ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮುಸ್ಲಿಂ ಹೆಣ್ಣು ಮಕ್ಕಳಿಗೆ ವೈದ್ಯಕೀಯ ಶಿಕ್ಷಣ’

ಯೇನೆಪೋಯ ಶಿಕ್ಷಣ ಸಂಸ್ಥೆಯ ಸಾಮಾಜಿಕ ಕಾಳಜಿಗೆ ಶ್ಲಾಘನೆ
Last Updated 25 ಜುಲೈ 2017, 9:36 IST
ಅಕ್ಷರ ಗಾತ್ರ

ಉಳ್ಳಾಲ: ಮುಸ್ಲಿಂ ಹೆಣ್ಣುಮಕ್ಕಳು ವೈದ್ಯ ಕೀಯ ಶಿಕ್ಷಣ ಪಡೆಯುವಂತೆ ಮಾಡುವ ಮೂಲಕ ಯೇನೆಪೋಯ ಸಂಸ್ಥೆ 25 ವರ್ಷಗಳಿಂದ ಸಾಮಾಜಿಕ ಕಾಳಜಿಗೆ ಸಾಕ್ಷಿಯಾಗಿದೆ ಎಂದು ಎಂಫಾರ್ ಗ್ರೂಪ್‌ ಅಧ್ಯಕ್ಷ ಡಾ.ಪಿ. ಮಹಮ್ಮದ್ ಅಲಿ ಅಭಿಪ್ರಾಯಪಟ್ಟರು.

ದೇರಳಕಟ್ಟೆಯ ಯೇನೆಪೋಯ ವಿವಿ ಕ್ಯಾಂಪಸ್‌ನ ಎಂಡ್ಯೂರೆನ್ಸ್ ಸಭಾಂ ಗಣದಲ್ಲಿ ಸೋಮವಾರ ನಡೆದ ಯೇನೆ ಪೋಯ ದಂತ ವೈದ್ಯಕೀಯ ಕಾಲೇಜಿನ ಬೆಳ್ಳಿಹಬ್ಬ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಮುಸ್ಲಿಂ ಸಮುದಾಯವನ್ನು ವೈದ್ಯ ಕೀಯ ಶಿಕ್ಷಣ ಪಡೆಯುವಂತೆ ಪ್ರೇರೇಪಿ ಸುವ ಮೂಲಕ ಸಂಸ್ಥೆಯು ದೇಶದಾ ದ್ಯಂತ ಲಕ್ಷಾಂತರ ವೈದ್ಯರನ್ನು ಸೃಷ್ಟಿಸಿದ್ದು, ಮುಂದಿನ 10 ವರ್ಷಗಳಲ್ಲಿ ದೇಶದ ಅಗ್ರ 10 ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಯೇನೆಪೋಯ ಸಂಸ್ಥೆಯ ಹೆಸರು ಬರ ಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘25 ವರ್ಷಗಳಲ್ಲಿ ಮಾಡಿರುವ ಸಾಧ ನೆಯನ್ನು ಗಮನಿಸಿದರೆ ಈ ಗುರಿ ಕಷ್ಟ ವೆಂದೇನೂ ಅನಿಸುವುದಿಲ್ಲ. ಭಾರ ತೀಯ ಶಸ್ತ್ರಚಿಕಿತ್ಸೆ ಪ್ರಕ್ರಿಯೆಯ ಪಿತಾ ಮಹ ಚರಕ ಮಹರ್ಷಿಯವರ ಪ್ರಕ್ರಿಯೆಗಳ ಸ್ಥಾನವನ್ನು ಇಂದು ಯಾಂತ್ರೀಕೃತ ಶಸ್ತ್ರಚಿಕಿತ್ಸೆಗಳು ತೆಗೆದುಕೊಂಡಿದ್ದು, ಒಂದು ಕೋಣೆಯಲ್ಲಿ ಕುಳಿತ ವೈದ್ಯನು, ಇತರ ಯಾವುದೋ ದೇಶದ ಆಸ್ಪತ್ರೆಯ ಲ್ಲಿರುವ ರೋಗಿಯ ಮೇಲೆ ಆಧುನಿಕ ತಂತ್ರಜ್ಞಾನಗಳ ಮೂಲಕ ಶಸ್ತ್ರಚಿಕಿತ್ಸೆ ಮಾಡಿ ಮುಗಿಸಬಲ್ಲ. ಇಂತಹ ತಂತ್ರ ಜ್ಞಾನವನ್ನು ಯೇನೆಪೋಯ ಆಸ್ಪತ್ರೆ ಯಲ್ಲಿ ಅಳವಡಿಸಿರುವುದು ಸಂಸ್ಥೆಯ ಮಹತ್ತರ ಸಾಧನೆಗಳಲ್ಲಿ ಒಂದಾಗಿದೆ’ ಎಂದರು.

‘ವೈದ್ಯಕೀಯ ವಿದ್ಯಾರ್ಥಿಗಳು ಮಾನ ವನ ಜೀವಗಳ ಜತೆ ಕೆಲಸ ಮಾಡುವ ವರಾಗಿದ್ದಾರೆ. ಹಾಗಾಗಿ ಕ್ಷೇತ್ರದಲ್ಲಿ ತಪ್ಪು ಮಾಡಲು  ಅವಕಾಶವಿಲ್ಲ. ಪುಸ್ತಕಗಳು ಕೇವಲ ತಂತ್ರಗಳನ್ನು ಕಲಿಸಿಕೊಡ ಬಲ್ಲವು. ಆದರೆ ನಿಖರತೆಯನ್ನು ಸಾಧಿ ಸಲು ಮನೋಭೂಮಿಕೆ ಮತ್ತು ಆತ್ಮಸ್ಥೈ ರ್ಯವನ್ನು ಗಟ್ಟಿಗೊಳಿಸುವ ಮತ್ತು ಹೃದಯ ಮತ್ತು ಮನಸ್ಸನ್ನು ಸಿದ್ಧತೆಯ ಲ್ಲಿಡುವ ಅಗತ್ಯವಿದೆ. ವೈದ್ಯಕೀಯ ಕ್ಷೇತ್ರಕ್ಕೆ ಸಮಾಜದಲ್ಲಿ ಬಹಳ ಗೌರವವಿದೆ. ಅದಕ್ಕೆ ಕುಂದುಂಟಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ’ ಎಂದರು.

ಯೇನೆಪೋಯ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ.ಎಂ. ವಿಜಯ ಕುಮಾರ್, ಯೇನೆಪೋಯ ಸಮೂಹ ಸಂಸ್ಥೆಗಳ ಅಧ್ಯಕ್ಷ ಯೇನೆಪೋಯ ಮಹ ಮ್ಮದ್ ಕುಂಞಿ, ಟ್ರಸ್ಟಿಗಳಾದ  ಡಾ.ಸಿ.ಪಿ. ಹಬೀಬ್ ರೆಹಮಾನ್, ಕೆ.ಖಾಲಿದ್ ಬಾವಾ, ಆಡಳಿತ ಮಂಡಳಿ   ಸದಸ್ಯ ಡಾ. ವೇದಪ್ರಕಾಶ್ ಮಿಶ್ರಾ ವೇದಿಕೆ ಯಲ್ಲಿದ್ದರು.

ಯೇನೆಪೋಯ ದಂತ ವೈದ್ಯಕೀಯ ಕಾಲೇಜಿನ ಶೈಕ್ಷಣಿಕ ಮಂಡಳಿಯಲ್ಲಿ ಸೇವೆ ಸಲ್ಲಿಸಿದ ದೇರಳಕಟ್ಟೆ ಎ.ಬಿ.ಶೆಟ್ಟಿ ದಂತ ವೈದ್ಯಕೀಯ ಕಾಲೇಜಿನ ಸ್ಥಾಪಕ ಡೀನ್ ಡಾ.ಎನ್. ಶ್ರೀಧರ್ ಶೆಟ್ಟಿ, ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎಚ್. ಶ್ರೀಪತಿ ರಾವ್, ಇಸ್ಲಾಮಿಕ್ ಅಕಾಡೆಮಿ ಆಫ್ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಡಾ.ಅಖ್ತರ್ ಹುಸೈನ್, ದಂತ ವೈದ್ಯಕೀಯ ಕಾಲೇಜಿನ ಸ್ಥಾಪಕ ಡೀನ್ ಡಾ.ಥಾಮಸ್ ಚಾಕೋ ಟೆಲ್ಲಿ, ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ ಡಾ. ಬಿ.ಆರ್.ಆರ್. ವರ್ಮಾ ಹಾಗೂ ದಂತ ವೈದ್ಯಕೀಯ ಕಾಲೇಜಿನಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಉಪನ್ಯಾಸಕರು ಹಾಗೂ  ಶಿಕ್ಷಕೇತರ ಸಿಬ್ಬಂದಿಯನ್ನು ಗೌರವಿಸಲಾಯಿತು.

ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ.ಎಚ್. ಶ್ರೀಪತಿ ರಾವ್ ಸ್ವಾಗತಿಸಿದರು. ಉಪ ಪ್ರಾಂಶುಪಾಲ ಡಾ. ಶ್ಯಾಮ್ ಭಟ್ ಮತ್ತು ಡಾ. ಗಣೇಶ್ ಶೆಣೈ ಪಂಚಮಾಲ್ ಅತಿಥಿಗಳನ್ನು ಪರಿಚಯಿಸಿದರು. ಡಾ. ಹಸನ್ ಸರ್ಫರಾಜ್ ಬೆಳ್ಳಿಹಬ್ಬದ ಕುರಿ ತಾಗಿ ನಡೆದ ಕಾರ್ಯಕ್ರಮಗಳ ವಿವರ ನೀಡಿದರು.

ಬೆಳ್ಳಿಹಬ್ಬ ಕಾರ್ಯಕ್ರಮ ಸಂ ಯೋಜಕ ಡಾ.ಅಖ್ತರ್ ಹುಸೈನ್, 25 ವರ್ಷಗಳ  ದಂತ ಕಾಲೇಜಿನ ಅವಲೋ ಕನ ನಡೆಸಿದರು. ಕುಲಸಚಿವ ಡಾ. ಶ್ರೀಕುಮಾರ್ ಮೆನನ್ ವಂದಿಸಿದರು. ಫ್ರೇಝಿಯರ್ ಮಾರ್ಟಿನ್ ಕಾರ್ಯಕ್ರಮ ನಿರ್ವಹಿಸಿದರು.

ಕಿನ್ಯಾದಲ್ಲಿ ಆಯುಷ್ ಸಂಕೀರ್ಣ
‘ಕರಾವಳಿ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ರೊಬೊಟಿಕ್ ಸರ್ಜಿಕಲ್ ಸೇವೆಯನ್ನು ಆರಂಭಿಸಿ, ಆ ಮೂಲಕ 100ಕ್ಕೂ ಅಧಿಕ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗಿವೆ. ಮುಂದಿನ ಗುರಿ ಅತ್ಯಾಧುನಿಕ ವೈದ್ಯಕೀಯ ಸೇವೆಗಳನ್ನು ಕೈಗೆಟಕುವ ಬೆಲೆಯಲ್ಲಿ ಸಮಾಜದ ಪ್ರತಿಯೊಬ್ಬರಿಗೂ ದೊರಕುವಂತೆ ಮಾಡುವುದಾಗಿದೆ.

ಯೋಜನೆಯ ಮುಂದಿನ ಭಾಗವಾಗಿ ಇಲ್ಲಿನ ಕಿನ್ಯಾ ಪ್ರದೇಶದಲ್ಲಿ ಆಯುಷ್ ಸಂಕೀರ್ಣವನ್ನು ಸ್ಥಾಪಿಸಿ ಅಲ್ಲಿ ಎಲ್ಲಾ ರೀತಿಯ ಭಾರತೀಯ ವೈದ್ಯಕೀಯ ವ್ಯವಸ್ಥೆ ಒದಗಿಸುವಂತೆ ಮಾಡಲಾಗುವುದು’ ಎಂದು ಅಧ್ಯಕ್ಷತೆ ವಹಿಸಿದ್ದ ಯೇನೆಪೋಯ ಅಬ್ದುಲ್ಲ ಕುಂಞ ತಿಳಿಸಿದರು.

‘ದಂತ ಕಾಲೇಜು 25 ವರ್ಷಗಳನ್ನು ಪೂರೈಸಿರುವುದು ತಂದೆಯವರಾದ ಯೇನೆಪೊಯ ಮೊಯಿದ್ದೀನ್‌ ಕುಂಞಯವರ ಕನಸುಗಳು ನನಸಾದ ಅಪೂರ್ವ ಕ್ಷಣ. ಅವರ ಧ್ಯೆಯೋದ್ದೇಶಗಳನ್ನು ಪೂರ್ಣಗೊಳಿಸಲು ಸಿಕ್ಕಂತಹ ಅವಕಾಶ. ಮಾನವೀಯ, ಸಹೃದಯಿ ಬುದ್ಧಿಜೀವಿಗಳ ತಲೆಮಾರನ್ನು ಸೃಷ್ಟಿಸುವಲ್ಲಿ ಸಫಲರಾಗಿದ್ದೇವೆ ಎಂಬುದು ಹೆಮ್ಮೆಯ ವಿಷಯ’ ಎಂದರು.

*
‘20-30 ವರ್ಷಗಳ ಹಿಂದೆ ಕ್ಯಾನ್ಸರ್ ಕಡಿಮೆ ಪ್ರಮಾಣ ದಲ್ಲಿತ್ತು. ಇದೀಗ ಶೇ 25ರಷ್ಟು ಮಂದಿ ಬಾಯಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ.
–ಡಾ.ಅನಿಲ್ ಡಿಕ್ರೂಜ್‌,
ಮುಂಬೈನ ಟಾಟಾ ಮೆಮೋರಿಯಲ್ ಆಸ್ಪತ್ರೆ ವೈದ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT