ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಬರ್ ಜಗತ್ತಿನಲ್ಲಿ ಬಸವಣ್ಣ

Last Updated 29 ಏಪ್ರಿಲ್ 2017, 14:18 IST
ಅಕ್ಷರ ಗಾತ್ರ

ಇವನಾರವ ಇವನಾರವ ಇವನಾರವ ನೆಂದಿನಸದಿರಯ್ಯಾ
ಇವ ನಮ್ಮವ ಇವ ನಮ್ಮವ ಇವ ನಮ್ಮವ ನೆಂದಿನಸಯ್ಯಾ
ಕೂಡಲಸಂಗಮದೇವಾ ನಿಮ್ಮ ಮಹಾಮನೆಯ ಮಗನೆಂದೆನಿಸಯ್ಯ ಎಂದು ಹೇಳುವ ಮೂಲಕ ಸಮಾಜದ ಎಲ್ಲ ವರ್ಗದ ಜನರನ್ನು ಒಂದುಗೂಡಿಸಿದ ಬಸವಣ್ಣ, ಜಾತೀಯತೆಯ ವಿರುದ್ಧ ಸಮರ ಸಾರಿದ್ದರು.

೨ ನೆಯ ಶತಮಾನದ ಭಕ್ತಿ ಪಂಥದ ಪ್ರಮುಖರಲ್ಲಿ ಒಬ್ಬರಾದ ಬಸವಣ್ಣನವರು ವಚನಗಳ ಮೂಲಕ ಭಕ್ತಿಪಥ ಮತ್ತು ಜೀವನದ ಬಗ್ಗೆ ಬೆಳಕು ಚೆಲ್ಲಿ ವಿಶ್ವಗುರು ಎನಿಸಿಕೊಂಡವರು.

ಬಸವಣ್ಣನವರ ವಚನಗಳ ಬಗ್ಗೆ ಸಾಕಷ್ಟು ಪುಸ್ತಕಗಳು ಇದ್ದರೂ, ಇಂದಿನ ಜನಾಂಗ ಮೊಬೈಲ್ ಮತ್ತು ಕಂಪ್ಯೂಟರ್ ಮೂಲಕ ವಚನಗಳನ್ನು ಓದಲು ಆಸಕ್ತರಾಗಿರುತ್ತಾರೆ.

ಮೊಬೈಲ್‍ನಲ್ಲಿ ವಚನ ಸಾಹಿತ್ಯ


ಗೂಗಲ್ ಅಂಡ್ರಾಯ್ಡ್‌ OSನಲ್ಲಿ ಲಭ್ಯವಿರುವ ವಚನ ಸಾಹಿತ್ಯ ಆ್ಯಪ್ ನಲ್ಲಿ  20,000ಕ್ಕೂ ಹೆಚ್ಚು ವಚನಗಳು ಲಭ್ಯವಿದೆ. ಇಲ್ಲಿ ವಚನಕಾರರು ಮತ್ತು ಅವರ ವಚನಗಳನ್ನು ಸುಲಭವಾಗಿ ಹುಡುಕುವ ವ್ಯವಸ್ಥೆ ಇದೆ. ವಚನಕಾರರ ಹೆಸರಿನ ಮೊದಲ ಅಕ್ಷರವನ್ನು ಕನ್ನಡದಲ್ಲಿ ಟೈಪಿಸಿದರೆ ಆ ಅಕ್ಷರದಿಂದ ಆರಂಭವಾಗುವ ಹೆಸರಿನ ಎಲ್ಲ ವಚನಕಾರರ ಪಟ್ಟಿ ಡಿಸ್‍ ಪ್ಲೇ ಆಗುತ್ತದೆ.

ನಿರ್ದಿಷ್ಟ ಹೆಸರುಗಳನ್ನು ಆಯ್ಕೆ ಮಾಡಿದಾಗ ಅವರ ಕಿರು ಪರಿಚಯ, ವಚನಗಳು ಮತ್ತು ಧ್ವನಿ ಮುದ್ರಿತ ಕೃತಿಗಳ ಮಾಹಿತಿ ತೆರೆದುಕೊಳ್ಳುತ್ತದೆ. ಈ ಆ್ಯಪ್ ಸಂಪೂರ್ಣ ಉಚಿತ.


ಬಸವಣ್ಣನ ವಚನಗಳು


ಬಸವಣ್ಣನ ವಚನಗಳು ಮಾತ್ರ ಈ ಅಂಡ್ರಾಯ್ಡ್‌  ಆ್ಯಪ್‍ನಲ್ಲಿ  200 ವಚನಗಳು ಲಭ್ಯವಿದೆ, ಶೇರ್ ಬಟನ್ ಬಳಸಿ ಸಾಮಾಜಿಕ ತಾಣಗಳಲ್ಲಿ ಈ ವಚನಗಳನ್ನು ಹಂಚಿಕೊಳ್ಳಬಹುದು.
 

ವಚನ


ಅಂಡ್ರಾಯ್ಡ್‌ OSನಲ್ಲಿ ಉಚಿತವಾಗಿ ಲಭ್ಯವಿರುವ ವಚನ ಆ್ಯಪ್‍ನಲ್ಲಿ  ವಚನಕಾರರ ಹೆಸರು ಅಥವಾ ವಚನದ ಮೊದಲ ಸಾಲಿನ ಪದವನ್ನು ಭಾಗಶಃ ಅಥವಾ ಸಂಪೂರ್ಣವಾಗಿ ಹುಡುಕಬಹುದು.

[related]

ವಚನ ಸಂಚಯ


www.vachana.sanchaya.net ವೆಬ್‍ಸೈಟ್‍ನಲ್ಲಿ 259 ವಚನಕಾರರ 20930ಕ್ಕೂ ಅಧಿಕ ವಚನಗಳು ಲಭ್ಯವಿದೆ. ಈ ವೆಬ್‍ತಾಣದೊಳಗೆ ಹೊಕ್ಕು ಸುಲಭವಾಗಿ ವಚನಗಳನ್ನು ಹುಡುಕಿತೆಗೆಯಬಹದು. ನಿರ್ದಿಷ್ಟ ಪದ ಬಳಕೆಯ ಬಗ್ಗೆ ಕುತೂಹಲವೊಂದಿದ್ದರೆ ಆ ಪದವನ್ನು ಟೈಪಿಸಿದರೆ ಸಾಕು, ಎಷ್ಟು ವಚನಕಾರರು, ಎಷ್ಟು ಬಾರಿ, ಎಷ್ಟು ವಚನಗಳಲ್ಲಿ ಆ ಪದವನ್ನು ಬಳಸಿದ್ದಾರೆ ಎಂಬ ಮಾಹಿತಿ ಕ್ಷಣಮಾತ್ರದಲ್ಲಿ ತೆರೆದುಕೊಳ್ಳುತ್ತದೆ. ವಚನಕಾರರ ಹೆಸರು ಮತ್ತು ವಚನಗಳ ಆರಂಭಿಕ ಪದಗಳನ್ನು ವರ್ಣಮಾಲೆಯ ಅಕ್ಷರಗಳನ್ನು ಕ್ಲಿಕ್ಕಿಸುವ ಮೂಲಕ ನೇರವಾಗಿ ಹುಡುಕುವ ಕೊಂಡಿಗಳೂ ಲಭ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT