ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಟೈಗರ್‌ ಗಲ್ಲಿ’ಯಲ್ಲಿ ಹಾಡಿನ ಸಮಯ!

Last Updated 18 ಮೇ 2017, 19:30 IST
ಅಕ್ಷರ ಗಾತ್ರ
‘ಬ್ಯೂಟಿಫುಲ್‌ ಮನಸುಗಳು’ ಚಿತ್ರದ ನಂತರ ನೀನಾಸಂ ಸತೀಶ್‌ ಅಭಿನಯಿಸಿರುವ  ಹೊಸ ಸಿನಿಮಾ ‘ಟೈಗರ್ ಗಲ್ಲಿ’. ರವಿ ಶ್ರೀವತ್ಸ ನಿರ್ದೇಶನದ ಈ ಚಿತ್ರದ ಗೀತೆಗಳ ಧ್ವನಿಮುದ್ರಿಕೆ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಯಿತು.
 
‘ಟೈಗರ್ ಗಲ್ಲಿ’ ಚಿತ್ರೀಕರಣ ಸತೀಶ್‌ ಪಾಲಿಗೆ ಹಿತವಾದ ಅನುಭವ ನೀಡಿದೆ. ಚಿತ್ರೀಕರಣದ ವೇಳೆ ಸತೀಶ್ ಹಾಗೂ ನಿರ್ದೇಶಕ ರವಿ ಸಾಕಷ್ಟು ಬಾರಿ ಜಗಳ ಆಡಿಕೊಂಡಿದ್ದಾರಂತೆ. ಈ ಕೋಳಿಜಗಳದ ರಸಕ್ಷಣಗಳನ್ನು ಸತೀಶ್ ಕಾರ್ಯಕ್ರಮದಲ್ಲಿ ನೆನಪಿಸಿಕೊಂಡರು.
 
ಬೆಳಿಗ್ಗೆ ಏಳು ಗಂಟೆಗೆ ಆರಂಭವಾಗುತ್ತಿದ್ದ ಚಿತ್ರೀಕರಣ ತಡರಾತ್ರಿ 2 ಗಂಟೆಯವರೆಗೆ ನಡೆಯುತ್ತಿತ್ತಂತೆ. ಈ ಸುದೀರ್ಘ ಚಿತ್ರಕರಣದ ಕಾರಣದಿಂದಾಗಿ – ‘ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ನನಗೆ ಸಾಧ್ಯವಿಲ್ಲ’ ಎಂದವರು ನಿರ್ದೇಶಕರನ್ನು ಸತೀಶ್‌ ಸತಾಯಿಸಿದ್ದರಂತೆ.
 
ಜಗಳದ ಜೊತೆಗೆ ನಟನೆಯ ಕಾರಣದಿಂದಾಗಿಯೂ ಸತೀಶ್‌ಗೆ ‘ಟೈಗರ್ ಗಲ್ಲಿ’ ಸ್ಮರಣೀಯ ಅನ್ನಿಸಿದೆ. ‘ನಟನೆಗೆ ಸಂಬಂಧಿಸಿದಂತೆ ನನ್ನ ಈವರೆಗಿನ ಚಿತ್ರಗಳಲ್ಲಿ ಕಾಣಿಸಿಕೊಂಡಿರದ ಕೆಲವು ಆಯಾಮಗಳನ್ನು ಈ ಚಿತ್ರದಲ್ಲಿ ಕಾಣಬಹುದು’ ಎಂದರು ಸತೀಶ್‌.
 
ಪೂಜಾ ಲೋಕೇಶ್ ‘ಟೈಗರ್‌ ಗಲ್ಲಿ’ಯಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಅವರದು ನ್ಯಾಯಾಧೀಶೆಯ ಪಾತ್ರ. ‘ನ್ಯಾಯಾಧೀಶರ ಜೀವನ ಹೇಗಿರುತ್ತದೆ ಎಂಬುದು ನನಗೆ ಈ ಚಿತ್ರದಲ್ಲಿ ಅಭಿನಯಿಸಿದ ಕಾರಣಕ್ಕೆ ಗೊತ್ತಾಯಿತು’ ಎಂದು ಪೂಜಾ ಅನುಭವ ಹಂಚಿಕೊಂಡರು. 
 
ಭಾವನಾ ಮತ್ತು ರೋಶನಿ ಪ್ರಕಾಶ್ ತಾರಾಗಣದಲ್ಲಿರುವ ಇತರ ಪ್ರಮುಖರು. ಭಾವನಾ ಅವರದ್ದು ಇದರಲ್ಲಿ ಅಭಿನಯ ಪ್ರಧಾನ ಪಾತ್ರವಂತೆ. ‘ಸಿನಿಮಾದಲ್ಲಿ ಅಮ್ಮನ ಭಾವನೆಗಳು, ರೊಮ್ಯಾಂಟಿಕ್ ಹಾಡುಗಳು ಇವೆ’ ಎಂದರು ಭಾವನಾ. 
 
ನಿರ್ದೇಶಕರಾಗಿ ಹೆಸರು ಮಾಡಿರುವ ಶಿವಮಣಿ ಅವರು ಈ ಚಿತ್ರದಲ್ಲಿ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ‘ಈ ಸಿನಿಮಾದ ಕಾರಣದಿಂದಾಗಿ ನಾನು ನಟನೆಯನ್ನೂ ವೃತ್ತಿಯನ್ನಾಗಿ ಸ್ವೀಕರಿಸಲು ನಿರ್ಧರಿಸಿದ್ದೇನೆ’ ಎಂದು ಶಿವಮಣಿ ಹೇಳಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT