ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಲೂನ್‌ ಒಡೆದು ದಾಖಲೆ ಬರೆದ ನಾಯಿ

Last Updated 24 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಮನೆಯಲ್ಲಿ ಸಾಕಿದ ನಾಯಿಗಳು ತರಬೇತಿ ಕೊಟ್ಟರೆ, ನಾವು ಹೇಳಿದಂತೆ ಕೇಳುತ್ತವೆ. ಚೆಂಡನ್ನು ಮೇಲಕ್ಕೆ ಎಸೆದರೆ ಜಿಗಿದು ಬಾಯಿಯಲ್ಲಿ ಹಿಡಿಯುವುದು, ‘ಸೆಲ್ಯೂಟ್‌ ಮಾಡು’ ಎಂದರೆ ಎರಡೂ ಕಾಲು ಮೇಲೆತ್ತಿ ತಲೆ ಅಲ್ಲಾಡಿಸುವುದು... ಹೀಗೆ ಅನೇಕ ಸಂಜ್ಞೆಗಳನ್ನು ಮಾಡುತ್ತವೆ. ಆದರೆ ಇಲ್ಲೊಂದು ನಾಯಿ ವಿಶೇಷ ಸಾಧನೆಯೊಂದನ್ನು ಮಾಡಿ ಗಿನ್ನಿಸ್‌ ವರ್ಲ್ಡ್‌ ರೆಕಾರ್ಡ್‌ ಪುಸ್ತಕದಲ್ಲಿ ದಾಖಲೆ ಮಾಡಿದೆ.
 
ಈ ಶ್ವಾನದ ಹೆಸರು ಟೊಬಿ. ಇದು ಮಾಡಿದ್ದಾದರೂ ಏನು ಅಂದ್ಕೊಂಡ್ರಾ? ಈ ಸುದ್ದಿ ಓದಿ... ನ್ಯಾಷನಲ್‌ ಪೆಟ್‌ ಡೇ ಆಚರಣೆ ವೇಳೆ ಕೆನಡಾದ ಟೊಬಿ ಎಂಬ ಗಂಡುನಾಯಿ 36.53 ಸೆಕೆಂಡ್‌ಗಳಲ್ಲಿ 100 ಬಲೂನ್‌ಗಳನ್ನು ಬಾಯಿಯಲ್ಲಿ ಕಚ್ಚಿ ಒಡೆದು ಹಿಂದಿನ ದಾಖಲೆಗಳನ್ನು ಸರಿಗಟ್ಟಿದೆ.
 
ಕೆನಡಾದ ಕಲಗರಿಯ ವೈಎಂಸಿಎ ಆವರಣದಲ್ಲಿ ಟೊಬಿ 9ನೇ ವರ್ಷದ ಹುಟ್ಟುಹಬ್ಬದಂದು ಈ ದಾಖಲೆ ಮಾಡಿದೆ. ದಾಖಲೆಗೆ ಸಾಕ್ಷಿಯಾದವರು ಮಕ್ಕಳು.
‘ಜನರನ್ನು ರಂಜಿಸುವುದೇ ‘ಟೊಬಿ’ ಮತ್ತು ನನ್ನ ಜೀವನದ ಗುರಿಯಾಗಿದೆ, ಟೊಬಿಯ ಹಲವು ಪ್ರತಿಭೆಗಳಲ್ಲಿ  ಬಲೂನ್‌ ಒಡೆಯುವುದು ಒಂದು. ನನಗೂ ಆಶ್ಚರ್ಯವಾಗುವಂಥ ಸಾಧನೆ ಇದು’ ಎನ್ನುತ್ತಾರೆ ಮಾಲೀಕ ಕ್ರಿಸ್ಟಿ ಸ್ಪ್ರಿಂಗ್ಸ್‌.
 
ಈ ಮುಂಚಿನ ದಾಖಲೆ ಕ್ಯಾಲಿಫೋರ್ನಿಯಾದ ಟ್ವಿನ್ಕಿ ದಿ ಜಾಕ್‌ ರಸೆಲ್‌ ಹೆಸರಿನಲ್ಲಿತ್ತು. ಇದು 39.08 ಸೆಕೆಂಡ್‌ಗಳಲ್ಲಿ 100 ಬಲೂನ್‌ ಒಡೆದಿತ್ತು. ಈ ವಿಡಿಯೊವನ್ನು 8 ಕೋಟಿಗೂ ಹೆಚ್ಚು ಮಂದಿ ವೀಕ್ಷಿಸಿದ್ದರು. 
ವಿಡಿಯೊ ನೋಡಲು: bit.ly/2nDyQU8 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT