ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕೊರಿಯಾ ಕ್ಷಿಪಣಿ ಪರೀಕ್ಷೆಗೆ ವಿಶ್ವಸಂಸ್ಥೆ ಖಂಡನೆ

Last Updated 23 ಮೇ 2017, 19:30 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ಉತ್ತರ ಕೊರಿಯಾ ಕಳೆದ ವಾರ ನಡೆಸಿರುವ ಕ್ಷಿಪಣಿ ಪರೀಕ್ಷೆಯನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಪ್ರಬಲವಾಗಿ ಖಂಡಿಸಿದೆ. ಅಲ್ಲದೆ, ಆ ದೇಶದ ಮೇಲೆ ಎಲ್ಲಾ ರಾಷ್ಟ್ರಗಳು ಕಠಿಣ ನಿರ್ಬಂಧ ಹೇರುವ ಪ್ರತಿಜ್ಞೆ ಮಾಡಬೇಕು ಎಂದಿದೆ.

ಉತ್ತರ ಕೊರಿಯಾದ ಮಿತ್ರರಾಷ್ಟ್ರವಾದ ಚೀನಾ ಕೂಡ ಈ ನಿಲುವನ್ನು ಬೆಂಬಲಿಸಿದೆ. ಉತ್ತರ ಕೊರಿಯಾದ ವಿಚ್ಛಿದ್ರಕಾರಿ ವರ್ತನೆಗೆ ಕಡಿವಾಣ ಹಾಕಲು ನಿರ್ಬಂಧ ಸೇರಿದಂತೆ ಇತರೆ ಮಹತ್ವದ ಕ್ರಮಗಳನ್ನು ಕೈಗೊಳ್ಳಲೂ ಮಂಡಳಿ ಒಪ್ಪಿಗೆ  ಸೂಚಿಸಿದೆ.

ಕ್ಷಿಪಣಿ ಪರೀಕ್ಷೆಯ ಸಂಬಂಧ ಮುಂದಿನ ಕ್ರಮಗಳ ಕುರಿತು ಚರ್ಚಿಸಲು ಜಪಾನ್, ದಕ್ಷಿಣ ಕೊರಿಯಾ, ಅಮೆರಿಕದ ಮನವಿಯ ಮೇರೆಗೆ ಭದ್ರತಾ ಮಂಡಳಿಯು ಮಂಗಳವಾರ ತುರ್ತು ಸಭೆ ನಡೆಸಿತ್ತು.

ಭವಿಷ್ಯದಲ್ಲಿ ಪರಮಾಣು ಮತ್ತು ಕ್ಷಿಪಣಿ ಪರೀಕ್ಷೆ ನಡೆಸಬಾರದು ಎಂದು ಮಂಡಳಿಯು ಉತ್ತರ ಕೊರಿಯಾವನ್ನು ಆಗ್ರಹಿಸಿದೆ. ಅಮೆರಿಕವನ್ನು ಗುರಿಯಾಗಿಸಿಕೊಂಡು ಹಾರಬಲ್ಲ ಖಂಡಾಂತರ ಕ್ಷಿಪಣಿ ಪರೀಕ್ಷೆ ಸರಣಿಯ ಹೊಸ ಪ್ರಯೋಗ ಇದಾಗಿದೆ.

ಉತ್ತರ ಕೊರಿಯಾ ಟೀಕೆ: ದಿಗ್ಬಂಧನ ವಿಧಿಸಬೇಕು ಎಂಬ ವಿಶ್ವಸಂಸ್ಥೆಯ ಹೇಳಿಕೆಯನ್ನು ಉತ್ತರ ಕೊರಿಯಾ ಟೀಕಿಸಿದೆ. ಇದೊಂದು ಹಾಸ್ಯಸ್ಪದ ಕ್ರಮ ಎಂದು ವ್ಯಂಗ್ಯವಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT