ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಸ್ತುವಿನ ಬಣ್ಣ!

Last Updated 20 ಜುಲೈ 2017, 19:30 IST
ಅಕ್ಷರ ಗಾತ್ರ

ಮನೆಯ ವಾಸ್ತುವಿನಲ್ಲಿ ಬಣ್ಣವೂ ಪ್ರಾಧಾನ್ಯ ಪಡೆದಿದೆ. ಬಣ್ಣಗಳು ಮನೆಯ ವಾತಾವರಣವನ್ನು ಉತ್ತಮಪಡಿಸುವುದರ ಜೊತೆಗೆ ಸಮೃದ್ಧಿ, ಆರ್ಥಿಕ ಅಭಿವೃದ್ಧಿಗೂ ನೆರವಾಗುತ್ತದೆ ಎನ್ನುತ್ತದೆ ವಾಸ್ತು. ಯಾವ ಕೋಣೆಗೆ ಯಾವ ಸೂಕ್ತ ಎಂಬ ವಿವರ ಇಲ್ಲಿದೆ.

ದೇವರ ಕೋಣೆ: ಒಬ್ಬ ವ್ಯಕ್ತಿಯ ಮನಸ್ಸಿಗೆ ಪ್ರಶಾಂತತೆಯನ್ನು ಒದಗಿಸುವಂತಹ ತಿಳಿ ನೀಲಿ ಬಣ್ಣ, ತಿಳಿ ನೇರಳೆ, ಹಳದಿ ಹಾಗೂ ಶ್ರೀಗಂಧದ ಬಣ್ಣವನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಬಣ್ಣಗಳು ಏಕಾಗ್ರತೆಯನ್ನು ಹೆಚ್ಚಿಸಿ, ಬೌದ್ಧಿಕ ತಿಳಿವಳಿಕೆಯನ್ನು ಹೆಚ್ಚಿಸಿಕೊಳ್ಳಲು ನೆರವಾಗುತ್ತವೆ. ಈ ಕೋಣೆಯನ್ನು ಪೂಜೆ ಹಾಗೂ ಧ್ಯಾನಕ್ಕೆ ಬಳಸುವುದರಿಂದ ಇಲ್ಲಿನ ಗೋಡೆಗೆ ಬಳಿಯುವ ಬಣ್ಣಗಳು ಮನಸ್ಸನ್ನು ಕೆರಳಿಸುವಂತಿರಬಾರದು.

ಮಲಗುವ ಕೋಣೆ: ಈ ಕೋಣೆಗೆ ಗುಲಾಬಿ ಬಣ್ಣ ಸರಿ ಹೊಂದುತ್ತದೆ. ಇದಲ್ಲದೇ ತಿಳಿ ಹಸಿರು ಹಾಗೂ ತಿಳಿ ನೀಲಿ ಬಣ್ಣಗಳನ್ನು ಬಳಿಯಬಹುದು. ಈ ಮೂರು ಬಣ್ಣಗಳು ಭರವಸೆ ಹಾಗೂ ಅಭಿವೃದ್ಧಿ ಸಂಕೇತವಾಗಿವೆ. ಕೆಂಪು ಬಣ್ಣವನ್ನೂ ಈ ಕೋಣೆಗೆ ಬಳಿಯಲೇ ಬಾರದು. ಆದರೆ ನವದಂಪತಿ ಹಾಗೂ ವಿವಾಹವಾಗಲು ಇಚ್ಛಿಸುವವರು ಕೆಂಪು ಬೆಡ್‌ ಶೀಟ್‌, ಗುಲಾಬಿ ಬೆಡ್‌ಶೀಟ್‌ಗಳನ್ನು ಬಳಸಬಹುದು.

ಓದುವ ಕೋಣೆ: ಹಸಿರು ಬಣ್ಣ ಏಕಾಗ್ರತೆಯನ್ನು ಹೆಚ್ಚಿಸುವುದರಿಂದ ಮಕ್ಕಳ ಓದುವ ಕೋಣೆಗೆ ಹಸಿರು ಬಣ್ಣ ಸೂಕ್ತ. ಓದುವ ಕೋಣೆ ಪೀಠೋಪಕರಣಗಳು ಕಪ್ಪು ಬಣ್ಣದ್ದಾಗಿರಲಿ. ಕಪ್ಪು ಆಳವಾದ ಯೋಚನೆಗಳನ್ನು ಹುಟ್ಟು ಹಾಕುತ್ತವೆ. ಮಕ್ಕಳ ಮಲಗುವ ಕೋಣೆಗೆ ನೀಲಿ ಬಣ್ಣ ಬಳಿದರೆ ಉತ್ತಮ. ಈ ಬಣ್ಣ ಮಕ್ಕಳಲ್ಲಿನ ಆಕ್ರಮಣಶೀಲತೆ ನಡವಳಿಕೆಯನ್ನು ನಿಯಂತ್ರಣ ಮಾಡುತ್ತದೆ. ಮಕ್ಕಳ ಮನಸ್ಸು ಯಾವಾಗಲೂ ಶಾಂತ ಹಾಗೂ ತಾಳ್ಮೆಯಿಂದ ಕೂಡಿರಬೇಕು.

ಲಿವಿಂಗ್‌ ರೂಮ್‌: ಲಿವಿಂಗ್‌ ರೂಮ್‌ಗೆ ಗಾಢ ಬಣ್ಣಗಳ ವಿವಿಧ ಶೇಡ್‌ಗಳನ್ನು ಬಳಿಯುವುದು ಸೂಕ್ತ. ಈ ಕೋಣೆಗೆ ಹಳದಿ, ಹಸಿರು, ನೀಲಿ ಬಣ್ಣ ಬಳಸಬಹುದು. ಸಂಬಂಧಿಕರು ಅಥವಾ ಸ್ನೇಹಿತರು ಮನೆಗೆ ಬಂದಾಗ ಅವರ ಜೊತೆ ಕುಶಲೋಪರಿ ನಡೆಸುವಂತಹ ಉಲ್ಲಾಸಮಯ ವಾತಾವರಣವನ್ನು ಇದು ಸೃಷ್ಟಿಸುತ್ತದೆ.

ಊಟದ ಕೋಣೆ: ಕಿತ್ತಳೆ ಬಣ್ಣವನ್ನು ಊಟದ ಕೋಣೆಗೆ ಬಳಿಯಬಹುದು. ಈ ಬಣ್ಣ ಹಸಿವನ್ನು ಉತ್ತೇಜಿಸುವಂತ ಗುಣ ಹೊಂದಿದೆ. ನಸು ನೇರಳೆ ಬಣ್ಣವೂ ಈ ಗುಣವನ್ನೇ ಹೊಂದಿರುವುದರಿಂದ ಈ ಬಣ್ಣವೂ ಕೋಣೆಗೆ ಸೂಕ್ತ. ಆದರೆ ಕಪ್ಪು, ಬಿಳುಪು ಅಥವಾ ಆ ಎರಡು ಬಣ್ಣಗಳ ಮಿಶ್ರಣದ ಬಣ್ಣವನ್ನು ಕೋಣೆಗೆ ಹಾಕಬಾರದು. ಊಟದ ಕೋಣೆಯಲ್ಲಿ ಇರುವಾಗ ಕುಟುಂಬ ಸದಸ್ಯರು ಒಟ್ಟಾಗಿ ಮಾತನಾಡುತ್ತಾ ಊಟದ ಸವಿಯನ್ನು ಆನಂದಿಸುವಂತಿರಬೇಕು.

ಅಡುಗೆ ಮನೆ: ಅಡುಗೆ ಮನೆಗೆ ಬಿಳಿ ಬಣ್ಣ ಸೂಕ್ತ. ಈ ಬಣ್ಣ ಶುದ್ಧತೆ ಹಾಗೂ ಶುಚಿತ್ವವನ್ನೂ ಪ್ರತಿನಿಧಿಸುತ್ತದೆ. ಬಿಳಿ ಅಥವಾ ತಿಳಿ ಬಣ್ಣದ ಬಣ್ಣಗಳನ್ನು ಉಪಯೋಗಿಸುವುದರಿಂದ ಅಡುಗೆ ಮನೆಯ ವಾತಾವರಣವನ್ನು ಚೆನ್ನಾಗಿಸುತ್ತದೆ. ತರಕಾರಿ ಹಚ್ಚುವುದು, ಅಡುಗೆ ಮಾಡುವ ಕೆಲಸದ ದಣಿವನ್ನು ಮರೆಸುವ ಶಕ್ತಿ ಹೊಂದಿದೆ.

ಸ್ನಾನದ ಕೋಣೆ: ಸ್ನಾನದ ಮನೆಗೆ ಕಪ್ಪು, ಕಪ್ಪು– ಬಿಳಿ ಮಿಶ್ರಣದ ಬಣ್ಣ, ಕಂದು ಬಣ್ಣ ಸೂಕ್ತವಾಗಿರುತ್ತದೆ. ಈ ಬಣ್ಣಗಳಲ್ಲಿ ಕೊಳೆ ಬೇಗ ಕಾಣಿಸುವುದಿಲ್ಲವಾದ್ದರಿಂದ ಇದು ಸೂಕ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT