ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆಂಕಯ್ಯ ವಿರುದ್ಧ ಆರೋಪ

Last Updated 24 ಜುಲೈ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಬಡವರಿಗೆ ಮೀಸಲಿರಿಸಿದ್ದ ಜಮೀನು ಹಂಚಿಕೆಯಲ್ಲಿ ಆಗಿದ್ದ ಅವ್ಯವಹಾರದ ಬಗ್ಗೆ ದನಿ ಎತ್ತಿರುವ ಕಾಂಗ್ರೆಸ್, ಎನ್‌ಡಿಎ ಉಪರಾಷ್ಟ್ರಪತಿ ಅಭ್ಯರ್ಥಿ ವೆಂಕಯ್ಯ ನಾಯ್ಡು ಅವರಿಗೆ ಇರಿಸುಮುರಿಸು ಉಂಟುಮಾಡಿದೆ.

ಆಂಧ್ರದ ನೆಲ್ಲೂರು ಜಿಲ್ಲೆಯಲ್ಲಿ ಬಡವರು, ಹಿಂದುಳಿದವರಿಗೆ ಮೀಸಲಿರಿಸಿದ್ದ ಜಮೀನನ್ನು ನಾಯ್ಡು ಅವರ ಕುಟುಂಬ ಕಬಳಿಸಿದ ಆರೋಪವಿದೆ. ಅದರೆ ರಾಜಕೀಯ ಒತ್ತಡ ಹಾಗೂ ಸಾರ್ವಜನಿಕರ ಪ್ರತಿಭಟನೆಗೆ ಮಣಿದಿದ್ದ ನಾಯ್ಡು ಅವರು ಒತ್ತಾಯಪೂರ್ವಕವಾಗಿ ಜಮೀನು ಹಿಂದಿರುಗಿಸಿದ್ದರು ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಆರೋಪಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ವೆಂಕಯ್ಯ, ಈ ಎಲ್ಲ ಪ್ರಶ್ನೆಗಳಿಗೆ ಈಗಾಗಲೇ ಉತ್ತರಿಸಲಾಗಿದೆ ಎಂದಿದ್ದಾರೆ.

ನಾಯ್ಡು ಅವರ ಮಗ ಹಾಗೂ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ಮಗನ ಕಂಪೆನಿಗಳಿಂದ ಕಾರು ಖರೀದಿಸಲು ಸರ್ಕಾರವು ಟೆಂಡರ್ ಕರೆಯದೇ ₹271 ಕೋಟಿ ಬಿಡುಗಡೆ ಮಾಡಿದೆ ಎಂದೂ ಆರೋಪಿಸಿದ್ದಾರೆ. ನಾಯ್ಡು ಅವರ ಮಗಳ ವಿರುದ್ಧವೂ ಆರೋಪ ಹೊರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT