ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಳಸಂಗಿ ಕುಡಿವ ನೀರಿನ ಕೆರೆ ಪುನಶ್ಚೇತನ

Last Updated 29 ಏಪ್ರಿಲ್ 2017, 7:05 IST
ಅಕ್ಷರ ಗಾತ್ರ

ಇಂಡಿ: ತಾಲ್ಲೂಕಿನಲ್ಲಿ 1972ರಲ್ಲಿ ಬಿದ್ದ ಭೀಕರ ಬರಗಾಲದ ಸಂದರ್ಭದಲ್ಲಿ ಆಗಿನ ಸರ್ಕಾರ ಜನಸಾಮಾನ್ಯರಿಗೆ ಉದ್ಯೋಗ ಮತ್ತು ಕುಡಿಯುವ ನೀರಿನ ಬಗ್ಗೆ ದೂರ ದೃಷ್ಟಿ ಇಟ್ಟುಕೊಂಡು ತಾಲ್ಲೂಕಿನ ಲಾಳಸಂಗಿ ಗ್ರಾಮದಲ್ಲಿ ಒಂದು ಕೆರೆ ನಿರ್ಮಿಸಿತ್ತು.ಸುಮಾರು 15 ಎಕರೆ ವಿಸ್ತಾರವಿರುವ ಈ ಕೆರೆಯಿಂದ ಖೇಡಗಿ, ರೋಡಗಿ ಮತ್ತು ಶಿವಪುರ ಗ್ರಾಮಗಳಿಗೆ ಬೇಸಿಗೆ ಹಂಗಾ ಮಿನಲ್ಲಿ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರನ್ನು ಒದಗಿಸುತ್ತಿತ್ತು. ಬಹು ಉಪಕಾರಿಯಾಗಿದ್ದ ಈ ಕೆರೆ ಈಚೆಗೆ ಹೂಳು ತುಂಬಿಕೊಂಡು ಮಳೆಯ ನೀರು ಹಿಡಿದಿಡುವ ಸಾಮರ್ಥ್ಯ ಕಳೆದುಕೊಂಡಿತ್ತು. ಮಳೆಯ ಪ್ರಮಾ ಣವೂ ಕಡಿಮೆಯಾಗಿ ಕೆರೆ ಇದ್ದೂ ಇಲ್ಲದಂತಾಗಿತ್ತು. ಈ ಕೆರೆಯನ್ನು ಜನಸಾಮಾನ್ಯರು ಕೇವಲ ಶೌಚಾಲಯಕ್ಕೆ ಬಳಸುವಂತಾಗಿತ್ತು.

ಇದನ್ನು ಧರ್ಮಸ್ಥಳದ ಗ್ರಾಮೀಣಾ ಭಿವೃದ್ಧಿ ಸಂಸ್ಥೆ ಕಂಡು ಇದಕ್ಕೆ ಕಾಯಕಲ್ಪ ನೀಡಬೇಕು ಎಂದು ನಿರ್ಧರಿಸಿ, ತನ್ನ ಯೋಜನೆಯಲ್ಲಿ ₹ 5 ಲಕ್ಷ ಅನುದಾನ ಮಂಜೂರಿ ಮಾಡಿ ಅಭಿವೃದ್ಧಿ ಮಾಡಿದೆ. ಸರ್ಕಾರ ಮಾಡದಿರುವ ಇಂತಹ ಕೆಲಸ ವನ್ನು ಧರ್ಮಸ್ಥಳ ಸಂಸ್ಥೆ ಬರಗಾಲದ ಸಂದರ್ಭದಲ್ಲಿ ಕೈಗೆತ್ತಿಕೊಂಡು ಮಾನ ವೀಯತೆ ಮೆರೆದಿದೆ.

ಕಳೆದ ಮಾರ್ಚ್‌ 15 ರಿಂದ ಪ್ರಾರಂಭವಾದ ಈ ಕೆರೆಯ ಅಭಿವೃದ್ಧಿ ಕೆಲಸ ಇದೀಗ ಮುಗಿಯುತ್ತ ಬಂದಿದೆ. ಈ ಕೆರೆಗೆ ಕಾಯಕಲ್ಪಕ್ಕೆ  1 ಇಟ್ಯಾಚಿ ಮಶಿನ್, 3 ಜೆಸಿಬಿ ಯಂತ್ರ, 500 ಗಂಟೆ ಗಳ ಕಾಲ ಕೆಲಸ ಮಾಡಿವೆ. ಈ ಕೆರೆಯಲ್ಲಿ ತುಂಬಿಕೊಂಡಿದ್ದ 6500 ಟ್ರ್ಯಾಕ್ಟರ್ ಫಲ ವತ್ತಾದ ಮಣ್ಣನ್ನು ರೈತರಿಗೆ ನೀಡಲಾಯಿತು.

ಸುಮಾರು 300 ಟ್ರ್ಯಾಕ್ಟರ್ ಒಂದು ತಿಂಗಳ ಕಾಲ ಕೆರೆಯಲ್ಲಿಯ ಮಣ್ಣನ್ನು ಎತ್ತಿ ಕೆರೆಯ ಏರಿಗೆ ತಂದು ಹಾಕಿದವು. ಕೆರೆಯ ಏರಿಯನ್ನು ಸುಮಾರು 3 ಅಡಿ ಎತ್ತರಿಸಿದ್ದಲ್ಲದೇ 15 ಅಡಿ ಅಗಲ ಗೊಳಿಸಲಾಯಿತು. ಕೆರೆಯ ಏರಿಯ ದುರಸ್ತಿಗಾಗಿ ಕಲ್ಲು ಕಟ್ಟಲು ಸಂಸ್ಥೆ ಚರ್ಚೆ ನಡೆಸಿದ್ದು, ಮುಂದಿನ ದಿನಗಳಲ್ಲಿ ಆ ಕೆಲಸ ಕೈಗೆತ್ತಿಕೊಳ್ಳಲಾಗುವುದು ಎಂದು ಸಂಸ್ಥೆಯ ಜಿಲ್ಲಾ ನಿರ್ದೇಶಕ ಶ್ರೀನಿವಾಸ ತಿಳಿಸಿದ್ದಾರೆ.

ಈ ಕೆರೆಯ ಅಭಿವೃದ್ಧಿಯಿಂದ ಸುಮಾರು 12 ಸಾವಿರ ಜನಸಾಮಾನ್ಯ ರಿಗೆ 15 ಸಾವಿರ ಜಾನುವಾರುಗಳಿಗೆ ಬೇಸಿಗೆಯಲ್ಲಿ ಕುಡಿಯುವ ನೀರು ಸರಬರಾಜು ಮಾಡುವ ಸಾಮರ್ಥ್ಯ ಪಡೆದುಕೊಂಡಿದೆ.ಈ ಕೆಲಸಕ್ಕೆ ಸಂಸ್ಥೆಯ ತಾಲ್ಲೂಕು ನಿರ್ದೇಶಕ ಕೆ. ಗೋಪಾಲ, ಗ್ರಾಮ ಪಂಚಾಯ್ತಿ ಅಧ್ಯಕ್ಷ ರಿಯಾಜ್ ಕೋರ ನೂರ, ಸಾಹೇಬಗೌಡ ಪಾಟೀಲ, ಪ್ರಕಾಶ ಶಿವಪುರ, ಖಾಜಾಸಾಬ್ ನದಾಫ, ನೀಲಣ್ಣ ಹಿರೇಕೆರೂರ, ವಿಜಯಕುಮಾರ ತೇಲಿ, ಸೋಂತಿನಾಬ್ ದೇವರ ನಿಂಬರಗಿ, ಸಿದ್ದು ಹಜೇರಿ, ಲಕ್ಷ್ಮಣ ಪೂಜಾರಿ ನೇತೃತ್ವ ವಹಿಸಿದ್ದರು.

ಸಂಸ್ಥೆಯ ಜಿಲ್ಲಾ ನಿರ್ದೇಶಕ ಶ್ರೀನಿವಾಸ ಮಾತನಾಡಿ, ಈ ಕೆರೆಯ ಅಭಿವೃದ್ಧಿ ಮಾದರಿ ಮಾತ್ರ. ಇದೇ ರೀತಿ ಇನ್ನೂ ಅನೇಕ ಕೆರೆ ಅಭಿವೃದ್ಧಿಪಡಿ ಸುವುದಲ್ಲದೇ ಈ ಭಾಗದಲ್ಲಿ ರೈತ ಮಹಿ ಳೆಯರಿಗೆ ಅಗತ್ಯವಿರುವ ನೀರು ನಿರ್ವ ಹಣೆ ತರಬೇತಿ, ಬೆಳೆ ಬೆಳೆಯುವ ತರ ಬೇತಿ, ಗುಡಿಕೈಗಾರಿಕೋದ್ಯಮಿಗಳ ಬಗ್ಗೆ ತರಬೇತಿ ನೀಡುವುದರ ಜೊತೆಗೆ ಕೃಷಿಗೆ ಅಗತ್ಯವಿರುವ ಸಲಕರಣೆಗಳ ಖರೀದಿಗೆ. ಬೀಜ ಗೊಬ್ಬರಗಳ ಖರೀದಿಗೆ, ಚಿಕ್ಕಪುಟ್ಟ ವ್ಯಾಪಾರಗಳಿಗೆ, ಗುಡಿ ಕೈಗಾರಿಕೆ ಮಾಡಲು, ಹೈನುಗಾರಿಕೆಗೆ, ಕುರಿ, ಕೋಳಿ, ಎಮ್ಮೆ ಸಾಕಾಣಿಕೆಗೆ, ಇನ್ನೂ ಅನೇಕ ಮಹಿಳೆಯರು ಮಾಡುವಂತಹ ಉದ್ಯೋಗಗಳಿಗೆ ಸಂಘಗಳ ಮೂಲಕ ಸಾಲ ನೀಡಲು ಯೋಜಿಸಿ ಈಗಾಗಲೇ ₹ 7.41 ಕೋಟಿ ಸಾಲ ವಿತರಣೆ ಮಾಡಲಾಗಿದೆ ಎಂದರು.

ಗ್ರಾಮಗಳ ಅಭಿವೃದ್ಧಿಗಾಗಿಯೇ ತಾಲ್ಲೂಕಿನಲ್ಲಿ ಈಗಾಗಲೇ 1215 ಸಂಘ ರಚಿಸಲಾಗಿದೆ. ಪ್ರತಿಯೊಂದು ಸಂಘ ಗಳಲ್ಲಿ 10 ರಿಂದ 15 ಜನ ಮಹಿಳೆಯರು ಇದ್ದಾರೆ.ಇವರ ಮೇಲ್ವಿಚಾರಣೆಗಾಗಿ 80 ಜನ ಸಿಬ್ಬಂದಿ ಇದ್ದಾರೆ. ಇವರಲ್ಲದೇ ವಿವಿಧ ಗ್ರಾಮಗಳಲ್ಲಿಯ ಮಹಿಳೆಯರಿಗೆ ತರಬೇತಿ ನೀಡಲು 320 ಒಕ್ಕೂಟ ಮಾಡಿ ಅವುಗಳಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಅಲ್ಲಲ್ಲಿಯ ಮಹಿಳೆಯರಿಗೆ ತರಬೇತಿ ನೀಡಲಾಗುವುದು. ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಸುಮಾರು 13, 000 ಜನ ಮಹಿಳೆಯರು ಸಂಘಗಳ ಸದಸ್ಯರಾಗಿದ್ದು, ಈ ಎಲ್ಲರೂ ಒಂದಿ ಲ್ಲೊಂದು ಕೆಲಸಗಳಲ್ಲಿ ತೊಡಗಿಸಿಕೊಂ ಡಿದ್ದಾರೆ. ಪ್ರತೀ ವಾರ ಸಾಲದ ಕಂತನ್ನು ತಪ್ಪದೇ ಸಂಘಕ್ಕೆ ಜಮಾ ಮಾಡುತ್ತಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT