ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ಸಂಸ್ಥೆಯ ಹೊಂಗೆ ಸಸಿ ಅಭಿಯಾನ

Last Updated 27 ಮೇ 2017, 9:35 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ತಾಲ್ಲೂಕಿನಲ್ಲಿ ಹೊಂಗೆ ಸಸಿಗಳನ್ನು ನೆಟ್ಟು ಬೆಳೆಸುವ ಹೊಂಗೆ ಸಸಿ ಅಭಿಯಾನಕ್ಕೆ ನಗರದ ಶ್ರೀದೇವರಾಜ ಅರಸ್ ಶಿಕ್ಷಣ ಸಂಸ್ಥೆ ಮುಂದಾಗಿದೆ.
ಕಳೆದ ವರ್ಷದಿಂದ ಇದಕ್ಕಾಗಿ ಸಂಸ್ಥೆ ವಿನೂತನ ಯೋಜನೆಯನ್ನು ಜಾರಿಗೆ ತಂದಿದ್ದು, ಸಸಿ ಬೆಳೆಸುವ ಆಸಕ್ತರಿಗೆ ಉಚಿತವಾಗಿ ಸಸಿ ವಿತರಿಸಲಾಗುತ್ತಿದೆ.

ಈ ವರ್ಷದ ಯೋಜನೆಯಡಿ ಈಗಾಗಲೇ 50 ಸಾವಿರ ಹೊಂಗೆ ಸಸಿಗಳನ್ನು ಇಲ್ಲಿನ ಆರ್‌ಎಲ್‌ಜೆ ಐಟಿ ಕ್ಯಾಂಪಸ್ ಆವರಣದ ತೋಟಗಾರಿಕಾ ಕ್ಷೇತ್ರದಲ್ಲಿ ಬೆಳೆಸಲಾಗಿದೆ. ವಿವಿಧ ಹೋಬಳಿಗಳ ಹಲವು ಗ್ರಾಮಗಳ ಸರ್ಕಾರಿ ಪ್ರೌಢ ಶಾಲೆಗಳು ಯೋಜನೆಯ ಉಪಯೋಗ ಪಡೆದು ಸಸಿ ನೆಡುವ ಅಭಿಯಾನ ಆರಂಭಿಸಿವೆ.

ಈ ಬಗ್ಗೆ ಮಾಹಿತಿ ನೀಡಿರುವ ಸಂಸ್ಥೆಯ ಸಂಸ್ಥಾಪಕ ಆರ್.ಎಲ್.ಜಾಲಪ್ಪ, ಪರಿಸರ ಸಂವರ್ಧನೆಗಾಗಿ ಎಲ್ಲರೂ ಕಟಿಬದ್ಧರಾಗಬೇಕು. ಮುಂದಿನ ದಿನಗಳಲ್ಲಿ ನೈಜ ಪರಿಸರ ಕಾಳಜಿಯೊಂದೇ ಉತ್ತಮ ಬದುಕು ನೀಡಬಲ್ಲದು. ಗಣನೀಯವಾಗಿ ಕಡಿಮೆಯಾಗುತ್ತಿರುವ ಹಸಿರಿನ ಪ್ರಮಾಣವನ್ನು ಪರಿಸರದಲ್ಲಿ ಹೆಚ್ಚಿಸಬೇಕಿದೆ ಎಂದರು.ಗಿಡ ನೆಟ್ಟು ಬೆಳೆಸುವ ಉತ್ಸಾಹ ಇರುವ ಯಾರೇ ಬಂದರೂ ಉಚಿತವಾಗಿ ಗಿಡಗಳನ್ನು ನೀಡಲಾಗುತ್ತದೆ ಎಂದರು.

ನಿರಂತರ ಯೋಜನೆ: ಸಂಸ್ಥೆಯ ನಿರ್ದೇಶಕ ಜೆ.ರಾಜೇಂದ್ರ ಮಾಹಿತಿ ನೀಡಿ, ಈ ವರ್ಷ 50 ಸಾವಿರ ಸಸಿ ಬೆಳೆಸುವ ಉದ್ದೇಶವಿದೆ. ಮುಂದಿನ ದಿನಗಳಲ್ಲಿ ಹಣ್ಣಿನ ಗಿಡಗಳೂ ಸೇರಿದಂತೆ ವಿವಿಧ ಜಾತಿಯ ಮತ್ತಷ್ಟು ಸಸಿಗಳನ್ನು ಬೆಳೆಸಲು ಉತ್ತೇಜನ ನೀಡಲಾಗುವುದು ಎಂದರು. ಆಸಕ್ತರು ಮಾಹಿತಿಗಾಗಿ ಮೊ: 99801 38858, 98866 00734.

* *

ನೆರಳು ನೀಡುವ ಮರಗಳನ್ನು ಬೆಳೆಸುವ ಹೊಣೆಗಾರಿಕೆಯನ್ನು ಎಲ್ಲರೂ ನಿಭಾಯಿಸಬೇಕು. ಹೀಗಾಗಿ ಈ ಉತ್ತೇಜನಕಾರಿ ಯೋಜನೆಯನ್ನು ಜಾರಿಗೆ ತರಲಾಗಿದೆ
ಆರ್.ಎಲ್.ಜಾಲಪ್ಪ,  ಶಿಕ್ಷಣ ಸಂಸ್ಥೆ ಸಂಸ್ಥಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT