ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಳಿಂಬೆ ಬೆಲೆ ಕುಸಿತ: ರೈತ ಕಂಗಾಲು

Last Updated 28 ಮೇ 2017, 11:06 IST
ಅಕ್ಷರ ಗಾತ್ರ

ಕೂಡ್ಲಿಗಿ: ತಾಲ್ಲೂಕಿನಲ್ಲಿ ತೀವ್ರ ಬರಗಾಲ ಇದ್ದು ತೋಟಗಾರಿಕೆ ಬೆಳೆಗಳನ್ನು ಉಳಿಸಿ ಕೊಳ್ಳಲು ರೈತರು ಇನ್ನಿಲ್ಲದ ಹರ ಸಹಾಸ ಮಾಡುತ್ತಿದ್ದಾರೆ. ತಮ್ಮ ಜಮೀನುಗಳಲ್ಲಿ ಉತ್ತಮ ಬೆಳೆ ಬೆಳೆದು ಅಧಿಕ ಲಾಭ ಮಾಡಿಕೊಳ್ಳಬೇಕು ಎಂಬ ದೃಷ್ಟಿಯಿಂದ ತಾಲ್ಲೂಕಿನಾದ್ಯಂತ ಅನೇಕ ರೈತರು ಪಪ್ಪಾಯಿ, ದಾಳಿಂಬೆ, ವಿಳ್ಯಾದೆಲೆ ಸೇರಿ ವಿವಿಧ ದೀರ್ಘಾವಧಿ ಬೆಳೆ ಬೆಳೆಯು ತ್ತಿದ್ದಾರೆ.

ಅಂತವರಲ್ಲಿ ತಾಲ್ಲೂಕಿನ ಇಮಾಡಾಪುರ ಗ್ರಾಮದ ವೈ.ಎಂ. ವೀರೇಶ್ ಹಾಗೂ ವೈ.ಎಂ. ಮಧುಚಂದ್ರ ಸಹೋ ದರರು ತಮ್ಮ ಜಮೀನಿನಲ್ಲಿ ಬೆಳೆದಿರುವ ದಾಳಿಂಬೆಯನ್ನು ಉಳಿಸಿಕೊಳ್ಳಲು ಕಳೆದ ನಾಲ್ಕು ತಿಂಗಳಿಂದ ಟ್ರಾಕ್ಟರ್ ಟ್ಯಾಂಕರ್ ಮೂಲಕ ನೀರುಣಿಸಿ ಗಿಡಗಳನ್ನು ರಕ್ಷಿಸಿ ಕೊಳ್ಳುವ ಜತೆ ಉತ್ತಮ ಇಳುವರಿಯನ್ನು ಪಡೆದಿದ್ದಾರೆ. ಆದರೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದೆ ಕಂಗಾಲಾಗಿದ್ದಾರೆ.

ಈ ಸಹೋದರರು ತಮ್ಮ 6 ಎಕರೆ ಜಮೀನಿನಲ್ಲಿ ಮೂರು ವರ್ಷಗಳ ಹಿಂದೆ ದಾಳಿಂಬೆ ಗಿಡಗಳನ್ನು ನಾಟಿ ಮಾಡಿ ದ್ದರು. ಈ ಸಂದರ್ಭದಲ್ಲಿ ಸಾಕಷ್ಟು ಮಳೆ ಆಗಿತ್ತು. ಅಲ್ಲದೆ ಬೇಸಿಗೆಯಲ್ಲಿಯೂ ಕೊಳವೆ ಬಾವಿಗಳಲ್ಲಿ ಉತ್ತಮ ನೀರು ಸಿಗುತಿತ್ತು. ಇದನ್ನು ನಂಬಿಕೊಂಡ ಇವರು ತಮ್ಮ ಹೊಲದಲ್ಲಿದ್ದ 2 ಕೊಳವೆ ಬಾವಿಗಳ ನೀರಿನಿಂದಲೇ ದಾಳಿಂಬೆ ಗಿಡಗಳನ್ನು ನಾಟಿ ಮಾಡಿದ್ದರು. ಆದರೆ ಕಳೆದ ಮುಂಗಾರಿನಿಂದ ತಾಲ್ಲೂಕಿನಲ್ಲಿ ಬರಗಾಲ ಉಂಟಾಗಿ, ಇದ್ದ ಕೊಳವೆ ಬಾವಿಗಳು ಬತ್ತಿ ಹೋಗಿದ್ದವು.

ಇದ ರಿಂದ ಸುಮಾರು 13 ಕೊಳವೆ ಬಾವಿ ಕೊರೆಸಿದರೂ ಹನಿ ನೀರು ಸಿಗದಾಯಿತು. ಇದರಿಂದ ವಿಚಲಿತರಾಗದೆ ಹೇಗಾ ದರು ಮಾಡಿ ಮೂರು ವರ್ಷ ಬೆಳೆಸಿದ್ದ ಗಿಡಗಳನ್ನು ರಕ್ಷಸಿಕೊಳ್ಳಬೇಕು ಎಂದು ನಿರ್ಧರಿಸಿ, ಟ್ರ್ಯಾಕ್ಟರ್ ಟ್ಯಾಂಕರ್ ಮೂಲಕ ನೀರು ತಂದು ಕೃಷಿ ಹೊಂಡ ದಲ್ಲಿ ಸಂಗ್ರಹಿಸಿ, ಹನಿ ನೀರಾವರಿ ಮೂಲಕ ಗಿಡಗಳಿಗೆ ಬಿಡಲಾರಂಭಿಸಿ ದರು. ಪ್ರತಿ ದಿನ ಸುಮಾರು 20 ಟ್ಯಾಂಕರ್ ನೀರು ತರುತ್ತಿದ್ದರು.

ಪ್ರತಿ ಟ್ಯಾಂಕರ್ ನೀರಿಗೆ ₹ 100, ಟ್ಯಾಂಕರ್ ಹಾಗೂ ಟ್ರ್ಯಾಕ್ಟರ್ ಸೇರಿ ₹ 600 ಬಾಡಿಗೆ ಹಾಗೂ ₹ 1,500 ಡಿಸೆಲ್ ಖರ್ಚನ್ನು ಭರಿಸಬೇಕಾಗಿತ್ತು. ಇದರ ಜತೆಗೆ ಚಾಲಕನ ಕೂಲಿ ₹ 300 ನೀಡಬೇಕು. ಇದರಿಂದ ದಿನಕ್ಕೆ ₹ 4,400 ಖರ್ಚನ್ನು ಭರಿಸಿದ್ದಾರೆ. ಇದರಂತೆ ಸುಮಾರು ನಾಲ್ಕು ತಿಂಗಳು ಟ್ಯಾಂಕರ್ ಮೂಲಕವೇ ನೀರುಣಿಸಿ ಗಿಡಗಳ ರಕ್ಷಣೆ ಮಾಡಿದ್ದಉ. ಅಲ್ಲದೆ ಉತ್ತಮ ಫಸಲನ್ನು ಪಡೆದಿದ್ದಾರೆ. ಆದರೆ ಗಿಡಗಳಲ್ಲಿ ಬಿಟ್ಟ ಹಣ್ಣನ್ನು ಬಿಡಿ ಸಲು ದಿನಕ್ಕೆ ₹ 150ರಂತೆ 30 ಜನರಿಗೆ ಕೂಲಿ ನೀಡಬೇಕು.

ಬಿಡಿಸಿದ ಹಣ್ಣು ಗಳನ್ನು ಗಾತ್ರಕ್ಕೆ ತಕ್ಕಂತೆ ಪ್ರತ್ಯೇಕಿಸಿ ಬಾಕ್ಸ್ ಮಾಡಲು ತಲಾ ₹ 500 ಕೂಲಿ ಪಡೆದು 8 ಜನ ಕೆಲಸ ಮಾಡುತ್ತಾರೆ. ಇದಲ್ಲದೆ ಗೊಬ್ಬರ, ಔಷಧಕ್ಕಾಗಿ ಸುಮಾರು ₹ 8 ಲಕ್ಷ ಖರ್ಚು ಮಾಡಿದ್ದಾರೆ. ಇಷ್ಟೆಲ್ಲ ಖರ್ಜು ಮಾಡಿ ಬೆಳೆದ ಬೆಳೆಗೆ ಮಾರು ಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗುತ್ತಿಲ್ಲ. ಇದರಿ ಂದ ಸುಮಾರು ₹ 2 ಲಕ್ಷದಿಂದ 3 ಲಕ್ಷ ನಷ್ಟ ಎದುರಿಸಬೇಕಾಗಿದೆ ಎಂದು ತಮ್ಮ ಅಳಲು ತೋಡಿಕೊಳ್ಳುವ ರೈತ ವೀರೇಶ್ ಸಂಕಷ್ಟದಲ್ಲಿರುವ ನಮ್ಮಂತಹ ರೈತರ ನೆರವಿಗೆ ಸರ್ಕಾರ ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ.

* * 

ನಷ್ಟದ  ಭೀತಿ
ಕಳೆದ ಹಂಗಾಮಿನಲ್ಲಿ ಕಡಿಮೆ ಖರ್ಚಿನಲ್ಲಿಉತ್ತಮ ಫಸಲು ಪಡೆದಿದು ಸ್ವಲ್ಪ ಲಾಭ ಪಡೆದಿ ದ್ದೆವು. ಆದರೆ ಈ ಬಾರಿ ಮುಂಗಾರು ವೈಫಲ್ಯದಿಂದ ಬೆಳೆ ನಿಂತಿದ್ದ ಗಿಡ ರಕ್ಷಿಸಿಕೊಳ್ಳಲು ನೀರಿಗಾಗಿಯೇ ಹೆಚ್ಚು ಹಣ ಖರ್ಚು ಮಾಡಿ ಫಸಲು ಪಡೆ ದಿದ್ಡೇವೆ. ಆದರೂ ಸೂಕ್ತ ಬೆಲೆ ಸಿಗದೆ ನಷ್ಟದ ಭೀತಿಯಲ್ಲಿದ್ದೇವೆ ಎಂದು ದಾಳಿಂಬೆ ಬೆಳೆಗಾರ ವೈ.ಎಂ. ಮಧುಚಂದ್ರ ಆತಂಕ ವ್ಯಕ್ತಪಡಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT