ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾ ವಿಭಾಗದಲ್ಲಿ ಕನ್ನಡ ಮಾಧ್ಯಮದ ಚೈತ್ರಾ ಅತಿ ಹೆಚ್ಚು ಅಂಕ, ವಿಜ್ಞಾನ ವಿಭಾಗದ ಸೃಜನಾ, ರಾಧಿಕಾ ರಾಜ್ಯಕ್ಕೆ ಪ್ರಥಮ

ಪಿಯು ಫಲಿತಾಂಶ: ಮೂರು ವಿಭಾಗಗಳಲ್ಲೂ ವಿದ್ಯಾರ್ಥಿನಿಯರೇ ಮೊದಲಿಗರು
Last Updated 11 ಮೇ 2017, 11:41 IST
ಅಕ್ಷರ ಗಾತ್ರ

ಬೆಂಗಳೂರು: ಪಿಯುಸಿ ವಿಜ್ಞಾನ ವಿಭಾಗದಲ್ಲಿ ಕರಾವಳಿ ಜಿಲ್ಲೆಯ ಇಬ್ಬರು ವಿದ್ಯಾರ್ಥಿನಿಯರು 596 ಅಂಕಗಳೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಕಲಾ ವಿಭಾಗದಲ್ಲಿ ಕನ್ನಡ ಮಾಧ್ಯಮದ ಚೈತ್ರಾ ಮೊದಲ ಸ್ಥಾನದಲ್ಲಿದ್ದಾರೆ. ಬಳ್ಳಾರಿ ಕೊಟ್ಟೂರಿನ ಇಂದು ಪಿಯು ಕಾಲೇಜಿನ ವಿದ್ಯಾರ್ಥಿನಿ ಚೈತ್ರಾ 589 ಅಂಕ ಪಡೆದಿದ್ದಾರೆ.

ಮಂಗಳೂರಿನ ಎಕ್ಸ್‌ಪರ್ಟ್ ಕಾಲೇಜಿನ ಎನ್.ಸೃಜನಾ ಹಾಗೂ ಗಂಗೊಳ್ಳಿಯ ಎಸ್.ವಿ. ಪಿಯು ಕಾಲೇಜಿನ ರಾಧಿಕಾ ಪೈ ಅವರು ವಿಜ್ಞಾನ ವಿಭಾಗದಲ್ಲಿ ತಲಾ 596 ಅಂಕಗಳೊಂದಿಗೆ ಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಸೃಜನಾ ಮತ್ತು ರಾಧಿಕಾ ಪೈ, ವಾಣಿಜ್ಯ ವಿಭಾಗದಲ್ಲಿ ಶ್ರೀನಿಧಿ ಹಾಗೂ ಕಲಾ ವಿಭಾಗದಲ್ಲಿ ಚೈತ್ರಾ ಅತಿ ಹೆಚ್ಚು ಅಂಕ ಗಳಿಸಿದ್ದು, ಈ ಬಾರಿಯೂ ವಿದ್ಯಾರ್ಥಿಯರು ಪ್ರಾಬಲ್ಯ ಸಾಧಿಸಿದ್ದಾರೆ.

* ಟಾಪರ್‌ಗಳ ಪಟ್ಟಿ

ವಿಜ್ಞಾನ ವಿಭಾಗ:
1. ಸೃಜನಾ.ಎನ್– 596 ಅಂಕ
ಎಕ್ಸ್‌ಪರ್ಟ್ ಪಿಯು ಕಾಲೇಜು, ಮಂಗಳೂರು
2. ರಾಧಿಕಾ ಪೈ– 596 ಅಂಕ
ಎಸ್.ವಿ. ಪಿಯು ಕಾಲೇಜು, ಗಂಗೊಳ್ಳಿ
3. ಪ್ರತೀಕಾ ಚಂದ್ರಶೇಖರ್‌ ಭಟ್‌– 595
ಎಂಇಎಸ್‌ ಚೈತನ್ಯ ಪಿಯು ಕಾಲೇಜು, ಶಿರಸಿ

ವಾಣಿಜ್ಯ ವಿಭಾಗ:
1. ಶ್ರೀನಿಧಿ ಪಿ.ಜಿ.– 595 ಅಂಕ
ಆರ್‌ಎನ್‌ಎಸ್‌ ಪಿಯು ಕಾಲೇಜು, ಬೆಂಗಳೂರು
2. ಸಾಯಿ ಸಮರ್ಥ್‌– 595 ಅಂಕ
ಸತ್ಯಸಾಯಿ ಲೋಕಸೇವಾ ಪಿಯು ಕಾಲೇಜು, ದಕ್ಷಿಣ ಕನ್ನಡ
3. ಮುಸ್ಕಾನ್‌ ಕೆ.ಜೈನ್‌– 594 ಅಂಕ
ಎಎಸ್‌ಸಿ ಪಿಯು ಕಾಲೇಜು, ಬೆಂಗಳೂರು
(ಒಟ್ಟು ಮೂವರು 594 ಅಂಕ ಪಡೆದಿದ್ದಾರೆ)

ಕಲಾ ವಿಭಾಗ:
1.ಬಿ.ಚೈತ್ರಾ– 589 ಅಂಕ(ಕನ್ನಡ ಮಾಧ್ಯಮ)
ಇಂದು ಪಿಯು ಕಾಲೇಜು, ಬಳ್ಳಾರಿ
2. ಚರಿತ್ರಾ ಅಜಯ್‌ ನಾಯಕ್‌–583
ಕ್ರೈಸ್ಟ್‌ ಪಿಯು ಕಾಲೇಜು, ಬೆಂಗಳೂರು
3. ಹಾದಿಮನಿ ಕವಿತಾ– 582(ಕನ್ನಡ ಮಾಧ್ಯಮ)
ಇಂದು ಪಿಯು ಕಾಲೇಜು, ಬಳ್ಳಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT