ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ಟಿಲು ಕಾಮಗಾರಿ ಪೂರ್ಣ

ಮಹಾಮಸ್ತಕಾಭಿಷೇಕ: ಎರಡೂ ಬದಿ ರೇಲಿಂಗ್‌ ನಿರ್ಮಾಣ
Last Updated 22 ಜುಲೈ 2017, 20:00 IST
ಅಕ್ಷರ ಗಾತ್ರ

ಶ್ರವಣಬೆಳಗೊಳ: ವಿಶ್ವ ಪ್ರಸಿದ್ಧ ವಿಂಧ್ಯಗಿರಿಯ ಬಾಹುಬಲಿ ಬೆಟ್ಟಕ್ಕೆ ಹೊಸದಾಗಿ 489 ಮೆಟ್ಟಿಲುಗಳನ್ನು ನಿರ್ಮಿಸುವ ಮೊದಲ ಕಾಮಗಾರಿ 6 ತಿಂಗಳಲ್ಲಿ ಮುಗಿದಿದೆ.

ಮುಂದಿನ ವರ್ಷ ಫೆಬ್ರುವರಿಯಲ್ಲಿ ಜರುಗಲಿರುವ ಬಾಹುಬಲಿಯ ಮಹಾಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾಲಯ ಇಲಾಖೆ ₹ 42 ಲಕ್ಷ ವೆಚ್ಚದಲ್ಲಿ ಈ ಕಾಮಗಾರಿಯನ್ನು ಕೈಗೆತ್ತಿಕೊಂಡಿತ್ತು.

ಗಟ್ಟಿ ಬಂಡೆಯನ್ನು ಕೆತ್ತಿ ಮೆಟ್ಟಿಲುಗಳ ನಿರ್ಮಾಣದ ಜೊತೆ ಜೊತೆಯಲ್ಲಿಯೇ ಎರಡೂ ಬದಿಯ ರೇಲಿಂಗ್‌ ನಿರ್ಮಿಸುವ ಕೆಲಸವೂ  ಪೂರ್ಣಗೊಂಡಿದೆ. ಈ ಹಿಂದೆ ನಿರ್ಮಿಸಿದ್ದ ಮೆಟ್ಟಿಲುಗಳನ್ನೂ ಬಳಸಬಹುದಾಗಿದೆ. ಅದರ ಜೊತೆಗೆ ಈಗ ಹೊಸದಾಗಿ ಮೆಟ್ಟಿಲುಗಳನ್ನು ಕೆತ್ತಿಸಲಾಗಿದೆ. 

ಡೋಲಿ ತೆಗೆದುಕೊಂಡು ಹೋಗುವವರಿಗೆ ಈ ಮೆಟ್ಟಿಲು ಸಹಕಾರಿಯಾಗಿದೆ ಎಂದು ಡೋಲಿಯ ರಮೇಶ್‌ ಮತ್ತು ತಂಡದವರು ಹರ್ಷ ವ್ಯಕ್ತಪಡಿಸಿದರು.

ಈ ನೂತನ ಮೆಟ್ಟಿಲುಗಳನ್ನು ನಿಗದಿತ ಸಮಯಕ್ಕಿಂತ ಮುಂಚಿತವಾಗಿಯೇ ಪೂರ್ಣಗೊಳಿಸಲಾಗಿದೆ ಎಂದು ಆಂಧ್ರಪ್ರದೇಶದ ಕುಪ್ಪಂನ ಕಾರ್ಮಿಕರಾದ ರಾಜು ಮತ್ತು ತಂಡದವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT