್ಲಿ ಸ್ವಲ್ಪ ಮಟ್ಟಿನ ನೀರಿನ ಸಮಸ್ಯೆ ಇತ್ತು. ಖಾಸಗಿ ವ್ಯಕ್ತಿಗಳ ಕೊಳವೆಬಾವಿಗಳ ಮೂಲಕ ನೀರು ಸರಬರಾಜು ಮಾಡುವ ವ್ಯವಸ್ಥೆ ಮಾಡಿದ ಕಾರಣ ಆ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಂಟಾಗಿಲ್ಲ ಎಂದು ಹೇಳಿದರು.ತಾಲ್ಲೂಕಿನಲ್ಲಿ ಈಗಾಗಲೇ 32 ಕೊಳವೆಬಾವಿ ಕೊರೆಸಲಾಗಿದೆ. ಅದರಲ್ಲಿ 11 ಕೊಳವೆ ಬಾವಿ ವಿಫಲವಾಗಿವೆ. ಮೇ 15ರ ನಂತರ ಇಂಗಳೇಶ್ವರ ಬಹುಹಳ್ಳಿ ಕುಡಿಯುವ ನೀರಿನ ಯೋಜನೆಯನ್ನು ಪ್ರಾಯೋಗಿಕವಾಗಿ ಚಾಲನೆ ಮಾಡಲಾ­ಗುವುದು ಎಂದು ಹೇಳಿದರು.

ಬಸವನಬಾಗೇವಾಡಿ, ಹೂವಿನ­ಹಿಪ್ಪರಗಿ, ಮನಗೂಳಿ, ನಿಡಗುಂದಿ, ಕೊಲ್ಹಾರ­ದಲ್ಲಿ ಮೇವು ಬ್ಯಾಂಕ್‌ ಆರಂಭಿಸಲಾಗಿದೆ. ₹ 2 ಕ್ಕೆ ಒಂದು ಕೆ.ಜಿ ಮೇವನ್ನು ರೈತರಿಗೆ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದು ಪಶು­ಸಂಗೋ­ಪನಾ ಇಲಾಖೆಯ ಸಿಬ್ಬಂದಿ ತಿಳಿಸಿದರು.ಇಂಗಳೇಶ್ವರದಲ್ಲಿ ಕಳಪೆ ಗೊಬ್ಬರ ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳಿಗೆ ದಂಡ ವಿಧಿಸಲಾಗಿದೆ. ಅಲ್ಲದೆ ನಿಡ­ಗುಂದಿ­ಯಲ್ಲಿ ಗೊಬ್ಬರ ಮಾರಾಟ­ಗಾ­ರ­ರೊಬ್ಬರು ಕಳಪೆ  ಬೀಜ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದ ತಕ್ಷಣ ಅವರಿಗೂ ದಂಡ ಹಾಕಿ ನೋಟಿಸ್‌ ನೀಡಲಾಗಿದೆ ಎಂದು  ಸಹಾಯಕ ಕೃಷಿ ನಿರ್ದೇಶಕರು ಹೇಳಿದರು.

ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಸ್‌.ರಾಠೋಡ ಮಾತ­ನಾಡಿ, ತಾಲ್ಲೂಕಿನಲ್ಲಿ ಎಷ್ಟು ಅಂಗನ­ವಾಡಿ ಕಟ್ಟಡಗಳ ದುರಸ್ತಿಯಲ್ಲಿವೆ ಎಂಬ ಮಾಹಿತಿ ಇದೂವರೆಗೂ ನೀಡಿಲ್ಲ ಎಂದು ಸಿಡಿಪಿಓ ಇಲಾಖೆಯ ಸಿಬ್ಬಂದಿಗೆ ಪ್ರಶ್ನಿ­ಸಿದಾಗ ಎರಡು ದಿನಗಳಲ್ಲಿ ಮಾಹಿತಿ ನೀಡುವುದಾಗಿ ಸಿಬ್ಬಂದಿ ಬಿರಾದಾರ ತಿಳಿಸಿದರು. ಸಭೆಯಲ್ಲಿ ವಿವಿಧ ಇಲಾ­ಖೆಯ ಪ್ರಗತಿ ಪರಿಶೀಲನೆ ನಡೆಯಿತು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಬೇಬಿ ಇಂಗಳೇಶ್ವರ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT