ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಸಿಡಿಎಸ್‌ ಯೋಜನೆಗೆ ಅನುದಾನ ಕಡಿತ

Last Updated 6 ಜುಲೈ 2017, 6:15 IST
ಅಕ್ಷರ ಗಾತ್ರ

ವಿಜಯಪುರ: ‘ಅಪೌಷ್ಟಿಕತೆ ನಿವಾ ರಣೆಯ ಮಹತ್ವಾಕಾಂಕ್ಷೆಯ ಯೋಜನೆ ಯಾಗಿರುವ ಐಸಿಡಿಎಸ್ ಯೋಜನೆಗೆ ಕೇಂದ್ರ ಸರ್ಕಾರ ಅನುದಾನ ಕಡಿತಗೊ ಳಿಸಿರುವುದು ಸರಿಯಲ್ಲ. ಕೂಡಲೇ ಈ ಯೋಜನೆಗೆ ₹ 30 ಸಾವಿರ ಕೋಟಿ ಅನುದಾನ ಮೀಸಲಿಡಬೇಕು’ ಎಂದು ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷ ಕೆ.ಸೋಮಶೇಖರ ಯಾದಗಿರಿ ಒತ್ತಾಯಿಸಿದರು.

‘ಕೇಂದ್ರ ಸರ್ಕಾರ ಒಂದೆಡೆ ‘ಬೇಟಿ ಬಚಾವೋ, ಬೇಟಿ ಪಡಾವೋ’ ಎಂಬ ಘೋಷಣೆ ಮೊಳಗಿಸುತ್ತಿದೆ. ಇನ್ನೊಂದೆಡೆ ಮಹಿಳೆ, ಮಕ್ಕಳ ಪೌಷ್ಟಿಕ ಆಹಾರ ವಿತರಣೆ ಯೋಜನೆಗಳಲ್ಲಿ ಒಂದಾಗಿರುವ ಐಸಿಡಿಎಸ್ ಯೋಜನೆಗೆ ಅನುದಾನ ಕಡಿತ ಮಾಡುತ್ತಿದೆ. ಕೇಂದ್ರ ಹಣಕಾಸು ಸಚಿವರು ಈ ಯೋಜನೆಯನ್ನೇ ರದ್ದು ಗೊಳಿಸುವ ಅಭಿಪ್ರಾಯ ವ್ಯಕ್ತಪಡಿಸಿ ದ್ದಾರೆ. ಇದರಿಂದಾಗಿ ಅಂಗನವಾಡಿ ನೌಕ ರರು ದಿಗ್ಭ್ರಮೆಗೊಳ್ಳುವಂತಾಗಿದೆ’ ಎಂದು ಬುಧವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಆತಂಕ ವ್ಯಕ್ತಪಡಿಸಿದರು.

‘ಈ ಯೋಜನೆ ಅನುಷ್ಠಾನದಲ್ಲಿ 28 ಲಕ್ಷ ಅಂಗನವಾಡಿ ನೌಕರರು ಪ್ರಾಮಾ ಣಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.  ಕಡಿಮೆ ಸಂಬಳದಲ್ಲಿ ಸೇವೆ ಸಲ್ಲಿಸುತ್ತಿ ದ್ದಾರೆ, ಇಂದಿಗೂ ಅವರ ಬದುಕು ಮಾತ್ರ ಹಸನಾಗಿಲ್ಲ.

ಅಂಗನವಾಡಿ ನೌಕರರ ವೇತನ ವನ್ನು ರಾಜ್ಯ ಸರ್ಕಾರವೇ ಭರಿಸಬೇಕು ಎಂಬ ಹೊಸ ರಾಗವನ್ನು ಕೇಂದ್ರ ಸರ್ಕಾರ ತೆಗೆದಿರುವುದು ಅಂಗನವಾಡಿ ಕಾರ್ಯಕರ್ತೆಯರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ರಾಜ್ಯದಲ್ಲಿ ಅಧಿಕಾರ ನಡೆಸಿದ ಅನೇಕ ಸರ್ಕಾರಗಳು ಸಹ ಅಂಗನವಾಡಿ ನೌಕರರ ವಿರೋಧಿ ನೀತಿಯನ್ನೇ ಅನುಸರಿಸಿವೆ’ ಎಂದು ದೂರಿದರು.

ಅಂಗನವಾಡಿ ನೌಕರರ ಸಮಾವೇಶ 8ಕ್ಕೆ: ‘ಅಂಗನವಾಡಿ ನೌಕರರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ, ಇದೇ 8ರ ಶನಿವಾರ ಬಾಗಲಕೋಟೆಯ ಡಾ.ಬಿ.ಆರ್‌.ಅಂಬೇಡ್ಕರ್ ಭವನದಲ್ಲಿ ಅಂಗನವಾಡಿ ನೌಕರರ ಸಮಾವೇಶ ಏರ್ಪಡಿಸಲಾಗಿದೆ’ ಎಂದು ಅವರು ಇದೇ ಸಂದರ್ಭದಲ್ಲಿ ಪ್ರಕಟಿಸಿದರು.ಈ ಸಮಾವೇಶದಲ್ಲಿ ವಿಜಯಪುರ, ಬಾಗಲಕೋಟೆ, ಗದಗ, ಕೊಪ್ಪಳ, ಬೆಳಗಾವಿ, ಹುಬ್ಬಳ್ಳಿ–-ಧಾರವಾಡ ಸೇರಿದಂತೆ ಹಲ ಜಿಲ್ಲೆಗಳಿಂದ ಒಂದು ಸಾವಿರ ಪ್ರತಿನಿಧಿಗಳು ಭಾಗವಹಿಸಲಿ ದ್ದಾರೆ ಎಂದು ಹೇಳಿದರು.

‘ಅಂಗನವಾಡಿ ನೌಕರರಿಗೆ ಸಿ, ಡಿ ದರ್ಜೆಯ ಸ್ಥಾನಮಾನ ನೀಡುವುದು, ಸೇವಾ ಹಿರಿತನ ಆಧರಿಸಿ ಮಾಸಿಕ ವೇತನ ನಿಗದಿಗೊಳಿಸುವುದು, ಅಂಗನ ವಾಡಿ ಕೇಂದ್ರಗಳ ಸಮಯ ವಿಸ್ತರಣೆ ಅವಧಿಯನ್ನು ಹಿಂದಕ್ಕೆ ಪಡೆಯುವುದು, ಅಂಗನವಾಡಿ ನೌಕರರಿಗೂ ನಿವೃತ್ತಿ ವೇತನ ನಿಗದಿಗೊಳಿಸುವುದು ಸೇರಿ ದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಹಕ್ಕೊತ್ತಾಯ ಮಂಡಿಸಲಾಗುವುದು’ ಎಂದರು.

ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ರಾಜೇಶ್ವರಿ ಖ್ಯಾಡಿ, ಲಕ್ಷ್ಮೀ ಲಕ್ಷೆಟ್ಟಿ, ಎಚ್.ಟಿ.ಮಲ್ಲಿಕಾರ್ಜುನ, ಶಿವಬಾಳಮ್ಮ ಕೊಂಡಗೂಳಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಯಾವ ನ್ಯಾಯ ?
‘ಕೇಂದ್ರ ಸರ್ಕಾರ ಜಿಎಸ್‌ಟಿ ತೆರಿಗೆ ಪದ್ಧತಿ ಜಾರಿಗೊಳಿಸಿದೆ. ಇದರ ಪರಿಣಾಮವಾಗಿ ಅಡುಗೆ ಅನಿಲ ಸೇರಿದಂತೆ ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಚಿನ್ನದ ಬಿಸ್ಕತ್ತಿಗೆ 4% ಮಾತ್ರ ತೆರಿಗೆ ವಿಧಿಸಲಾಗಿದೆ. ಆದರೆ ತಿನ್ನುವ ಬಿಸ್ಕತ್ತಿಗೆ 14% ತೆರಿಗೆ ವಿಧಿಸಿದೆ. ಇದು ಯಾವ ನ್ಯಾಯ ?’ ಎಂದು ಕೆ.ಸೋಮಶೇಖರ ವ್ಯಂಗ್ಯವಾಡಿದರು.

* * 

ಕಾರ್ಪೊರೇಟ್ ಕಂಪೆನಿಗಳಿಗೆ ಲಕ್ಷ, ಲಕ್ಷ ಕೋಟಿ ಸಾಲ ಮನ್ನಾಕ್ಕೆ ಕೇಂದ್ರ ಸರ್ಕಾರದ ಬಳಿ ಹಣ ವಿದೆ. ಪೌಷ್ಟಿಕ ಆಹಾರ ವಿತರಿಸುವ ಯೋಜನೆಗೆ ದುಡ್ಡಿಲ್ಲ
ಕೆ.ಸೋಮಶೇಖರ ಯಾದಗಿರಿ
ಅಂಗನವಾಡಿ ನೌಕರರ ಸಂಘದ ಅಧ್ಯಕ್ಷ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT