ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

625 ಅಂಕ ಪಡೆದ ನೇಕಾರನ ಮಗಳು

Last Updated 12 ಮೇ 2017, 19:30 IST
ಅಕ್ಷರ ಗಾತ್ರ

ಬಾಗಲಕೋಟೆ: ‘ರಿಸಲ್ಟ್‌ ಕೇಳಿ ಬಾಳ ಸಂತೋಷ ಆಗೇತ್ರಿ. ನಮ್ದು ನೇಕಾರಿಕೆ ಕುಟುಂಬ. ಅಪ್ಪಾ ಮಗ್ಗ ನಡಸ್ತಾರ್ರಿ, ಅವ್ವ ಮನಿಯಾಗ ಇರ್ತಾರ. ದಿನಕ್ಕೆ 3ರಿಂದ 4 ತಾಸು ಓದ್ತಿದ್ದೆ. ಅವತ್ತಿನ ವಿಷಯ ಅವತ್ತೇ ಟಿಪ್ಪಣಿ ಮಾಡಿಕೊಳ್ತಿದ್ದೆ. ಮುಂದೆ ಪಿಯುಸಿಯಲ್ಲಿ ಸೈನ್ಸ್ ಓದಿ ಡಾಕ್ಟರ್ ಆಗೋ ಆಸೆ ಐತ್ರಿ....’

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದ ರಾಜ್ಯದ ಮೂವರು ವಿದ್ಯಾರ್ಥಿಗಳಲ್ಲಿ ಒಬ್ಬರಾದ ಜಮಖಂಡಿ ತಾಲ್ಲೂಕು ಬನಹಟ್ಟಿಯ ಪಲ್ಲವಿ ಶಿರಹಟ್ಟಿ ಒಂದೇ ಉಸಿರಲ್ಲಿ ‘ಪ್ರಜಾವಾಣಿ’ಗೆ ನೀಡಿದ ಪ್ರತಿಕ್ರಿಯೆ ಇದು.

ರವೀಂದ್ರ ಶಿರಹಟ್ಟಿ ಹಾಗೂ ಭಾರತಿ ದಂಪತಿ ಎರಡನೇ ಮಗಳು ಪಲ್ಲವಿ. ಅಲ್ಲಿನ ಜನತಾ ಶಿಕ್ಷಣ ಸಂಘದ ಎಸ್‌.ಆರ್.ಎ ಸಂಯುಕ್ತ ಪ್ರೌಢಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿಯೇ ಎಸ್ಸೆಸ್ಸೆಲ್ಸಿ ಪೂರ್ಣಗೊಳಿಸಿದ್ದು, ಎಲ್ಲ ವಿಷಯಗಳಲ್ಲಿ ನೂರಕ್ಕೆ ನೂರು ಅಂಕ ಪಡೆಯುವ ಮೂಲಕ ರಾಜ್ಯದ ಗಮನ ಸೆಳೆದಿದ್ದಾರೆ. ಇದೇ ವರ್ಷ ದ್ವಿತೀಯ ಪಿ.ಯು.ಸಿ ಪೂರ್ಣಗೊಳಿಸಿರುವ ಪಲ್ಲವಿಯ ಸಹೋದರಿ ಪೂರ್ಣಿಮಾ ವಿಜ್ಞಾನ ವಿಭಾಗದಲ್ಲಿ ಶೇ 81ರಷ್ಟು ಅಂಕ ಪಡೆದಿದ್ದಾರೆ.

‘ಬನಹಟ್ಟಿಯ ಬಸವೇಶ್ವರ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿರುವೆ. ಇಂಗ್ಲಿಷ್ ವಿಷಯಕ್ಕೆ ಮಾತ್ರ ಮನೆ ಪಾಠಕ್ಕೆ ಮೊರೆ ಹೋಗಿದ್ದೆ. ಉಳಿದ ವಿಷಯಗಳನ್ನು ಮನೆಯಲ್ಲಿಯೇ ಓದಿದ್ದೇನೆ’ ಎಂದು ಪಲ್ಲವಿ ಹೇಳಿದರು.

‘ಪರೀಕ್ಷೆಯಲ್ಲಿ 625ಕ್ಕೆ 620 ಅಂಕ ಬರಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಅಷ್ಟೂ ಅಂಕ ಬಂದಿವೆ. ಇದು ಸಂತಸ ಹೆಚ್ಚಿಸಿದೆ. ಕ್ಲಾಸ್‌ ಟೀಚರ್ ನೀಲೂ ಕಂಕನವೇಲಿ ಸೇರಿದಂತೆ ಶಾಲೆಯ ಎಲ್ಲಾ ಶಿಕ್ಷಕರು ನೀಡಿದ ಮಾರ್ಗದರ್ಶನ, ಮನೆಯಲ್ಲಿ ಅಪ್ಪ–ಅಮ್ಮನ ಪ್ರೋತ್ಸಾಹ ಇದಕ್ಕೆ ಕಾರಣ’ ಎಂದು ಪಲ್ಲವಿ ಹೇಳುತ್ತಾರೆ.

**

ನ್ಯೂಸ್‌, ಸೀರಿಯಲ್  ಬಿಡದ ಬಾಲಕಿ

‘ಅಕೀಗೆ ಮಹಾದೇವ, ಅಶೋಕ ಸೀರಿಯಲ್‌ (ಟಿ.ವಿ. ಧಾರಾವಾಹಿ) ಇಷ್ಟ.  ಆ ಎರಡೂ ಸೀರಿಯಲ್‌ಗಳು ಹಾಗೂ ನ್ಯೂಸ್‌ ತಪ್ಪದೇ ನೋಡುತ್ತಿದ್ದಳು.

ದಿಕೊಳ್ಳುವಂತೆ ನಾವೂ ಎಂದಿಗೂ ಒತ್ತಡ ಹಾಕಿರಲಿಲ್ಲ. ಮೆಡಿಕಲ್ (ವೈದ್ಯಕೀಯ ಶಿಕ್ಷಣ) ಓದೋದಾಗಿ ಹೇಳಿದ್ದಾಳೆ. ಆಕೆಯ ಇಷ್ಟದಂತೆ ಭವಿಷ್ಯ ರೂಪಿಸಿಕೊಳ್ಳಲು ನೆರವಾಗುತ್ತೇವೆ’ ಎಂದು ತಾಯಿ ಭಾರತಿ ಶಿರಹಟ್ಟಿ ಹೇಳಿದರು.

ಮಾತೇ ಹೊರಡುತ್ತಿಲ್ಲ: ‘ನನ್ನ ಜೀವಮಾನದಲ್ಲಿ ಕಂಡ ಮಹತ್ವದ ಸಾಧನೆ ಇದು. ಮಾತನಾಡಲು ಪದಗಳೇ ಸಿಗುತ್ತಿಲ್ಲ. ಆಕೆಯಲ್ಲಿನ ಪ್ರಾಮಾಣಿಕತೆ, ಪರಿಶ್ರಮ ಹಾಗೂ ಬದ್ಧತೆ ಈ ಫಲಿತಾಂಶಕ್ಕೆ ಕಾರಣ’ ಎಂದು ಪಲ್ಲವಿ ಮನೆಗೆ ಬಂದಿದ್ದ ಶಿಕ್ಷಕಿ ನೀಲೂ  ಬಣ್ಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT