ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೀರು ಹರಿವವರೆಗೂ ಹೋರಾಟ ನಿಲ್ಲದು’

ಮಹದಾಯಿ ಧರಣಿ 741ನೇ ದಿನಕ್ಕೆ: ಯಾವಗಲ್‌ ರೈತರಿಂದ ಉಪವಾಸ
Last Updated 25 ಜುಲೈ 2017, 7:07 IST
ಅಕ್ಷರ ಗಾತ್ರ

ನರಗುಂದ: ಮಹದಾಯಿ ಯೋಜನೆ ಜಾರಿಗೆ ಜನಪ್ರತಿನಿಧಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಇದರ ಬಗ್ಗೆ ಗಮನ ನೀಡದಿದ್ದರೆ ರೈತರ ಆಕ್ರೋಶ ಮಗಿಲು ಮುಟ್ಟುವುದು ನಿಶ್ಚಿತ. ಇದನ್ನು ಪ್ರಧಾನಿ ಅರಿಯಬೇಕು. ಮಹದಾಯಿ ನೀರು ಹರಿಯುವವರೆಗೂ ಹೋರಾಟ ನಿರಂತರ ಎಂದು ರೈತ ಸೇನೆ ರೋಣ ತಾಲ್ಲೂಕು ಘಟಕದ ಅಧ್ಯಕ್ಷ ಮುತ್ತು ಕುರಿ ಎಚ್ಚರಿಸಿದರು.

ಪಟ್ಟಣದಲ್ಲಿ ನಡೆಯುತ್ತಿರುವ ಮಹದಾಯಿ ಧರಣಿಯ 741ನೇ ದಿನವಾದ ಸೋಮವಾರ ಯಾವಗಲ್‌ ಗ್ರಾಮದ ರೈತರು ಕೈಗೊಂಡ ಸರದಿ ಉಪವಾಸದ ನೇತೃತ್ವ ವಹಿಸಿ ಮಾತನಾಡಿದರು.

ಮಹದಾಯಿಗೆ ಈ ಭಾಗದ ರೈತರು ಎಲ್ಲ ತ್ಯಾಗಕ್ಕೂ ಸಿದ್ದರಾಗಿದ್ದಾರೆ. ಇದನ್ನು ಅರಿಯಬೇಕು. ಈಗಾಗಲೇ ಯಾವಗಲ್‌ ಗ್ರಾಮದ ದಿ.ಧರ್ಮಣ್ಣ ತಹಶೀಲ್ದಾರ್‌ ಇದಕ್ಕಾಗಿ ಪ್ರಾಣ ಕಳೆದುಕೊಂಡು ವರ್ಷ ಗತಿಸಿದೆ. ಆದರೂ ಮಹದಾಯಿ ಯೋಜನೆ ಜಾರಿಯಾಗಿಲ್ಲ. ಈಗ ಮತ್ತೆ ಯಾವಗಲ್‌ನ 12 ರೈತರು ಸರದಿ ಉಪವಾಸದಲ್ಲಿ ಭಾಗವಹಿಸಿದ್ದೇವೆ. ಈ ಹೋರಾಟಕ್ಕೆ ನಿರಂತರ ಬೆಂಬಲ ಇರುತ್ತದೆ ಎಂದರು.

ಈ ಭಾಗದ ಆಡಳಿತ ಹಾಗೂ ವಿರೋಧ ಪಕ್ಷದ ನಾಯಕರು ಒಂದಾಗಿ ಕೇಂದ್ರದ ಮನವೊಲಿಸಬೇಕು. ಬದುಕಿನ ಹೋರಾಟವನ್ನು ಅಂತ್ಯಗೊಳಿಸಬೇಕು. ಬಯಲು ಸೀಮೆಗೆ ಮಹದಾಯಿ ನೀರು ಹರಿಸಬೇಕೆಂದು ಕುರಿ ಆಗ್ರಹಿಸಿದರು.

ಪರಪ್ಪ ಘಾಳಿ ಮಾತನಾಡಿ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರ ಈ ಹೋರಾಟವನ್ನು ಗಂಭೀರ ವಾಗಿ ತೆಗೆದುಕೊಳ್ಳುತ್ತಿದ್ದಾರೆ. ಆಗಸ್ಟ್‌ ಮೊದಲ ವಾರದವರೆಗೆ ಕಾಯುತ್ತಿದ್ದಾರೆ. ಆಗ ಮುಖ್ಯಮಂತ್ರಿಗಳು ಸ್ಪಂದಿಸದಿದ್ದರೆ ಹೋರಾಟದ ರೂಪ ಬದಲಾಗುತ್ತದೆ ಎಂದರು.

ಸರದಿ ಉಪವಾಸ: ಯಾವಗಲ್‌ನ ಪರಪ್ಪ ಘಾಳಿ, ಮಂಜುನಾಥ ಗಾಣಿಗೇರ, ಬಸವರಾಜ ಕುಂಬಾರ, ಮಾನಪ್ಪ ಬಡಿಗೇರ, ವೆಂಕಣ್ಣ ಹಳ್ಳಿಕೇರಿ, ಮಂಜುನಾಥ ಜೈನರ, ನಾಗಯ್ಯ ಮಳೆವಾಡ, ಗೋವಿಂದರಡ್ಡಿ ಮೇಟಿ, ವೀರಯ್ಯ ಮಳೀಮಠ, ಗುರಯ್ಯ ಕಾಡದೇವರಮಠ, ಹನಮಂತ ತಹಶೀಲ್ದಾರ್‌ ಹಾಗೂ ಕುರ್ಲಗೇರಿಯ  ಫಾತಿಮಾ ಹವಾಲ್ದಾರ್‌, ಬೀಬಿಜಾನ್‌ ಇಬ್ರಾಹಿಂಸಾಬ, ಶಾಂತವ್ವ ಪೂಜಾರ ಸರದಿ ಉಪವಾಸ ಕೈಗೊಂಡರು.

ಜಗನ್ನಾಥ ಮುಧೋಳ, ಚನ್ನಪ್ಪ ಗೌಡ ಪಾಟೀಲ, ಸಿದ್ದಪ್ಪ ಚಂದ್ರತ್ನವರ, ವೆಂಕಪ್ಪ ಹುಜರತ್ತಿ, ಅನಸವ್ವ ಸಿಂಧೆ, ನಾಗರತ್ನ ಸವಳಭಾವಿ, ವಾಸು ಚವ್ಹಾಣ ಧರಣಿಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT