ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾಹೋ’ದಿಂದ ಅನುಷ್ಕಾ ಹೊರಗೆ?

Last Updated 21 ಜುಲೈ 2017, 19:30 IST
ಅಕ್ಷರ ಗಾತ್ರ

’ಬಾಹುಬಲಿ –2’ ಚಿತ್ರದಲ್ಲಿ ಸಿನಿಪ್ರಿಯರನ್ನು ಮೋಡಿ ಮಾಡಿದ್ದ ಅನುಷ್ಕಾ–ಪ್ರಭಾಸ್‌ ಜೋಡಿ, ’ಸಾಹೋ’ ಚಿತ್ರದಲ್ಲೂ ಒಟ್ಟಾಗಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಇತ್ತೀಚೆಗೆ ಚಿತ್ರದ ಪಾತ್ರಕ್ಕೆ ಅನುಷ್ಕಾಳ ತೂಕ ಹೆಚ್ಚಾಗಿದ್ದರಿಂದ ಆಕೆಯನ್ನು ಪಾತ್ರದಿಂದ ಕೈ ಬಿಡಲಾಗಿದೆ ಎಂಬ ಸುದ್ದಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.

’ಸಾಹೋ’ ಚಿತ್ರದ ಪಾತ್ರಕ್ಕಾಗಿ ತೂಕ ಇಳಿಸಿಕೊಳ್ಳಲು ಅನುಷ್ಕಾ ಕಠಿಣವಾಗಿ ತರಬೇತಿ ಪಡೆಯುತ್ತಿದ್ದಾರೆ. ಆದರೂ ಆಕೆ ಐದರಿಂದ ಎಂಟು ಕೆ.ಜಿ ಜಾಸ್ತಿ ಇದ್ದಾರೆ. ಇದು ಪಾತ್ರ ಕೈ ತಪ್ಪಿ ಹೋಗಲು ಕಾರಣ ಎಂದು ಇತ್ತೀಚೆಗೆ ಸುದ್ದಿಯಾಗಿದೆ. 2015ರಲ್ಲಿ ಬಿಡುಗಡೆಯಾದ ’ಸೈಜ್‌ ಜೀರೋ’ ಚಿತ್ರಕ್ಕೆ ಅನುಷ್ಕಾ 20 ಕೆ.ಜಿ ತೂಕ ಏರಿಸಿಕೊಂಡಿದ್ದರು.

ಆದರೆ ಈ ವರ್ಷ ಬಿಡುಗಡೆಯಾದ ’ಬಾಹುಬಲಿ’ ಚಿತ್ರದಲ್ಲಿ ಸಣ್ಣದಾಗಿಯೇ ಕಾಣಿಸಿಕೊಂಡಿದ್ದರು. ಹಾಗಾಗಿಯೂ ಈಗ ಅನುಷ್ಕಾ ತೂಕದ ಬಗ್ಗೆ ವಿವಾದ ಎದ್ದಿದ್ದು ಯಾಕೆ ಎಂಬುದು ಅಭಿಮಾನಿಗಳ ಪ್ರಶ್ನೆ.

ಇನ್ನೊಂದು ಮೂಲದ ಪ್ರಕಾರ ’ಸಾಹೋ’ ಚಿತ್ರಕ್ಕೆ ಅನುಷ್ಕಾ ಇನ್ನೂ ಸಹಿ ಮಾಡಿಲ್ಲ. ಹೀಗಾಗಿ ಆಕೆಯನ್ನು ಚಿತ್ರದಿಂದ ಹೊರಹಾಕುವ ಪ್ರಶ್ನೆಯೇ ಇಲ್ಲ ಎನ್ನಲಾಗಿದೆ. ಆದರೆ ಇದಾವುದರ ಬಗ್ಗೆ ನಟಿ ಅನುಷ್ಕಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

’ಚಿತ್ರ ನಿರ್ಮಾಪಕರು, ನಿರ್ದೇಶಕರು ಅನುಷ್ಕಾ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಆಕೆ ಚಿತ್ರದಲ್ಲಿ ನಟಿಸುವುದು ಆಕೆಯ ಡೇಟ್‌ ಅನ್ನು ಅವಲಂಬಿಸಿದೆ. ತೂಕ ವಿವಾದ ಹೇಗೆ ಉಂಟಾಯಿತು ಎಂಬುದು ನಮಗೆ ತಿಳಿದಿಲ್ಲ’ ಎಂದು ಚಿತ್ರತಂಡ ಹೇಳಿಕೊಂಡಿದೆ.

’ಕಲಾವಿದರು ಅಂತಿಮವಾದ ಬಳಿಕ ಪಾತ್ರವರ್ಗದ ಬಗ್ಗೆ ಘೋಷಿಸಲಾಗುವುದು. ’ಸಾಹೋ’ ಬಾಹುಬಲಿ ಚಿತ್ರದ ಹಾಗೇ ದೊಡ್ಡ ಬಜೆಟ್‌ ಚಿತ್ರ. ಮೂರು ಭಾಷೆಗಳಲ್ಲಿ  ಚಿತ್ರೀಕರಣ ನಡೆಸಬೇಕು. ಚಿತ್ರೀಕರಣದ ಬಗ್ಗೆ ಮೊದಲು ಯೋಚಿಸಬೇಕು’ ಎಂದು ಚಿತ್ರತಂಡ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT