ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ದೇಶಪೂರ್ವಕ ಸುಸ್ತಿದಾರ ಪಟ್ಟಿ ಬಹಿರಂಗ ಇಲ್ಲ: ಆರ್‌ಬಿಐ

Last Updated 23 ಮೇ 2017, 19:30 IST
ಅಕ್ಷರ ಗಾತ್ರ

ನವದೆಹಲಿ : ಉದ್ದೇಶಪೂರ್ವಕ ಸುಸ್ತಿದಾರರ ಪಟ್ಟಿ  ಬಿಡುಗಡೆ ಮಾಡಲು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ನಿರಾಕರಿಸಿದೆ.
ಸುಸ್ತಿದಾರರ ಪಟ್ಟಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್‌ 2015ರಲ್ಲಿಯೇ ಸೂಚನೆ ನೀಡಿತ್ತು. ಹೀಗಿದ್ದರೂ ಸಹ ಆರ್‌ಬಿಐ ಮಾಹಿತಿ ಬಹಿರಂಗ ಪಡಿಸದೇ ಇರಲು ನಿರ್ಧರಿಸಿದೆ.

ವಾಣಿಜ್ಯ  ರಹಸ್ಯ ಮತ್ತು ದೇಶದ ಆರ್ಥಿಕ ಹಿತದೃಷ್ಟಿಯಿಂದ ಮಾಹಿತಿಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎನ್ನುವ ಕಾರಣವನ್ನು ಆರ್‌ಬಿಐ ನೀಡಿದೆ. ಆರ್‌ಬಿಐ ಕಾಯ್ದೆ 1934ರ 45ಇ ಸೆಕ್ಷನ್‌ ಅಡಿಯಲ್ಲಿ ಸಾಲಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಬಹಿರಂಗಪಡಿಸದೇ ಇರಲು ನೀಡಿರುವ ಅವಕಾಶವನ್ನೂ ಉಲ್ಲೇಖಿಸಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ವಸೂಲಿಯಾಗದ ಸಾಲವು  2016 ಡಿಸೆಂಬರ್‌ 31ರ ಅಂತ್ಯಕ್ಕೆ ₹6.06 ಲಕ್ಷ ಕೋಟಿ

ಹಲವು ಅರ್ಜಿಗಳು: ಸುಸ್ತಿದಾರರ ಮಾಹಿತಿ ಬಹಿರಂಗಪಡಿಸುವಂತೆ ಮಾಹಿತಿ ಹಕ್ಕು ಕಾಯ್ದೆಯಡಿ (ಆರ್‌ಟಿಐ) ಬಹಳಷ್ಟು ಅರ್ಜಿಗಳು ಸಲ್ಲಿಕೆಯಾಗಿವೆ. ಒಂದು ಕೋಟಿ ಮತ್ತು ಅದಕ್ಕೂ ಹೆಚ್ಚಿನ ಮೊತ್ತದ ಸಾಲ ಬಾಕಿ ಉಳಿಸಿಕೊಂಡಿರುವವರ ಮಾಹಿತಿ ಬಹಿರಂಗ ಪಡಿಸುವಂತೆ ಆರ್‌ಟಿಐ ಕಾರ್ಯಕರ್ತ ಸುಭಾಷ್‌ ಅಗರ್ವಾಲ್‌   ಅರ್ಜಿ ಸಲ್ಲಿಸಿದ್ದರು.  ಈ ಹಿಂದೆ, 2015ರ ಡಿಸೆಂಬರ್‌ನಲ್ಲಿಯೂ ಇದೇ ಉದ್ದೇಶದಿಂದ ಆರ್‌ಟಿಐ ಅರ್ಜಿಯೊಂದು ಸಲ್ಲಿಕೆಯಾಗಿತ್ತು.

₹500 ಕೋಟಿಗೂ ಹೆಚ್ಚಿನ ಮೊತ್ತದ ಸಾಲ ಮರು ಪಾವತಿ ಮಾಡದ ಉದ್ದಿಮೆ ಸಂಸ್ಥೆಗಳ ಪಟ್ಟಿಯನ್ನು ತನಗೆ ಸಲ್ಲಿಸುವಂತೆ ಸುಪ್ರೀಂಕೋರ್ಟ್‌, ರಿಸರ್ವ್‌ ಬ್ಯಾಂಕ್‌ಗೆ ಸೂಚಿಸಿತ್ತು. ಅದರಂತೆ, ತಲಾ ₹500 ಕೋಟಿಗಿಂತ ಹೆಚ್ಚು ಸಾಲ ಪಡೆದ  ಇನ್ನೂ 57 ಸುಸ್ತಿದಾರರಿಂದ ಬ್ಯಾಂಕ್‌ಗಳಿಗೆ ಒಟ್ಟು ₹85 ಸಾವಿರ ಕೋಟಿ ಸಾಲ ಮರು ಪಾವತಿಯಾಗಬೇಕಿದೆ ಎಂದು ಆರ್‌ಬಿಐ ಸುಪ್ರೀಂಕೋರ್ಟ್‌ಗೆ 2016ರ ಅಕ್ಟೋಬರ್‌ನಲ್ಲಿ ವರದಿ ಸಲ್ಲಿಸಿದ ವರದಿಯಲ್ಲಿ ತಿಳಿಸಿತ್ತು. ಆದರೆ ಸುಸ್ತಿದಾರರ ಹೆಸರು ಬಹಿರಂಗಪಡಿಸಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT