ಯಾಂಗೂನ್: ಸೈನಿಕರು ಮತ್ತು ಅವರ ಕುಟುಂಬದವರು ಸೇರಿದಂತೆ 116 ಮಂದಿಯನ್ನು ಹೊತ್ತ ಮ್ಯಾನ್ಮಾರ್ ಸೇನಾ ವಿಮಾನದ ಅವಶೇಷ ಬುಧವಾರ ಸಂಜೆ ಅಂಡಮಾನ್ ಸಮುದ್ರದಲ್ಲಿ ಪತ್ತೆಯಾಗಿದೆ.

ದವೇ ನಗರದಿಂದ 218 ಕಿಲೋ ಮೀಟರ್ ದೂರದಲ್ಲಿರುವ ಸಮುದ್ರದಲ್ಲಿ ವಿಮಾನದ ಬಿಡಿ ಭಾಗಗಳು ಸಿಕ್ಕಿವೆ ಎಂದು ಮೈಯಿಕ್ ನಗರದ
ಪ್ರವಾಸೋದ್ಯಮ ಇಲಾಖೆ ಅಧಿಕಾರಿ ನೈಂಗ್ ಲಿನ್ ಝಾವ್ ತಿಳಿಸಿದ್ದಾರೆ.

ಮೈಯಿಕ್ ಹಾಗೂ ಯಾಂಗೂನ್ ನಡುವಿನ ಮಾರ್ಗದಲ್ಲಿ ಸಂಚರಿಸುವ ವೇಳೆ ಬುಧವಾರ ಮಧ್ಯಾಹ್ನ 1.35ರ ವೇಳೆ (ಯಾಂಗೂನ್ ಕಾಲಮಾನ) ವಿಮಾನದ ಸಂಪರ್ಕ ಕಡಿತಗೊಂಡಿತ್ತು. ವಿಮಾನದ ಹುಡುಕಾಟಕ್ಕೆ ನಾಲ್ಕು ನೌಕಾಪಡೆ ಹಡಗು ಮತ್ತು ಎರಡು ವಿಮಾನವನ್ನು ಕಳುಹಿಸಲಾಯಿತು. ವಿಮಾನ ಕಣ್ಮರೆಯಾಗುವ ಹೊತ್ತಿಗೆ ಮೈಯಿಕ್ ಮತ್ತು ಯಾಂಗೊನ್ ನಗರಗಳ ದಕ್ಷಿಣ ದಿಕ್ಕಿಗೆ 18ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿತ್ತು.

ದವೆ, ಮ್ಯಾನ್ಮಾರ್‌ನ ವಾಣಿಜ್ಯ ರಾಜಧಾನಿಯಾಗಿದೆ. ‘ತಾಂತ್ರಿಕ ದೋಷದಿಂದ ಅಪಘಾತಉಂಟಾಗಿರಬಹುದು ಎಂದು ನಾವು ಭಾವಿಸು
ತ್ತೇವೆ. ಅಲ್ಲಿ ವಾತಾವರಣ ಅನುಕೂಲಕರವಾಗಿತ್ತು’ ಎಂದು ಯಂಗೊನ್ ವಿಮಾನ ನಿಲ್ದಾಣ ಸಿಬ್ಬಂದಿ ಪ್ರತಿಕ್ರಿಯೆ ನೀಡಿದ್ದಾರೆ. ನೌಕಾಪಡೆ ಸಮುದ್ರದಲ್ಲಿ ಶೋಧ ಕಾರ್ಯದಲ್ಲಿ ನಿರತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.