ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಹತ್ಯೆ ನಿಷೇಧಿಸಿರುವ ಕೇಂದ್ರ ಸರ್ಕಾರ ಮೀನು ತಿನ್ನುವುದನ್ನೂ ನಿಷೇಧಿಸಬಹುದು: ಪಿಣರಾಯಿ ವಿಜಯನ್‌

Last Updated 27 ಮೇ 2017, 17:02 IST
ಅಕ್ಷರ ಗಾತ್ರ

ತಿರುವನಂತಪುರ: ‘ಕೇಂದ್ರದ ಬಿಜೆಪಿ ಸರ್ಕಾರ ಗೋಹತ್ಯೆ ನಿಷೇಧ ಆದೇಶದ ಮೂಲಕ ಆರ್‌ಎಸ್ಎಸ್‌ ಅಜೆಂಡಾಗಳನ್ನು ಜಾರಿಗೊಳಿಸುತ್ತಿದೆ’‍ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹೇಳಿದ್ದಾರೆ.

ಕೇಂದ್ರ ಸರ್ಕಾರದ ಗೋಹತ್ಯೆ ನಿಷೇಧ ನಿರ್ಧಾರಕ್ಕೆ ಪ್ರತಿಕ್ರಿಯಿಸಿರುವ ಅವರು, ‘ಬಿಜೆಪಿ ಸರ್ಕಾರ ಈಗ ಗೋಹತ್ಯೆ ನಿಷೇಧಿಸಿದೆ. ಮುಂದೆ ಈ ಸರ್ಕಾರ ಮೀನು ತಿನ್ನುವುದನ್ನೂ ನಿಷೇಧಿಸಬಹುದು. ಹೀಗಾಗಿ ಈ ನಿಷೇಧ ಆದೇಶದ ವಿರುದ್ಧ ಜನ ದನಿ ಎತ್ತಬೇಕು’ ಎಂದಿದ್ದಾರೆ.

‘ಭಾರತ ಹಲವು ಧರ್ಮ, ಹಲವು ಸಂಸ್ಕೃತಿಗಳ ರಾಷ್ಟ್ರ. ಬಹುತ್ವವೇ ಭಾರತದ ಜೀವಾಳ. ಕೇಂದ್ರ ಸರ್ಕಾರ ಈ ಬಹುತ್ವವನ್ನು ಒಡೆಯುವಂಥ ಆದೇಶವನ್ನು ಇಂದು ಹೊರಡಿಸಿದೆ’ ಎಂದು ಅವರು ಹೇಳಿದ್ದಾರೆ.

‘ಗೋ ರಕ್ಷಣೆ ಹೆಸರಿನಲ್ಲಿ ಸಂಘ ಪರಿವಾರ ಈವರೆಗೆ ದೇಶದಾದ್ಯಂತ ಹಿಂಸಾಚಾರಗಳನ್ನು ನಡೆಸುತ್ತಾ ಬಂದಿದೆ. ಈಗ ಹೊಸ ಆದೇಶವು ಎಲ್ಲಾ ಜಾನುವಾರುಗಳನ್ನು ಕೊಲ್ಲುವುದರ ಮೇಲೆ ನಿಷೇಧ ಹೇರಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT