ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಲ್ಲ ಸಾಹಿತ್ಯದ ಮೇಲೆ ಭಾಗವತ ಪ್ರಭಾವ’

Last Updated 14 ಜೂನ್ 2017, 19:49 IST
ಅಕ್ಷರ ಗಾತ್ರ

ಬೆಂಗಳೂರು:  ‘ದೇಶದ ಎಲ್ಲ ಭಾಷೆಗಳು ಹಾಗೂ ಕಾಲಘಟ್ಟಗಳ ಸಾಹಿತ್ಯದ ಮೇಲೆ ಭಾಗವತ ಪ್ರಭಾವ ಬೀರಿದೆ’ ಎಂದು ಶತಾವಧಾನಿ ಆರ್. ಗಣೇಶ್ ಹೇಳಿದರು.

ಭಾರತೀಯ ವಿದ್ಯಾಭವನ ಮತ್ತು ಇಸ್ಕಾನ್‌ ಸಂಸ್ಥೆಯ ಆಶ್ರಯದಲ್ಲಿ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಭಾಗವತ ಸಂದೇಶ’ ರಾಷ್ಟ್ರೀಯ ಅಧಿವೇಶನದಲ್ಲಿ ಅವರು ಮಾತನಾಡಿದರು.

‘ಭಾರತೀಯ ಸಾಹಿತ್ಯ, ಸಂಗೀತ, ನೃತ್ಯ ಮತ್ತು ರಂಗಭೂಮಿ ಪ್ರಕಾರಗಳಿಗೆ ಭಾಗವತ ಪ್ರೇರಣೆಯಾಗಿದೆ. ಕನ್ನಡದಲ್ಲಿ  ದಾಸ ಸಾಹಿತ್ಯ, ಕುವೆಂಪು ಮತ್ತು ಎಚ್.ಎಸ್.ವೆಂಕಟೇಶಮೂರ್ತಿ ಅವರ ಸಾಹಿತ್ಯಕ್ಕೂ ಸ್ಫೂರ್ತಿಯಾಗಿದೆ. ಚಲನಚಿತ್ರಗಳಿಗೂ ಪ್ರೇರಣೆ ನೀಡಿದೆ’ ಎಂದರು.

ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಡಾ.ಪದ್ಮಾಶೇಖರ್‌ ಮಾತನಾಡಿ, ‘ಭಾರತೀಯ ಇತಿಹಾಸ ಮತ್ತು ಸಂಸ್ಕೃತಿಯ ಮೇಲೆ ಬೆಳಕು ಚೆಲ್ಲಲು ಭಾಗವತ ನೆರವಾಗುತ್ತದೆ. ದ್ರೌಪದಿ ವಸ್ತ್ರಾಪಹರಣ ಮತ್ತು

ಸೀತೆಯ ಅಗ್ನಿ ಪ್ರವೇಶ ಪ್ರಶ್ನಾರ್ಹ ವಾ ದರೂ, ಇಂದಿನ ಹೆಣ್ಣಿನ ಶೋಷಣೆಯ ಮುನ್ಸೂಚನೆ ಆಗಲೇ ಇತ್ತು’ ಎಂದು ತಿಳಿಸಿದರು. ಈ ಅಧಿವೇಶನವು ಜೂನ್‌ 18ರವರೆಗೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT