ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತಮ ಮಾರ್ಗದರ್ಶನ ಅಗತ್ಯ:ಆಶಾಲತಾ

Last Updated 13 ಮೇ 2017, 7:29 IST
ಅಕ್ಷರ ಗಾತ್ರ

ಉಡುಪಿ: ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವು ದರೊಂದಿಗೆ ಸರಿಯಾದ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ‘ಮೆಂಟರಿಂಗ್‌’ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ನಿಟ್ಟೆ ಜಸ್ಟಿಸ್‌ ಕೆ.ಎಸ್‌. ಹೆಗ್ಡೆ ಇನ್‌ಸ್ಟಿಟ್ಯೂಟ್‌ನ ಉಪ ನ್ಯಾಸಕಿ ಡಾ. ಆಶಾಲತಾ ಹೇಳಿದರು.

ತಮ್ಮ ವಿಭಾಗದ ವಿದ್ಯಾರ್ಥಿಗ ಳೊಂದಿಗೆ ಕಾರ್ಕಳ ಜೋಡುರಸ್ತೆ ಹಿರಿಯಂಗಡಿ ಶಿಲ್ಪ ಗ್ರಾಮದ ನಿವೃತ್ತ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಜಿ.ಆರ್‌. ಭಟ್‌ ಅವರ ಮನೆಗೆ ಈಚೆಗೆ ಭೇಟಿ ನೀಡಿ, ಮಾನವ ತ್ಯಾಜ್ಯದಿಂದ ಜೈವಿಕ ಅನಿಲ ತಯಾರಿಸುವ ವಿಧಾನ ಮತ್ತು ಪ್ರಯೋಜನದ ಬಗ್ಗೆ ಅಧ್ಯಯನ ನಡೆಸಿದರು.

ಈ ಜೈವಿಕ ಅನಿಲ ತಯಾರಿಸುವ ಘಟಕದಲ್ಲಿ ಮೂರು ವಿಭಾಗಗಳಿಗೆ ಮಾನವ ತ್ಯಾಜ್ಯಗಳನ್ನು ಹಾಕಲಾಗುತ್ತದೆ. ಪ್ರಥಮ ವಿಭಾಗದಲ್ಲಿ ಎಲ್ಲಾ ತ್ಯಾಜ್ಯವು ಕೆಲವು ದಿನಗಳ ಕಾಲ ಕೊಳೆತು ಮಿಥೇನ್‌ ಗ್ಯಾಸ್‌ ಉತ್ಪತ್ತಿಯಾಗುತ್ತದೆ. ಈ ಗ್ಯಾಸ್‌ನ್ನು ಕೊಳವೆ ಮೂಲಕ ಗ್ಯಾಸ್‌ ಸ್ಟವ್‌ಗೆ ಬಳಸಲಾಗುತ್ತದೆ ಎಂದ ಅವರು, ಇಂತಹ ಸಂದರ್ಶನಗಳಿಂದ ವೃತ್ತಿಪರ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಹಕಾರ ಆಗಲಿದೆ ಎಂದು ಆಶಾಲತಾ ಅಭಿಪ್ರಾಯಪಟ್ಟರು.

ವಿದ್ಯಾರ್ಥಿಗಳಾದ ಸಾಗರ್‌, ನಿತೀಕ್ಷ, ಚೇತನ್‌, ರಚಿತ, ಮಾಧುರಿ, ಸ್ನೇಹ, ದಿವಿಶ, ಜೋಸ್ಟನ್‌, ವಿಘ್ನೇಶ್‌, ಅಭಿಷೇಕ್‌ ಎನ್‌. ಮೂರ್ತಿ ಮೊದಲಾದವರು ಈ ತಂಡದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT