ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಲಾಖ್ ನಿಷೇಧಿಸಿ

Last Updated 16 ಮೇ 2017, 19:30 IST
ಅಕ್ಷರ ಗಾತ್ರ

ಮೂರು ಬಾರಿ ತಲಾಖ್‌ ಎಂದರೆ ವಿವಾಹ ವಿಚ್ಛೇದನ ಆಯಿತೆ? ಸಾವಿರಾರು ಜನರು ಹಾಗೂ ಸಂಬಂಧಿಗಳು ಕೂಡಿ ಅದ್ಧೂರಿಯಾಗಿ ಮದುವೆ ಮಾಡಿ ನವ ದಂಪತಿಗೆ ಶುಭ ಹಾರೈಸುತ್ತಾರೆ.

ಮದುವೆಯಾಗಿ ಮೂರೇ ದಿನದಲ್ಲಿ ವಿವಾಹ ವಿಚ್ಛೇದನವಾಗಿ ಮರು ಮದುವೆಯಾಗುತ್ತಾರೆ. ಇದರ ವಿರುದ್ಧ ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸುತ್ತಿದೆ. ಮುಸ್ಲಿಂ ಧಾರ್ಮಿಕ ಕಾನೂನಿನಲ್ಲಿ ಎಷ್ಟರಮಟ್ಟಿಗೆ ಮಧ್ಯಪ್ರವೇಶಿಸಬಹುದು ಎಂದು ಸುಪ್ರೀಂ ಕೋರ್ಟ್‌ ಪರಾಮರ್ಶೆ ನಡೆಸುತ್ತಿದೆ.

ಮಹಿಳಾಪರ ಹೋರಾಟಗಾರರು ಬಹಳ ಹಿಂದಿನಿಂದಲೂ ಮುಸ್ಲಿಂ ವೈಯಕ್ತಿಕ ಕಾನೂನಿನ ವಿರುದ್ಧ ಧ್ವನಿ ಎತ್ತಿದ್ದಾರೆ. ಬಹುಪತ್ನಿತ್ವ, ಏಕಪಕ್ಷೀಯ ವಿಚ್ಛೇದನ ನಿರ್ಧಾರ ಮತ್ತು ಬಾಲ್ಯ ವಿವಾಹಗಳಂತಹ ಆಚರಣೆಗಳು ಮಹಿಳೆಯರ ಮೇಲೆ ದೌರ್ಜನ್ಯಕ್ಕೆ ಅವಕಾಶ ನೀಡುತ್ತವೆ.

ಈಚೆಗೆ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ವಿಚ್ಛೇದನ ನಿಡುತ್ತಿದ್ದಾರೆ. ಇಂತಹ ವಿಚ್ಛೇದನ ಸಂವಿಧಾನ ಬದ್ಧವಾಗಿಲ್ಲ. ಇದು ಮೂಲಭೂತ ಹಕ್ಕಿನ ಉಲ್ಲಂಘನೆ. ಇಂತಹ ತಲಾಖ್‌ಗೆ ನಿಷೇಧ ಹೇರಬೇಕು.
–ಆರೀಫ್ ವಾಲೀಕಾರ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT