ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮ್ಮೇಳನ ತಪ್ಪಲ್ಲ

Last Updated 23 ಜುಲೈ 2017, 19:30 IST
ಅಕ್ಷರ ಗಾತ್ರ

‘ವಿಶ್ವ ಕನ್ನಡ ಸಮೇಳನ ಸದ್ಯಕ್ಕೆ ಬೇಡ’ ಎಂದು ನಾಡಿನ ಕೆಲವು ಪ್ರಜ್ಞಾವಂತರು ಪ್ರತಿಪಾದಿಸಿರುವುದು (ಸಂಗತ, ಜುಲೈ 21) ಸರಿಯಾಗಿ ಕಂಡರೂ, ಅವರು ಅಭಿಪ್ರಾಯವನ್ನು ಸಮ್ಮೇಳನಕ್ಕೆ ಸೀಮಿತ ಮಾಡಿದ್ದು ಸರಿಕಾಣುವುದಿಲ್ಲ.

ರಾಜ್ಯ ಸರ್ಕಾರದ ವತಿಯಿಂದ ಹಲವರ ಜಯಂತಿ ಕಾರ್ಯಕ್ರಮಗಳನ್ನು ವೈಭವದಿಂದ ಆಚರಿಸಲಾಗುತ್ತಿದೆ, ಸರ್ಕಾರದ ಕೆಲವು ಯೋಜನೆಗಳ ಉದ್ಘಾಟನಾ ಸಮಾರಂಭಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗುತ್ತಿದೆ.

ಈಗ ಅಂಬೇಡ್ಕರ್ ಅಂತರರಾಷ್ಟ್ರೀಯ ಸಮಾವೇಶ ನಡೆಸುತ್ತಿಲ್ಲವೇ? ನಾಡಿನಲ್ಲಿ ಬರಗಾಲವಿದ್ದರೂ, ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ, ಕಳಸಾ -ಬಂಡೂರಿ ಯೋಜನೆಗಾಗಿ, ಕಾವೇರಿ ನೀರಿಗಾಗಿ ರೈತರು ಬೀದಿಗೆ ಇಳಿದಿದ್ದರೂ ಸರ್ಕಾರದವರಿಗೆ ಅದರ ಅರಿವು ಇಲ್ಲ. ಆ ವಿಷಯದಲ್ಲಿ ಪ್ರಜ್ಞಾವಂತರು ತಲೆ ಕೆಡಿಸಿಕೊಳ್ಳುವುದಿಲ್ಲ ಏಕೆ?

ಇದೆಲ್ಲವನ್ನೂ ನೋಡಿದರೆ ವಿಶ್ವ ಕನ್ನಡ ಸಮ್ಮೇಳನ ಹಾಗೂ ಮುಂಬರುವ ಮೈಸೂರು ದಸರಾ ಉತ್ಸವವನ್ನು ಸರಳವಾಗಿ ಆಚರಿಸುವುದು ತಪ್ಪಲ್ಲ.
ಸಿ.ಸಿದ್ದರಾಜು ಆಲಕೆರೆ, ಮಂಡ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT