ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25ರಂದು ಚಿಕ್ಕಬಳ್ಳಾಪುರದಲ್ಲಿ ಕೆ.ಎ.ನೆಟ್ಟಕಲ್ಲಪ್ಪ ಸ್ಮಾರಕ ಓಟ

Last Updated 21 ಜೂನ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರಜಾವಾಣಿ’ ‘ಡೆಕ್ಕನ್‌ ಹೆರಾಲ್ಡ್‌’ ಪ್ರಾಯೋಜಕತ್ವದ ಡೆಕ್ಕನ್‌ ಅಥ್ಲೆಟಿಕ್‌ ಕ್ಲಬ್‌ ಆಶ್ರಯದಲ್ಲಿ ಕೆ.ಎ. ನೆಟ್ಟಕಲ್ಲಪ್ಪ ಸ್ಮಾರಕ 2017ರ ಸಾಲಿನ ರಾಜ್ಯಮಟ್ಟದ ರಸ್ತೆ ಓಟದ ಸ್ಪರ್ಧೆ ಚಿಕ್ಕಬಳ್ಳಾಪುರದಲ್ಲಿ ಜೂನ್‌ 25ರಂದು ನಡೆಯಲಿದೆ.

ಪುರುಷರ ವಿಭಾಗದಲ್ಲಿ 12ಕಿ.ಮೀ. ಮತ್ತು ಮಹಿಳಾ ವಿಭಾಗದಲ್ಲಿ 6ಕಿ.ಮೀ. ಓಟದ ಸ್ಪರ್ಧೆ ಇದ್ದರೆ, 16 ವರ್ಷ ವಯಸ್ಸಿನೊಳಗಿನ ಬಾಲಕ ಮತ್ತು ಬಾಲಕಿಯರ ವಿಭಾಗಗಳಲ್ಲಿ 2.5ಕಿ.ಮೀ. ದೂರದ ಸ್ಪರ್ಧೆ ಇರುತ್ತದೆ. ಚಿಕ್ಕಬಳ್ಳಾಪುರದ ಸರ್ಕಾರಿ ಜೂನಿಯರ್‌ ಕಾಲೇಜಿನ ಮುಂಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ. ಓಟಗಾರರು ನಂದಿ ಬೆಟ್ಟ ರಸ್ತೆಯಲ್ಲಿ ಸಾಗಿ, ಕಂದಾವರ ಬಾಗಿಲು, ಕಂದಾವರ, ತೀರನಹಳ್ಳಿ ಗಳನ್ನು ಹಾದು ಭೋಗ ನಂದೀಶ್ವರ ದೇವಸ್ಥಾನವನ್ನು ತಲುಪಿ ಹಾದಿಯಲ್ಲಿ ವಾಪಸು ಜೂನಿಯರ್‌ ಕಾಲೇಜು ಬಳಿ ತಲುಪಬೇಕು.

ಪುರುಷ ಮತ್ತು ಮಹಿಳಾ ವಿಭಾಗಗಳಲ್ಲಿ ಮೊದಲ ಆರು ಸ್ಥಾನಗಳನ್ನು ಗೆದ್ದವರಿಗೆ ಕ್ರಮವಾಗಿ ₹5,000, ₹3,500, ₹2,500, ₹1,500, ₹650 ಮತ್ತು ₹500 ನಗದು ಬಹುಮಾನ ನೀಡಲಾಗುವುದು. ಕ್ರಮವಾಗಿ ಏಳರಿಂದ ಹತ್ತರವರೆಗಿನ ಸ್ಥಾನ ಪಡೆದವರು ತಲಾ ₹350 ಪಡೆಯಲಿದ್ದಾರೆ. ಬಾಲಕ ಮತ್ತು ಬಾಲಕಿಯರ ವಿಭಾಗಗಳಲ್ಲಿ ಮೊದಲ ಮೂರು ಸ್ಥಾನ ಪಡೆಯುವವರಿಗೆ ಕ್ರಮವಾಗಿ ₹1,500, ₹1,000 ಮತ್ತು ₹750  ಬಹುಮಾನ ನೀಡಲಾಗುವುದು. ನಂತರದ ಏಳು ಸ್ಥಾನ ಪಡೆದವರಿಗೆ ಅರ್ಹತಾ ಪತ್ರ  ನೀಡಲಾಗುವುದು. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರಿಗೆ ಪ್ರವೇಶ ಶುಲ್ಕ ಇರುವುದಿಲ್ಲ.

ಬಾಲಕ ಮತ್ತು ಬಾಲಕಿಯರ ವಿಭಾಗಗಳಲ್ಲಿ ಸ್ಪರ್ಧಿಸುವವರು ಜನ್ಮ ದಿನಾಂಕವನ್ನು ದೃಢೀಕರಿಸುವ ದಾಖಲೆ ಪತ್ರವನ್ನು ತರಬೇಕು. ಬಾಲಕ ಮತ್ತು ಬಾಲಕಿಯರ ವಿಭಾಗದ ಸ್ಪರ್ಧಿಗಳು 30–6–2001 ರ ನಂತರ ಜನಿಸಿದವರಾಗಿರಬೇಕು. ದೂರದಿಂದ ಬರುವ ಸ್ಪರ್ಧಿಗಳಿಗೆ ಉಚಿತ ವಸತಿ ವ್ಯವಸ್ಥೆ ಇದೆ.
ಸ್ಪರ್ಧಿಗಳು ಜೂನ್‌ 24ರಂದು ಮಧ್ಯಾಹ್ನ 3.00 ಗಂಟೆಯ ಮೇಲೆ ಚಿಕ್ಕಬಳ್ಳಾಪುರದ ಜೂನಿಯರ್‌ ಕಾಲೇಜು ಎದುರು ಇರುವ ರಂಗಮಂದಿರದಲ್ಲಿ ಚೆಸ್ಟ್‌ ನಂಬರ್‌ಗಳನ್ನು ಪಡೆದುಕೊಳ್ಳಬೇಕು. ಹೆಚ್ಚಿನ ವಿವರಗಳಿಗೆ ಅನಂತರಾಜು ಅವರನ್ನು ದೂರ

ವಾಣಿ ಸಂಖ್ಯೆ 080–22275656 ರಲ್ಲಿ ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT