ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ವಚ್ಛ ಪರಿಸರ ಸಮಾಜದ ಪ್ರಗತಿ ಸಂಕೇತ’

Last Updated 25 ಏಪ್ರಿಲ್ 2017, 5:09 IST
ಅಕ್ಷರ ಗಾತ್ರ

ಚಡಚಣ: ‘ಪರಿಸರ ಸ್ವಚ್ಛತೆ ಕುರಿತು ಜನರಲ್ಲಿ ಅರಿವು ಮೂಡಿಸುವುದೆ ರಾಷ್ಟ್ರೀಯ ಸೇವಾ ಯೋಜನೆಯ (ಎನ್‌್ಎಸ್‌ಎಸ್‌) ಉದ್ದೇಶ’ ಎಂದು ಎನ್‌ಎಸ್‌ಎಸ್‌ನ ರಾಜ್ಯ ಸಂಯೋಜ ನಾಧಿಕಾರಿ ಕೆ.ಬಾಲಕೃಷ್ಣ ಹೇಳಿದರು. ಐಟಿಐ ಕಾಲೇಜುಗಳ ಎನ್‌ಎಸ್‌ಎಸ್‌ ಸ್ವಯಂ ಸೇವಕರಿಗಾಗಿ ಇಲ್ಲಿನ ಎಂಇಎಸ್‌ ಐಟಿಐ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಬೆಳಗಾವಿ ವಿಭಾಗ ಮಟ್ಟದ ನಾಯಕತ್ವ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು.

‘ಸ್ವಚ್ಛ ಪರಿಸರವೇ ಇರುವುದು ಸಮಾಜ ಪ್ರಗತಿ ಹೊಂದಿದೆ ಎಂಬುದರ ಸಂಕೇತ’ ಎಂದೂ ಅವರು ವಿವರಿಸಿ ದರು. ಬಿಜೆಪಿಯ ಜಿಲ್ಲಾ ಘಟಕದ ಅಧ್ಯಕ್ಷ ವಿಠ್ಠಲ ಕಟಕಧೋಂಡ ಮಾತನಾಡಿ, ‘ಸ್ವಚ್ಛತೆ ಕುರಿತಂತೆ ವಿದ್ಯಾರ್ಥಿಗಳಲ್ಲಿ  ಅರಿವು ಮೂಡಿಸುತ್ತಿರುವ ಎಂ.ಇ.ಎಸ್ ಶಿಕ್ಷಣ ಸಂಸ್ಥೆಯ ಕಾರ್ಯ ಶ್ಲಾಘನೀಯ’ ಎಂದರು.

ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಶ್ರೀಶೈಲಗೌಡ ಬಿರಾದಾರ, ಎಂ.ಇ.ಎಸ್ ಶಿಕ್ಷಣ ಸಂಸ್ಥೆಯ ಆಡಳಿ ತಾಧಿಕಾರಿ ಎ.ಎಸ್. ಕಲ್ಯಾಣಶೆಟ್ಟಿ ಮಾತ ನಾಡಿದರು.  ಪಟ್ಟಣ ಪಂಚಾಯ್ತಿ ಅಧ್ಯಕ್ಷ ಬಾಬುಗೌಡ ಪಾಟೀಲ ಎನ್‌ಎಸ್‌ಎಸ್‌ ಧ್ವಜಾರೋಹಣ ನೆರವೇರಿಸಿದರು.

ಪಟ್ಟಣ ಪಂಚಾಯ್ತಿ ಸದಸ್ಯ ನಾಗರಾಜ ನಿರಾಳೆ, ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್.ಎಂ.ಚೋಳಕೆ, ಬಿಜೆಪಿ ಮುಖಂಡ ನಾಗೇಂದ್ರ ಮಾಯವಂಶಿ ಮಾತನಾಡಿದರು.
ಸರ್ಕಾರಿ ಐಟಿಐ ಕಾಲೇಜಿನ ಪ್ರಾಚಾರ್ಯ ಎಸ್.ಜಿ.ಮಲ್ಲಾಡಕರ್, ಜಿ.ಪಂ. ಸದಸ್ಯ ಶಿವಶರಣ ಭೈರಗೊಂಡ, ಮುಖಂಡರಾದ ಗೋಪಾಲ ಕಾರಜೋಳ, ತಾ.ಪಂ ಸದಸ್ಯರಾದ ರಾಜು ಝಳಕಿ, ಸಾಹೇಬ ಗೌಡ ಬಿರಾದಾರ, ಪ.ಪಂ ಸದಸ್ಯ ವಿಜಯ ಕುಮಾರ ಅವಟಿ, ಪ್ರಾಚಾರ್ಯ ರಾದ ಎಸ್.ಆರ್ ಹಿರೇಮಠ ಇದ್ದರು. ಶಿಕ್ಷಕ ಆರ್.ಎಚ್.ಕೆಂಗನಾಳ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT