ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಾದ, ಗೊಂದಲ; ಭಕ್ತರ ಆತಂಕಕ್ಕೆ ತೆರೆ

Last Updated 3 ಜುಲೈ 2017, 9:10 IST
ಅಕ್ಷರ ಗಾತ್ರ

ತಿ.ನರಸೀಪುರ: ‘ದಕ್ಷಿಣ ಕಾಶಿ’ ಎಂದೇ ಪ್ರಸಿದ್ಧಿಯಾಗಿರುವ ತ್ರಿವೇಣಿ ಸಂಗಮದ ಹಳೆ ತಿರಮಕೂಡಲು ಭಾನುವಾರ ಐತಿ ಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು.
ಹೆಸರಾಂತ ಮಠಗಳಲ್ಲಿ ಒಂದಾದ ಸೋಸಲೆ ವ್ಯಾಸರಾಯರ ಮಠ ನಾಡಿನಾದ್ಯಂತ ಖ್ಯಾತಿ ಗಳಿಸಿದೆ. ಆದರೆ, ಕೆಲ ವರ್ಷಗಳಿಂದ ಮಠದ ಆಡಳಿತ ವ್ಯವಸ್ಥೆ ಯಲ್ಲಿ ಉಂಟಾದ ಗೊಂದಲ, ಆರೋಪಗಳು ನ್ಯಾಯಾಲಯದ ಮೆಟ್ಟಿಲೇರಿದ್ದರು.

ಬಳಿಕ ಸರ್ಕಾರ ಅನಿವಾರ್ಯವಾಗಿ ಮಠ ವಶಕ್ಕೆ ಪಡೆದು ಆಡಳಿತಾಧಿಕಾರಿ ಹಾಗೂ ಸಲಹಾ ಸಮಿತಿ ನೇಮಿಸಿತ್ತು. ಪೀಠಾಧಿಪತಿಯಾಗಿದ್ದ ಶ್ರೀ ವಿದ್ಯಾ ಮನೋಹರ ತೀರ್ಥರ ವಿರುದ್ಧ ಭಕ್ತರು ಅಸಮಾಧಾನ ವ್ಯಕ್ತಪಡಿಸಿ, ಪೀಠ ತ್ಯಜಿಸುವಂತೆ ಒತ್ತಾಯಿಸಿದ್ದರು. ಮಾರ್ಚ್‌ 2016ರಲ್ಲಿ ಪೀಠ ತ್ಯಾಗ ಮಾಡಿ ಪ್ರಹ್ಲಾದಾಚಾರ್ಯರಿಗೆ ಅಧಿಕಾರ ಹಸ್ತಾಂತರಿಸುವ ಪ್ರಸ್ತಾವ ಇತ್ತಾದರೂ ಬಳಿಕ ಹಿಂಪಡೆಯಲಾಗಿತ್ತು.

ಶ್ರೀ ವಿದ್ಯಾಮನೋಹರ ತೀರ್ಥರು ಮಠದ ಅಭಿವೃದ್ಧಿ ಹಿತದೃಷ್ಟಿಯಿಂದ ಪೀಠ ತ್ಯಾಗ ಮಾಡಲು ಬಯಸಿದ್ದೇನೆ ಎಂದು ಹೇಳುವ ಮೂಲಕ ನೂತನ ಸ್ವಾಮೀಜಿಯ ಪೀಠಾರೋಹಣಕ್ಕೆ ಹಸಿರು ನಿಶಾನೆ ತೋರಿದರು. ಇದರಿಂದ ಶನಿವಾರ ಹಾಗೂ ಭಾನುವಾರ ಮಠದ ಆವರಣದಲ್ಲಿ ಸಂಭ್ರಮದಿಂದ ಪೀಠಾ ರೋಹಣ ಕಾರ್ಯಕ್ರಮ ನಡೆಯಿತು.

ಮಠದ ಸಂಪ್ರದಾಯದಂತೆ ಭಾನುವಾರ ಹೋಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಪ್ರಹ್ಲಾದಾಚಾರ್ಯರು ತ್ರಿವೇಣಿ ಸಂಗಮದಲ್ಲಿ ಮಿಂದು ಸನ್ಯಾಸ ಸ್ವೀಕರಿಸಿದರು. ಮಠದ ಸಾಂಪ್ರಾ ದಾಯಿಕ ಉಡುಗೆ ತೊಟ್ಟು ಮಠದಲ್ಲಿ ನಡೆದ ಬೃಹತ್‌ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರ ಅಪೇಕ್ಷೆಯಂತೆ ವೇದ ಘೋಷ, ಮಂತ್ರಗಳ ನಡುವೆ ಮೂಲ ಗೋಪಾಲಕೃಷ್ಣನ ವಿಗ್ರಹಕ್ಕೆ ಪೂಜೆ ಸಲ್ಲಿಸಿ ಪೀಠಾರೋಹಣ ಮಾಡಿದರು.

‘ವ್ಯಾಸರಾಯರ ಮಠದ ಆಡಳಿತ ವೈಖರಿಯಿಂದ ಗುರುಕುಲ ಪರಂಪರೆ ಕಳೆದುಹೋಗಿತ್ತು. ಮಠದ ಭಕ್ತರು ವಿವಾದ, ಗೊಂದಲಗಳಿಂದ ವಿಚಲಿತರಾಗಿದ್ದರು. ಕೆಲವು ಭಕ್ತರು ನ್ಯಾಯಾಲಯಕ್ಕೂ ಹೋಗಿದ್ದರು. ಮಠದ ಪರಂಪರೆ ಉಳಿಸುವ ಪ್ರಯತ್ನ ಮಾಡುವಂತೆ ಒತ್ತಾಯಿಸಿದ್ದರು.

ಈಗ ನಮಗೆ ಸಂತೋಷವಾಗಿದೆ. ಸರ್ಕಾರ ಆಡಳಿತಾಧಿಕಾರಿ ನೇಮಕ ಮಾಡಿ ಮಠ ಉಳಿಸಿದೆ. ನಾಡಿನ ಶ್ರೇಷ್ಠ ವಿದ್ಯಾಂಸರಾದ ಪ್ರಹ್ಲಾದಾಚಾರ್ಯ ಅವರಿಗೆ ಮಠದ ಜವಾಬ್ದಾರಿ ವಹಿಸಲಾಗಿದೆ. ಮುಂದೆ ವ್ಯಾಸರಾಯರ ಗುರುಕುಲ ಪುನರ್‌ ನಿರ್ಮಾಣವಾಗಲಿದೆ’ ಎಂದು ಭಕ್ತರು ಪ್ರಜಾವಾಣಿ’ ಜತೆ ಸಂತಸ ಹಂಚಿಕೊಂಡರು.
ಶನಿವಾರದಿಂದಲೇ ಮಂತ್ರಾಲಯ, ತಮಿಳುನಾಡು, ತಿರುಮಲ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಸಾವಿರಾರು ಭಕ್ತರು ಮಠಕ್ಕೆ ಬಂದು ಪೀಠಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

‘ಸರ್ಕಾರದಿಂದ ಮಠ ಉಳಿದಿದೆ’
ತಿ.ನರಸೀಪುರ: ರಾಜ್ಯ ಸರ್ಕಾರವು ವಿವಾದಕ್ಕೆ ಒಳಗಾಗಿದ್ದ ಸೋಸಲೆ ವ್ಯಾಸರಾಜ ಮಠ ವಶಕ್ಕೆ ಪಡೆದಿದ್ದ ರಿಂದ ಮಠ ಉಳಿದಿದೆ ಎಂದು ಮಠದ ಆಡಳಿತಾಧಿಕಾರಿಯಾಗಿದ್ದ ನಿವೃತ್ತ ಐಎಎಸ್‌ ಅಧಿಕಾರಿ ಕೆ.ಜೈರಾಜ್‌ ಅಭಿಪ್ರಾಯಪಟ್ಟರು.

ಮಠದಲ್ಲಿ ಕಳೆದ 5 ವರ್ಷದಲ್ಲಿ ₹ 3 ಕೋಟಿಗೂ ಹೆಚ್ಚು ವಹಿವಾಟಿದೆ’ ಎಂದು ಹೇಳಿದರು. ‘ಸಲಹಾ ಸಮಿತಿ ಸದಸ್ಯರೊಂದಿಗೆ ಸುಮಾರು 30 ಸಭೆ ನಡೆಸಿ ಒಂದು ಹಂತಕ್ಕೆ ಮಠ ತಂದಿದ್ದೇವೆ. ಈಗ ನಾಡಿನ ವಿದ್ವಾಂಸರಲ್ಲಿ ಒಬ್ಬರಾದ ಪ್ರಹ್ಲಾದಾಚಾರ್ಯರಿಗೆ ಜವಾಬ್ದಾರಿ ನೀಡಲಾಗುತ್ತಿದೆ. ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದೆ. ಮಠದ ವೈಭವ ಮರುಕಳಿಸುವ ವಿಶ್ವಾಸ ಇದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT