ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವದಾಸಿಯರ ಸಹಕಾರಿ ಸಂಘ ಸ್ಥಾಪನೆ ಸಭೆ

Last Updated 22 ಮೇ 2017, 8:32 IST
ಅಕ್ಷರ ಗಾತ್ರ

ಹಗರಿಬೊಮ್ಮನಹಳ್ಳಿ: ಪಟ್ಟಣದ ಡಾ.ಬಿ.ಆರ್‌.ಅಂಬೇಡ್ಕರ್ ಭವನದಲ್ಲಿ ತಾಲ್ಲೂಕು ದೇವದಾಸಿಯರ ಸಹಕಾರಿ ಸಂಘ ಸ್ಥಾಪನೆ ಹಿನ್ನೆಲೆಯಲ್ಲಿ ಪೂರ್ವ ಭಾವಿ ಸಭೆ ಹಮ್ಮಿಕೊಳ್ಳಲಾಗಿತ್ತು.

ದೇವದಾಸಿ ಮಹಿಳಾ ವಿಮೋಚನಾ ಸಂಘದ ರಾಜ್ಯ ಘಟಕದ ಗೌರವ ಅಧ್ಯಕ್ಷ ಯು. ಬಸವರಾಜ ಮಾತನಾಡಿ, ದೇವ ದಾಸಿಯರು ಸರ್ಕಾರದ ಸೌಲಭ್ಯಗಳ ಜತೆಗೆ ಉಳಿತಾಯದ ಜಾಗೃತಿ ಹೊಂದ ಬೇಕು. ಈ ಮೂಲಕ ಆರ್ಥಿಕ ಸ್ವಾವಲಂಬನೆ ಹೊಂದಬೇಕು. ದೇವ ದಾಸಿಯರ ಅಭಿವೃದ್ಧಿಗೆ ಸಹಕಾರಿ ಸಂಘ ಸಹಾಯಕವಾಗಲಿದೆ ಎಂದು ತಿಳಿಸಿದರು.

ಸಂಘದ ರಾಜ್ಯ ಘಟಕದ ಅಧ್ಯಕ್ಷೆ ಬಿ.ಮಾಳಮ್ಮ ಮಾತನಾಡಿ, ತಾಲ್ಲೂಕಿ ನಲ್ಲಿ ಒಟ್ಟು 1952 ದೇವದಾಸಿ ಯರಿದ್ದಾರೆ.  ತಲಾ ₹500 ಷೇರು ಮೊತ್ತದಲ್ಲಿ ಒಟ್ಟು 270 ಷೇರುದಾರರ ಸಹಕಾರಿ ಸಂಘ ರಚಿಸಲಾಗುವುದು. ಕಡಿಮೆ ಬಡ್ಡಿ ದರದಲ್ಲಿ ಸಾಲಸೌಲಭ್ಯ, ಅಗತ್ಯ ವಸ್ತುಗಳ ಪೂರೈಕೆ ಸಂಘದ ಉದ್ದೇಶವಾಗಿದೆ.

ಹೂವಿನಹಡಗಲಿಯ ಹಿರೇಹಡಗಲಿ ಹೊರತುಪಡಿಸಿ ಜಿಲ್ಲೆಯ ಎಲ್ಲ ಹೋಬಳಿಯಲ್ಲೂ ಸಹಕಾರ ಸಂಘ ಸ್ಥಾಪನೆ ಚಿಂತನೆ ಹೊಂದಲಾಗಿದೆ ಎಂದರು.  ಕೆ.ಅಂಜಿನಮ್ಮ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಎಂ.ದುರು ಗಮ್ಮ, ಮಗಿಮಾವಿನಹಳ್ಳಿ ಹುಲಿಗೆಮ್ಮ, ಚಾಂದ್‌ಬೀ, ತಟ್ನೆಮ್ಮ, ಎ.ಹನುಮಕ್ಕ, ಎ.ನಾಗರತ್ನಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT