ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2022ರ ಹೊತ್ತಿಗೆ 550ಕೋಟಿಗೂ ಹೆಚ್ಚು ಜನ ಮೊಬೈಲ್‌ ಬಳಸಲಿದ್ದಾರೆ

Last Updated 18 ಜುಲೈ 2017, 10:28 IST
ಅಕ್ಷರ ಗಾತ್ರ

ಬೆಂಗಳೂರು: ಭಾರತ, ಚೀನಾ ಸೇರಿದಂತೆ ಏಷ್ಯಾ ಫೆಸಿಪಿಕ್‌ ರಾಷ್ಟ್ರಗಳಲ್ಲಿ ಮೊಬೈಲ್‌ ಬಳಕೆದಾರರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, 2022ರ ವೇಳೆಗೆ ವಿಶ್ವದ ಸುಮಾರು ಶೇ.70ಕ್ಕಿಂತಲೂ ಹೆಚ್ಚು ಜನರು ಮೊಬೈಲ್‌ ಬಳಕೆದಾರರಾಗಲಿದ್ದಾರೆ ಎಂದು ಜಾಗತಿಕ ಸಂಶೋಧನಾ ಸಂಸ್ಥೆ ಫೊರೆಸ್ಟರ್‌ ವರದಿ ಮಾಡಿದೆ.

ವರದಿಯ ಪ್ರಕಾರ, 2008ರಲ್ಲಿ ಇದ್ದ ಮೊಬೈಲ್‌ ಬಳಕೆದಾರರ ಸಂಖ್ಯೆ ಈಗ ದ್ವಿಗುಣವಾಗಿದ್ದು, ಈ ಬೆಳವಣಿಗೆಯನ್ನು ಗಮನಿಸಿದರೆ 2022ರ ಹೊತ್ತಿಗೆ ಜಗತ್ತಿನಾದ್ಯಂತ ಸುಮಾರು 550 ಕೋಟಿಗೂ ಹೆಚ್ಚು ಜನರು ಮೊಬೈಲ್‌ ಗ್ರಾಹಕರಾಗಲಿದ್ದಾರೆ.

‘2022ರ ವೇಳೆಗೆ ಒಟ್ಟು 380ಕೋಟಿ ಜನರು ಸ್ಮಾರ್ಟ್‌ಫೋನ್‌ ಬಳಸಲಿದ್ದಾರೆ. ಇದು ಜಗತ್ತಿನ ಒಟ್ಟು ಜನಸಂಖ್ಯೆಯ ಸುಮಾರು ಶೇ.66ರಷ್ಟು ಆಗಲಿದೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

2017ರಲ್ಲಿ ಸ್ಮಾರ್ಟ್‌ಫೋನ್‌ ಬಳಸುವವರ ಪೈಕಿ ಶೇ.73ರಷ್ಟು(180ಕೋಟಿ) ಜನರು ಆಂಡ್ರಾಯ್ಡ್‌ ಆಪರೇಟಿಂಗ್‌ ಸಿಸ್ಟಂನ ಮೊಬೈಲ್‌ಗಳನ್ನು ಬಳಸಲಿದ್ದಾರೆ. ಉಳಿದಂತೆ ಶೇ.21ರಷ್ಟು ಆ್ಯಪಲ್‌ ಮತ್ತು ಶೇ.4ರಷ್ಟು ವಿಂಡೋಸ್‌ ಫೋನ್‌ ಬಳಸಲಿದ್ದಾರೆ ಎಂದು ವರದಿ ಅಂದಾಜಿಸಿದೆ.

‘ಲಾರ್ಜ್‌ ಸ್ಕ್ರೀನ್‌ ಗಾತ್ರದ ಮೊಬೈಲ್‌ ಬಳಕೆಯು ಟ್ಯಾಬ್ಲೆಟ್‌ಗಳ ಬಳಕೆ ಪ್ರಮಾಣ ಕುಸಿಯಲು ಪ್ರಮುಖ ಕಾರಣವಾಗಿದ್ದು, ಚೀನಾ ಮತ್ತು ಭಾರತದಲ್ಲಿ ಸ್ಮಾರ್ಟ್‌ಫೋನ್‌ ಬಳಸುವವರಲ್ಲಿ ಕ್ರಮವಾಗಿ ಸುಮಾರು ಶೇ.65, ಶೇ.62ರಷ್ಟು ಜನರು 5.0 ಹಾಗೂ 6.0 ಗಾತ್ರದ ಪರದೆಯುಳ್ಳ ಮೊಬೈಲ್‌ಗಳನ್ನು ಬಳಸುತ್ತಿದ್ದಾರೆ. 2016ರಲ್ಲಿ ಪ್ರಪಂಚದಾದ್ಯಂತ ಒಟ್ಟು 61.5ಕೋಟಿ ಜನರು ಟ್ಯಾಬ್ಲೆಟ್‌ಗಳನ್ನು ಬಳಸುತ್ತಿದ್ದರು. ಈ ಸಂಖ್ಯೆ 2022ಕ್ಕೆ 57.9 ಕೋಟಿಗೆ ಕುಸಿಯಲಿದೆ’

ವೈಯಕ್ತಿಕ ಬಳಕೆಗಾಗಿ ಟ್ಯಾಬ್ಲೆಟ್‌ ಬಳಸುವವರ ಪ್ರಮಾಣ ವಾರ್ಷಿಕ ಶೇ.3.3ರಷ್ಟು ಕುಸಿಯಲಿದೆ ಹಾಗೂ ವ್ಯವಹಾರದ ಉದ್ದೇಶಕ್ಕಾಗಿ ಟ್ಯಾಬ್ಲೆಟ್‌ಗಳನ್ನು ಬಳಸುವ ಪ್ರಮಾಣದಲ್ಲಿ ವಾರ್ಷಿಕ ಶೇ.6.9ರಷ್ಟು ಏರಿಕೆಯಾಗಲಿದೆ ಎಂದೂ ವರದಿಯಲ್ಲಿ ತಿಳಿಸಲಾಗಿದೆ.

ಭಾರತದಲ್ಲಿ ಒಟ್ಟು 100ಕೋಟಿ ಮೊಬೈಲ್‌ ಚಂದಾದಾರರಿದ್ದಾರೆ ಎಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಇತ್ತೀಚೆಗೆ ನೀಡಿದ್ದ ಅಂಕಿ ಅಂಶಗಳನ್ನು ವರದಿಯನ್ನು ಉಲ್ಲೇಖಿಸಿರುವ ಸಂಶೋಧನಾ ಸಂಸ್ಥೆ, ಸದ್ಯ ದೇಶದಲ್ಲಿ ಸುಮಾರು 30ಕೋಟಿ ಸ್ಮಾರ್ಟ್‌ಫೋನ್‌ಗಳು ಬಳಕೆಯಲ್ಲಿವೆ ಎಂದು ಸಹ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT