ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖರಗ್‌ಪುರ: ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕೇರಳದ ಐಐಟಿ ವಿದ್ಯಾರ್ಥಿ ಪತ್ತೆ

Last Updated 22 ಏಪ್ರಿಲ್ 2017, 11:05 IST
ಅಕ್ಷರ ಗಾತ್ರ

ಖರಗ್‌ಪುರ: ಪಶ್ಚಿಮ ಬಂಗಾಳದ ಮಿಡ್ನಾಪುರ ಜಿಲ್ಲೆಯ ಖರಗ್‌ಪುರದಲ್ಲಿ ಐಐಟಿಯ ನಾಲ್ಕನೇ ವರ್ಷದ ವಿದ್ಯಾರ್ಥಿ ಕೊಠಡಿಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಏರೋಸ್ಪೇಸ್‌ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ 21 ವರ್ಷದ ಎನ್‌. ನಿಧಿನ್‌ ಕೇರಳ ಮೂಲದ ವಿದ್ಯಾರ್ಥಿ. ವಿದ್ಯಾರ್ಥಿನಿಲಯದ ನೆಲ ಮಹಡಿಯ ಬಿ ‘ಬ್ಲಾಕ್‌’ನ ನೆಹರೂ ಹಾಲ್‌ನ ಕೊಠಡಿಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಶನಿವಾರ ಶವ ಪತ್ತೆಯಾಗಿದೆ. 

ವಿದ್ಯಾರ್ಥಿ ಬೆಳಿಗ್ಗೆ ಕೊಠಡಿಯಿಂದ ಹೊರಗೆ ಬಾರದೇ ಇರುವುದನ್ನು ಗಮನಿಸಿ ಸ್ನೇಹಿತರು ನಿಲಯದ ಮೇಲ್ವಿಚಾರಕರ ಗಮನಕ್ಕೆ ತಂದಿದ್ದಾರೆ. ಪೊಲೀಸರು ಕೊಠಡಿಯ ಬಾಗಿಲು ಮುರಿದು ಶವವನ್ನು ಹೊರ ತೆಗೆದಿದ್ದಾರೆ.

ವಿದ್ಯಾರ್ಥಿಯ ದೇಹವನ್ನು ಶವ ಪರೀಕ್ಷೆಗೆ ಕಳುಹಿಸಲಾಗಿದೆ. ‘ಡೆತ್‌ನೋಟ್’ ಇತ್ಯಾದಿ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಒಂದು ವರ್ಷದಲ್ಲಿ ಐಐಟಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡ ಮೂರನೇ ಪ್ರಕರಣ ಇದಾಗಿದೆ. ಜ. 16ರಂದು ಲೋಕೇಶ್‌ ಮೀನಾ, ಮಾರ್ಚ್‌ 30ರಂದು ಸಾನಾ ಶ್ರೀ ರಾಜ್‌ ಈ ಇಬ್ಬರೂ ವಿದ್ಯಾರ್ಥಿಗಳು ರೈಲು ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT