ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಯಲ್ಲಿ ನೀರೂರಿಸುವ ಚಿಲ್ಲಿ ಫಿಶ್

Last Updated 9 ಮೇ 2017, 16:27 IST
ಅಕ್ಷರ ಗಾತ್ರ
ADVERTISEMENT

ಮೀನು ಖಾದ್ಯ ಇಷ್ಟಪಡುವವರಿಗಾಗಿ ಇಲ್ಲಿದೆ ಚಿಲ್ಲಿ ಫಿಶ್. ಚಿಲ್ಲಿ ಫಿಶ್ ಮಾಡುವುದು ಹೇಗೆ ಎಂಬುದಕ್ಕೆ ‘ಪ್ರಜಾವಾಣಿ ರೆಸಿಪಿ’ ವಿಡಿಯೊ ನೋಡಿ.

ಸಾಮಗ್ರಿಗಳು
೧. ಸಿಯರ್ ಫಿಶ್ ಬೋನ್‌ಲೆಸ್ ತುಂಡುಗಳು - ೧/೨ ಕೆ.ಜಿ
೨. ಉಪ್ಪು - ರುಚಿಗೆ ತಕ್ಕಷ್ಟು
೩. ಅಜಿನೋ ಮೋಟೋ - ೧/೨ ಸ್ಪೂನ್
೪. ಕಾರ್ನ್ ಫ್ಲೋರ್ - ೦೨ ದೊಡ್ಡ ಸ್ಪೂನ್
೫. ಮೊಟ್ಟೆ - ೦೧
೬. ಬಿಳಿ ಮೆಣಸಿನ ಪುಡಿ - ೦೧ ಸ್ಪೂನ್
೭. ಅಚ್ಚ ಖಾರದ ಪುಡಿ - ೦೧ ಸ್ಪೂನ್
೮. ಎಣ್ಣೆ - ಕರಿಯಲು

ಮಸಾಲೆ:
೯. ಹೆಚ್ಚಿದ ಬೆಳ್ಳುಳ್ಳಿ  - ೦೧ ಸ್ಪೂನ್
೧೦. ಹೆಚ್ಚಿದ ಶುಂಠಿ  - ೦೧ ಸ್ಪೂನ್
೧೧. ಹಸಿ ಮೆಣಸಿನ ಕಾಯಿ - ೦೪
೧೨.  ರೆಡ್ ಚಿಲ್ಲಿ ಪೇಸ್ಟ್ - ೦೧ ದೊಡ್ಡ ಚಮಚ
೧೩. ಟೊಮ್ಯಾಟೊ ಸಾಸ್ - ೦೧ ದೊಡ್ಡ ಚಮಚ
೧೪. ವಿನಿಗರ್ - ೨ ಚಮಚ
೧೫. ಅಲಂಕಾರಕ್ಕೆ ಈರುಳ್ಳಿ ಸೊಪ್ಪು, ಪುದೀನ ಸೊಪ್ಪು

ಮಾಡುವ ವಿಧಾನ:
ಸಿಯರ್ ಫಿಶ್ ತುಂಡುಗಳಿಗೆ ಉಪ್ಪು, ಅಜಿನಮೋಟೋ, ಕಾರ್ನ್ ಫ್ಲೋರ್, ಮೊಟ್ಟೆ, ಬಿಳಿ ಮೆಣಸಿನ ಪುಡಿ, ಖಾರದ ಪುಡಿ ಹಾಕಿ ಚೆನ್ನಾಗಿ ಕಲಸಿ. ಒಂದು ಗಂಟೆಯ ನಂತರ  ಬಾಣಲೆಯಲ್ಲಿ ಎಣ್ಣೆ ಕಾಯಲು ಇಡಿ. ಕಾದ ಎಣ್ಣೆಗೆ ಮೀನಿನ ತುಂಡುಗಳನ್ನು ಕರಿಯಿರಿ. ಮತ್ತೊಂದು ಬಾಣಲೆಯಲ್ಲಿ ೨ ಚಮಚ ಎಣ್ಣೆ ಬಿಸಿ ಮಾಡಿ, ಹೆಚ್ಚಿದ ಶುಂಠಿ, ಬೆಳ್ಳುಳ್ಳಿ, ಹಸಿಮೆಣಸಿನ ಕಾಯಿ, ರೆಡ್ ಚಿಲ್ಲಿ ಪೇಸ್ಟ್, ಟೊಮ್ಯಾಟೊ ಸಾಸ್, ವಿನಿಗರ್, ಸ್ವಲ್ಪ ಉಪ್ಪು ಸೇರಿಸಿ ಹುರಿಯಿರಿ. ಇದಕ್ಕೆ ಎಣ್ಣೆಯಲ್ಲಿ ಕರಿದ ಫಿಶ್‌ಅನ್ನು ಸೇರಿಸಿ ಚೆನ್ನಾಗಿ ಕಲಸಿ. ಕೊನೆಗೆ ಈರುಳ್ಳಿ ಸೊಪ್ಪು ಪುದೀನ ಸೊಪ್ಪು, ಸೇರಿಸಿ ಅಲಂಕರಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT