ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಕಲಲ್ಲಿ ಕುಳಿತು ಪೋಸ್ ನೀಡಿದ ಪ್ರಧಾನಿ ಮೋದಿ: ಟ್ವಿಟರ್‌ನಲ್ಲಿ ವೈರಲ್

Last Updated 28 ಜೂನ್ 2017, 10:07 IST
ಅಕ್ಷರ ಗಾತ್ರ

ಆಮಸ್ಟರ್‌ಡ್ಯಾಂ: ಮೂರು ರಾಷ್ಟ್ರಗಳ ಪ್ರವಾಸ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ನೆದರ್ಲೆಂಡ್ಸ್‌ಗೆ ಭೇಡಿ ನೀಡಿದ್ದರು. ಈ ವೇಳೆ ಅವರು ಅಲ್ಲಿನ ಪ್ರಧಾನಿ ಮಾರ್ಕ್ ರುಟ್‌ ಅವರ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು. ಇದಾದ ಬಳಿಕ ಮೋದಿ ಅವರಿಗೆ ಮಾರ್ಕ್ ರುಟ್‌ ಸೈಕಲೊಂದನ್ನು ಉಡುಗೊರೆ ನೀಡಿದ್ದಾರೆ. ಈ ಸೈಕಲ್‌ನಲ್ಲಿ ಕುಳಿತು ಮೋದಿ ಅವರು ಛಾಯಾಚಿತ್ರಕ್ಕೆ ನೀಡಿದ ಪೋಸ್‌ ಈಗ ಟ್ವಿಟರ್‌ನಲ್ಲಿ ವೈರಲ್‌ ಆಗಿದೆ.

ಮೋದಿ ಅವರು ಸೈಕಲ್‌ನಲ್ಲಿ ಕುಳಿತಿರುವ ಚಿತ್ರದ ಜತೆಗೆ ಹಲವು ತಮಾಷೆಯ ಸಂದೇಶಗಳು ಟ್ವಿಟರ್‌ನಲ್ಲಿ ಹರಿದಾಡಿವೆ. ಸಮಾಜವಾದಿ ಪಕ್ಷದ ಚಿಹ್ನೆಯ ಜತೆಗೆ ಹೋಲಿಸಿಯೂ ಹಲವರು ತಮಾಷೆಯ ಸಂದೇಶಗಳನ್ನು ಪೋಸ್ಟ್ ಮಾಡಿದ್ದಾರೆ.

‘ಆಜ್‌ ಕಲ್ ಪಾವ್ ಜಮೀನ್ ಪರ್ ನಹಿ ರುಕ್ತೇ ಮೇರೇ...’ (ಈಗ ನನ್ನ ಕಾಲು ಭೂಮಿ ಮೇಲೆ ನಿಲ್ಲುತ್ತಿಲ್ಲ...), ‘ಯುಪಿ ವಾಲಿ ತೋ ಪಂಕ್ಚರ್ ಹೋಗಯಿ’ (ಉತ್ತರಪ್ರದೇಶದಲ್ಲಿ ಪಂಕ್ಚರ್ ಆಗಿದೆ), ‘ಜನ್ಮದಿನದ ಸಂದರ್ಭ ಸೈಕಲ್ ಉಡುಗೊರೆ ಪಡೆದವರಂತೆ ಮೋದಿ ಕಾಣುತ್ತಿದ್ದಾರೆ’, ‘ಉತ್ತರಪ್ರದೇಶದಲ್ಲಿ ಅಖಿಲೇಶ್ ಯಾದವ್ ಅವರಿಂದ ಹೇಗೆ ಸೈಕಲ್‌ ಕಸಿದುಕೊಂಡೆ ಎಂಬುದನ್ನು ಮೋದಿ ಅವರು ಮಾರ್ಕ್ ರುಟ್‌ ಅವರಿಗೆ ತೋರಿಸುತ್ತಿದ್ದಾರೆ’... ಇತ್ಯಾದಿ ಸಂದೇಶಗಳು ಟ್ವಿಟರ್‌ನಲ್ಲಿ ಹರಿದಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT