ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಾಹುಬಲಿ’ ದೃಶ್ಯಗಳು ಆನ್‌ಲೈನ್‌ನಲ್ಲಿ ಸೋರಿಕೆ

Last Updated 28 ಏಪ್ರಿಲ್ 2017, 20:16 IST
ಅಕ್ಷರ ಗಾತ್ರ
ADVERTISEMENT

ಬೆಂಗಳೂರು: ‘ಬಾಹುಬಲಿ-2’ ಚಿತ್ರದ ಕೆಲ ದೃಶ್ಯಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿವೆ. ಅಲ್ಲದೆ, ಚಿತ್ರದ ಬಹುಪಾಲು ದೃಶ್ಯಗಳು ಫೇಸ್‌ಬುಕ್‌ನಲ್ಲಿ ಲೈವ್‌ ಆಗಿವೆ.
ದೇಶದಾದ್ಯಂತ ಶುಕ್ರವಾರ (ಏ.28) ತೆರೆಕಂಡಿರುವ ‘ಬಾಹುಬಲಿ-2’ ಚಿತ್ರ ಅರಬ್ ರಾಷ್ಟ್ರಗಳಲ್ಲಿ ಗುರುವಾರವೇ ತೆರೆ ಕಂಡಿತ್ತು.

ಕುವೈತ್‌ನಲ್ಲಿ ಸಿನಿಮಾ ವೀಕ್ಷಿಸಿದ ಪ್ರೇಕ್ಷಕರೊಬ್ಬರು ಸುಮಾರು 50 ನಿಮಿಷಗಳ ಕಾಲ ಫೇಸ್‍‌ಬುಕ್‌ನಲ್ಲಿ ಚಿತ್ರವನ್ನು ಲೈವ್ ಮಾಡಿದ್ದಾರೆ.

ಈ ಲೈವ್ ವಿಡಿಯೊವನ್ನು ಸುಮಾರು 20 ಸಾವಿರಕ್ಕಿಂತಲೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ ಎನ್ನಲಾಗಿದೆ. ಸದ್ಯ ಈ ವಿಡಿಯೊ ಲಿಂಕ್‌ ಅನ್ನು ತೆಗೆದುಹಾಕಲಾಗಿದೆ.

ವಾಟ್ಸ್‌ಆ್ಯಪ್‌ನಲ್ಲೂ ಹರಿದಾಡಿದ ತುಣುಕುಗಳು: ಚಿತ್ರದ ದೃಶ್ಯಗಳ ತುಣುಕುಗಳು ಸಾಮಾಜಿಕ ಜಾಲತಾಣ ವಾಟ್ಸ್‌ಆ್ಯಪ್‌ನಲ್ಲೂ ಹರಿದಾಡುತ್ತಿವೆ. ಉರ್ದು ಮತ್ತು ಇಂಗ್ಲಿಷ್‌ ಉಪಶೀರ್ಷಿಕೆ ಇರುವ ದೃಶ್ಯಗಳ ತುಣುಕುಗಳು ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿವೆ. ಈ ತುಣುಕುಗಳು ಕೂಡಾ ಅರಬ್‌ ರಾಷ್ಟ್ರಗಳಿಂದ ಸೋರಿಕೆಯಾಗಿರಬಹುದು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT