ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಂತರ್ಜಲ ಹೆಚ್ಚಳಕ್ಕೆ ಇಂಗುಗುಂಡಿ ನಿರ್ಮಿಸಿ’

Last Updated 23 ಏಪ್ರಿಲ್ 2017, 10:55 IST
ಅಕ್ಷರ ಗಾತ್ರ

ಚಾಮರಾಜನಗರ: ‘ಅಂತರ್ಜಲಮಟ್ಟ ಹೆಚ್ಚಿಸಲು ಇಂಗುಗುಂಡಿ ಸಹಕಾರಿಯಾ ಗಿದ್ದು, ರೈತರು ಈ ವಿಧಾನ ಅನುಸರಿಸ ಬೇಕು’ ಎಂದು ಮಂಗಳೂರು ದಕ್ಷಿಣ ರೋಟರಿ ಸದಸ್ಯ ಕೆ.ಎಸ್. ಚಾಕೋ ಸಲಹೆ ನೀಡಿದರು.ನಗರದ ಮಹಾಮನೆಯಲ್ಲಿ ಶನಿವಾರ ರೋಟರಿ ಸಂಸ್ಥೆ ಮತ್ತು ರೋಟರಿ ಸಿಲ್ಕ್‌ಸಿಟಿಯಿಂದ ನಡೆದ ಮಳೆ ನೀರು ಸಂಗ್ರಹದ ಉಪಯುಕ್ತತೆ ಕುರಿತ ವಿಶೇಷ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಂತರ್ಜಲಮಟ್ಟದ ಕುಸಿತದಿಂದ ಅಸ್ತಿತ್ವ ಕಳೆದುಕೊಳ್ಳುತ್ತಿರುವ ಕೊಳವೆ ಬಾವಿಗಳ ಪಕ್ಕದಲ್ಲಿ ಇಂಗುಗುಂಡಿ ನಿರ್ಮಿಸುವುದು ಒಳಿತು. ಇದರಿಂದ ಹೆಚ್ಚು ಪ್ರಯೋಜನಕಾರಿಯಾಗಲಿದೆ. ರೈತರು ಹೊಲ, ಗದ್ದೆ ಹಾಗೂ ಮನೆ ಗಳಲ್ಲೂ ಈ ವಿಧಾನ ಅಳವಡಿಸಿ ಕೊಳ್ಳುವುದರಿಂದ ಅಂತರ್ಜಲಮಟ್ಟ ಹೆಚ್ಚಲಿದೆ ಎಂದು ತಿಳಿಸಿದರು.
ರೈತರು ತಮ್ಮ ಜಮೀನಿನ ಕೊಳವೆ ಬಾವಿಯ ಸುತ್ತ 15*15 ಅಡಿ ಇಂಗು ಗುಂಡಿ ನಿರ್ಮಿಸಬೇಕು.

ಕೊಳವೆಬಾವಿಗೆ ಅಳವಡಿಸಿರುವ ಕೇಸಿಂಗ್ ಪೈಪ್‌ಗೆ ಅಲ್ಲಲ್ಲಿ 3 ಮಿಲಿ ಮೀ. ವ್ಯಾಸದಲ್ಲಿ ರಂಧ್ರ ಮಾಡಬೇಕು. ರಂಧ್ರಗಳ ಸುತ್ತ ಕೇಸಿಂಗ್ ಪೈಪ್‌ಗೆ ಅಕ್ವಾ ಮೆಷ್, ನೈಲಾನ್ ಮೆಷ್, ಸ್ಯಾಂಡ್ ಫಿಲ್ಟರ್ ಅಳವಡಿಸಬೇಕು ಎಂದು ತಿಳಿಸಿದರು.5 ಅಡಿ ಆಳದವರೆಗೆ ದಪ್ಪ ಕಲ್ಲು (ಬೋಡ್‌ರಸ್), ಅದರ ಮೇಲೆ 40 ಎಂ.ಎಂ ಜಲ್ಲಿ, ಅದರ ಮೇಲೆ 20 ಎಂ. ಎಂ ಜಲ್ಲಿ ಹಾಗೂ ಇದ್ದಿಲು ಹಾಕಬೇಕು. ನಂತರ ಹೈಡೆನ್ಸಿಟಿ ಪಾಲಿಥಿನ್ ಮ್ಯಾಟ್ ಹಾಸಬೇಕು. ಇದರ ಮೇಲ್ಭಾಗದಲ್ಲಿ 3 ಅಡಿ ದಪ್ಪ ಮರಳು ಮತ್ತು 2 ಅಡಿ ಸಣ್ಣ ಮರಳನ್ನು ಹರಡಬೇಕು.

ಇಂಗು ಗುಂಡಿಯ ಸುತ್ತಲೂ ಸಿಮೆಂಟ್‌ನಿಂದ ತಡೆಗೋಡೆಕಟ್ಟಿ ಮಳೆ ನೀರು ಸರಾಗ ವಾಗಿ ಬರುವಂತೆ ಮಾಡಬೇಕು. ಇಂಗು ಗುಂಡಿಗೆ ನೀರಿನ ಜತೆ ಕಸ-ಕಡ್ಡಿ ಬರ ದಂತೆ ನೋಡಿ ಕೊಳ್ಳಬೇಕು ಎಂದರು.ಅಂತರ್ಜಲ ಮರುಪೂರಣ ಸಿದ್ಧ ಗೊಳಿಸಲು ₹ 20 ಸಾವಿರ ಖರ್ಚಾಗ ಬಹುದು. ರೈತರು ಜಮೀನಿನ ಸೂಕ್ತ ಜಾಗದಲ್ಲಿ ಅಗತ್ಯಕ್ಕೆ ತಕ್ಕಂತೆ ಇಂಗು ಗುಂಡಿ ನಿರ್ಮಿಸಿಕೊಳ್ಳಬಹುದು. ಇದ ರಿಂದ ಅಂತರ್ಜಲ ನಿರೀಕ್ಷೆಗೂ ಮೀರಿ ಹೆಚ್ಚಾಗುತ್ತದೆ ಎಂದು ವಿವರಿಸಿದರು.

ಮನೆಯ ಮೇಲ್ಚಾವಣಿ ಮೇಲೆ ಬಿದ್ದ ಮಳೆ ನೀರನ್ನು ವ್ಯವಸ್ಥಿತವಾಗಿ ಸಂಗ್ರಹಿಸಿ ಕೊಳವೆಬಾವಿ, ತೆರೆದಬಾವಿಗಳಿಗೆ ವರ್ಗಾ ಯಿಸಿ ಅಂತರ್ಜಲಮಟ್ಟವನ್ನು ಹೆಚ್ಚಿಸ ಬಹುದು ಎಂದರು.ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷ ಕಾಳನಹುಂಡಿ ಗುರುಸ್ವಾಮಿ, ಕಾರ್ಯದರ್ಶಿ ಆರ್.ಎಂ.ಸ್ವಾಮಿ, ರೋಟರಿ ಸಿಲ್ಕ್‌ಸಿಟಿ ಅಧ್ಯಕ್ಷ ದೊಡ್ಡ ರಾಯಪೇಟೆ ಗಿರೀಶ್‌ ಹಾಗೂ ಕಾರ್ಯದರ್ಶಿ ಎಚ್.ಎಂ. ಅಜಯ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT