ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡತಿ ಬಾಂಧವ್ಯ ಸಂಭ್ರಮ

Last Updated 23 ಜುಲೈ 2017, 19:30 IST
ಅಕ್ಷರ ಗಾತ್ರ

ನನ್ನ ತವರಿನಲ್ಲೇ ಇದೀಗ ಏಷ್ಯಾ ಎತ್ತರದ ಹಣಾಹಣಿಯಲ್ಲಿ ಪಾಲ್ಗೊಳ್ಳುವುದಿದೆಯಲ್ಲಾ ಇದಕ್ಕಿಂತ ಖುಷಿ ಇನ್ನೇನಿದೆ.

ಶ್ರೀಕಂಠೀರವ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ ಏಷ್ಯಾ ಮಹಿಳಾ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ ನನ್ನ ಬದುಕಿನ ಅವಿಸ್ಮರಣೀಯ ಕ್ಷಣಗಳಾಗಿವೆ.

12 ವರ್ಷಗಳಿಂದ ನಾನು ಬ್ಯಾಸ್ಕೆಟ್‌ಬಾಲ್‌ ಆಡುತ್ತಿದ್ದೇನೆ. ಜೋರ್ಡಾನ್‌, ಕೊಲಂಬೊ, ಬ್ಯಾಂಕಾಕ್‌ ಸೇರಿದಂತೆ ಕೆಲವು ದೇಶಗಳಲ್ಲಿ ಏಷ್ಯಾ ಮಟ್ಟದ ಟೂರ್ನಿಗಳಲ್ಲಿ ಆಡಿದ್ದೇನೆ. ಆದರೆ ಇದೀಗ ಕನ್ನಡಿಗರ ಹರ್ಷೋದ್ಘಾರಗಳ ನಡುವೆ ಆಡುವಾಗ ಉಂಟಾಗುವ ರೋಮಾಂಚನ ಪದಗಳಿಗೆ ನಿಲುಕುವಂತಹದ್ದಲ್ಲ.

ನಮ್ಮ ತಂಡಕ್ಕೆ ಫೆಡರೇಷನ್‌ನವರು ಅತ್ಯುತ್ತಮ ಸೌಲಭ್ಯ ನೀಡಿದ್ದಾರೆ. ವಿದೇಶಿ ಕೋಚ್‌ಗಳನ್ನು ಕರೆಸಿ ತರಬೇತಿ ನೀಡಿದ್ದಾರೆ. ಇಲ್ಲಿ ಎತ್ತರಕ್ಕೇರಲು ಶಕ್ತಿ ಮೀರಿ ಯತ್ನಿಸುತ್ತೇವೆ.

ಇದೇ ಮೊದಲ ಬಾರಿಗೆ ಏಷ್ಯಾ ಕೂಟದಲ್ಲಿ ಆಸ್ಟ್ರೇಲಿಯ ಮತ್ತು ನ್ಯೂಜಿಲೆಂಡ್‌ಗಳೂ ಪಾಲ್ಗೊಳ್ಳುತ್ತಿರುವುದರಿಂದ ಪೈಪೋಟಿ ಹೊಸ ರಂಗು ಪಡೆದುಕೊಳ್ಳಲಿದೆ.

ಚೀನಾ, ಜಪಾನ್‌ ತಂಡಗಳ ಆಟಗಾರ್ತಿಯರ ಅತ್ಯುತ್ತಮ ಆಟವನ್ನು ಕಣ್ತುಂಬಿಕೊಳ್ಳಲು ಕನ್ನಡಿಗರಿಗೆ ಇದೊಂದು ಸುಸಂದರ್ಭ.

-ಬಾಂಧವ್ಯ
ಭಾರತ ಬ್ಯಾಸ್ಕೆಟ್‌ಬಾಲ್‌ ತಂಡದ ಆಟಗಾರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT