ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕನಕನ ಕಿಂಡಿ ಅಸಮಾನತೆಯ ಪ್ರತೀಕ’

Last Updated 25 ಏಪ್ರಿಲ್ 2017, 6:50 IST
ಅಕ್ಷರ ಗಾತ್ರ

ಉಡುಪಿ: ‘ಕನಕದಾಸರ ಭಕ್ತಿಗೆ ಒಲಿದ ಶ್ರೀಕೃಷ್ಣ ತಿರುಗಿ ಅವರಿಗೆ ದರ್ಶನ ನೀಡಿದ, ಕನಕನ ಕಿಂಡಿ ಅಸಮಾನತೆ ಮತ್ತು ಕ್ರೌಯದ ಪ್ರತೀಕ’ ಎಂದು ಡಾ. ಟಿ.ಎಂ.ಎ ಪೈ ಶಿಕ್ಷಣ ಮಹಾವಿದ್ಯಾಲ ಯದ ಪ್ರಾಂಶುಪಾಲ ಡಾ.ಮಹಾ ಬಲೇಶ್ವರ ರಾವ್‌ ಹೇಳಿದರು.

ಉಡುಪಿ ಕನಕ ಅಧ್ಯಯನ ಪೀಠ, ಮಣಿಪಾಲ ವಿಶ್ವವಿದ್ಯಾಲಯ ಮತ್ತು ಪರ್ಕಳ ಸರಿಗಮ ಭಾರತಿ ಸಂಗೀತ ವಿದ್ಯಾ ಲಯದ ಸಂಯುಕ್ತ ಆಶ್ರಯದಲ್ಲಿ ಉಡುಪಿ ಎಂಜಿಎಂ ಕಾಲೇಜಿನ ಆವರಣ ದಲ್ಲಿರುವ ಧ್ವನ್ಯಾಲೋಕ ಸಭಾಂಗಣ ದಲ್ಲಿ ಆಯೋಜಿಸಿರುವ ಏಳು ದಿನಗಳ ಕನಕದಾಸ ಕೀರ್ತನ ಮತ್ತು ಸಂಗೀತ ರಸಗ್ರಹಣ ಶಿಬಿರವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.

‘ಕನಕದಾಸರ ಭಕ್ತಿಯನ್ನು ಮೆಚ್ಚಿ ಶ್ರೀಕೃಷ್ಣ ತಿರುಗಿದಾಗ ಕನಕನ ಕಿಂಡಿ ಸೃಷ್ಟಿಯಾಯಿತು ಎಂಬ ಐತಿಹ್ಯ ಇದೆ. ಅದೇ ರೀತಿ ಮಧ್ವಾಚಾರ್ಯರು ಕೃಷ್ಣನ ಮೂರ್ತಿಯನ್ನು ಪಶ್ಚಿಮಾಭಿಮುಖವಾ ಗಿಯೇ ಸ್ಥಾಪಿಸಿದ್ದರು ಎಂಬ ಚರ್ಚೆಗಳು ಕೂಡ ನಡೆದಿವೆ. ಆದರೆ, ಕನಕನ ಕಿಂಡಿ ಹೇಗೆ ಸೃಷ್ಟಿಯಾಯಿತು ಎಂಬುದಕ್ಕೆ ಕೃಷ್ಣ ಮಠದ ಇತಿಹಾಸ, ಶಾಸನ ಅಥವಾ ಕನಕದಾಸರ ಕೃತಿಗಳಲ್ಲಿ ಉಲ್ಲೇಖವಿಲ್ಲ. ಆದ್ದರಿಂದ ಹೆಚ್ಚು ಹೆಚ್ಚು ಜನರು ಈ ಸ್ಥಳಕ್ಕೆ ಬರುವಂತೆ ಮಾಡಲು ಸೃಷ್ಟಿಸಿರುವ ಕಟ್ಟು ಕಥೆಯೂ ಇದಾಗಿರಬಹುದು’ ಎಂದು ಹೇಳಿದರು.

‘250 ದಾಸರ ಪೈಕಿ ಕನಕದಾಸ ರೊಬ್ಬರೇ ಶೂದ್ರ ದಾಸರು. ಅವರು 315 ಕೀರ್ತನೆಯನ್ನು ರಚಿಸಿದ್ದಾರೆ. ಅವರು ದಾಸರು ಮಾತ್ರವಲ್ಲ, ಕನ್ನಡದ ಶ್ರೇಷ್ಠ ಕವಿಯಾಗಿದ್ದರು. ಅವರ ಕಾವ್ಯ ವನ್ನು ನಾವು ಸರಿಯಾಗಿ ತಿಳಿದುಕೊಳ್ಳ ಬೇಕಾಗಿದೆ. ಇಂದಿನ ಕಾಲಘಟ್ಟದಲ್ಲಿ ಸಂಶೋಧನೆಗಳನ್ನು ಹೊಸ ದೃಷ್ಟಿ ಯಿಂದ ನೋಡುವ ಅಗತ್ಯವಿದೆ’ ಎಂದು ಅವರು ಹೇಳಿದರು.

‘ಸಂಗೀತವನ್ನು ಆಸ್ವಾದಿಸುವ ಮನೋಭಾವವನ್ನು ನಮ್ಮ ಕಿರಿಯ ತಲೆ ಮಾರಿನಲ್ಲಿ ಬೆಳೆಸಬೇಕು. ಸಂಗೀತ ಹಾಗೂ ಸಾಹಿತ್ಯ ಎಂಬುದು ಪರಸ್ಪರ ಬೆರೆತು ಕೊಂಡಿದೆ. ಹಾಡುಗಾರರಿಗೆ ಭಾಷೆ, ಸಾಹಿತ್ಯದ ಬಗ್ಗೆ ಜ್ಞಾನ ಅತಿ ಮುಖ್ಯ. ಇಲ್ಲದಿದ್ದರೆ ಸಂಗೀತದಲ್ಲಿ ತಪ್ಪುಗಳು ಕಾಣುತ್ತವೆ. ಪರಂಪರೆಯ ಬಗ್ಗೆ ಜಾಗೃತಿ ಮೂಡಿಸುವುದರಿಂದ ಮುಂದಿನ ತಲೆಮಾರಿನಲ್ಲಿ ಕಲೆಯನ್ನು ಉಳಿಸಲು ಸಾಧ್ಯವಾಗುತ್ತದೆ’ ಎಂದು ಅವರು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಕಲಾ ವಿಮರ್ಶಕ ಎ. ಈಶ್ವರಯ್ಯ ಮಾತನಾಡಿ, ‘ದೇವರ ನಾಮಗಳ ದಾಖಲೀಕರಣ ಮತ್ತು ರಾಗ ಸಂಯೋಜನೆ ಮಾಡುವ  ಮೂಲಕ ನಮ್ಮ ಪರಂರಪೆಯ ಸಂಪ ತ್ತನ್ನು ಉಳಿಸುವ ಕೆಲಸ ಮಾಡಬೇಕು. ಸಂಗೀತ ಮತ್ತು ಸಾಹಿತ್ಯವು ಭಿನ್ನವಾ ದುದು ಮತ್ತು ಒಂದಕ್ಕೊಂದು ಸಂಬಂ ಧವೇ ಇಲ್ಲ. ಕೇವಲ ನಾದದಿಂದಲೇ ಅಸ್ತಿತ್ವ ಸ್ಥಾಪಿಸುವ ಶಕ್ತಿ ಸಂಗೀತಕ್ಕೆ ಇದೆ’ ಎಂದು ಹೇಳಿದರು.

ಪೀಠದ ಸಂಯೋಜನಾಧಿಕಾರಿ ಡಾ. ವರದೇಶ್‌ ಹಿರೇಗಂಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗ ಳಾದ ವೃಂದಾ ಆಚಾರ್ಯ ಬೆಂಗಳೂರು ಹಾಗೂ ಪ್ರೊ. ಅರವಿಂದ ಹೆಬ್ಬಾರ್, ಕನಕ ಅಧ್ಯಯನ ಪೀಠದ ಸಹ ಸಂಯೋಜನಾ ಧಿಕಾರಿ ಡಾ.ಅಶೋಕ್ ಆಳ್ವ ಉಪಸ್ಥಿತರಿದ್ದರು.

ಸರಿಗಮ ಭಾರತೀಯ ನಿರ್ದೇಶಕ ಡಾ.ಉದಯ ಶಂಕರ್ ಸ್ವಾಗತಿಸಿದರು. ನಿರ್ದೇಶಕಿ ಉಮಾಶಂಕರಿ ವಂದಿಸಿದರು. ಉಪನ್ಯಾಸಕಿ ಅಪೂರ್ವ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT