ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಲಮೇಲಮ್ಮ’ನ ಯಶಸ್ಸಿನ ಯಾತ್ರೆ

Last Updated 27 ಜುಲೈ 2017, 19:30 IST
ಅಕ್ಷರ ಗಾತ್ರ

‘ಸಿನಿಮಾ ಚೆನ್ನಾಗಿ ಕಲೆಕ್ಷನ್‌ ಮಾಡುತ್ತಿದೆ’

ತಮ್ಮ ನಿರ್ದೇಶನದ ‘ಆಪರೇಷನ್‌ ಅಲಮೇಲಮ್ಮ’ಕ್ಕೆ ಜನರಿಂದ ಒಳ್ಳೆಯ ಸ್ಪಂದನ ಸಿಕ್ಕ ಖುಷಿ ಸುನಿ ಅವರ ಮಾತಿನಲ್ಲಿ ಎದ್ದು ಕಾಣುತ್ತಿತ್ತು.

ಅವರು ಪತ್ರಕರ್ತರನ್ನು ಕರೆದಿದ್ದು ಈ ಖುಷಿಯನ್ನು ಹಂಚಿಕೊಳ್ಳಲಿಕ್ಕೆ ಮಾತ್ರವಲ್ಲ, ಇನ್ನೂ ಖುಷಿಯ ಸುದ್ದಿಯೊಂದು ನಾಲಿಗೆಯ ತುದಿಯಲ್ಲಿ ಮಾತಾಗಲು ಹವಣಿಸುತ್ತಿತ್ತು.

ಅದೇನೆಂದರೆ ‘ಅಲಮೇಲಮ್ಮ’ನ ಸದ್ದು ಕನ್ನಡದ ಗಡಿಯನ್ನು ದಾಟಿ ಹಿಂದಿ, ಮರಾಠಿ ಮತ್ತು ತಮಿಳು ಚಿತ್ರರಂಗದಲ್ಲಿಯೂ ರಿಂಗಣಸಿದೆ ಎನ್ನುವುದು. ಹೌದು, ರಿಷಿ ಮತ್ತು ಶ್ರದ್ಧಾ ಶ್ರೀನಾಥ್‌ ಅಭಿನಯದ ಈ ಸಿನಿಮಾ ಮೂರು ಭಾಷೆಗಳಲ್ಲಿ ರಿಮೇಕ್‌ ಆಗಲಿದೆ.

(ಸಿಂಪಲ್‌ ಸುನಿ)

ಈ ವಿಷಯವನ್ನು ಹಂಚಿಕೊಳ್ಳುವ ತವಕವೂ ಸುನಿ ಅವರಲ್ಲಿತ್ತು. ‘ಧೂನ್‌’ ಎಂಬ ಸಿನಿಮಾ ನಿರ್ಮಾಣ ಸಂಸ್ಥೆ ಅಲಮೇಲಮ್ಮನನ್ನು ಹಿಂದಿಯಲ್ಲಿ ಮರುಸೃಷ್ಟಿಸುವ ಆಸಕ್ತಿ ತೋರಿದೆ. ಮರಾಠಿಯಲ್ಲಿಯೂ ಅದೇ ಸಂಸ್ಥೆ ರಿಮೇಕ್‌ ಮಾಡಲಿದೆ. ಇದರ ಜತೆಗೆ ತಮಿಳಿನಲ್ಲಿ ಹಾರಿಜನ್‌ ಎಂಬ ನಿರ್ಮಾಣ ಸಂಸ್ಥೆ ‘ಆಪರೇಷನ್‌ ಅಲಮೇಲಮ್ಮ’ನ ರಿಮೇಕ್ ಹಕ್ಕುಗಳನ್ನು ಖರೀದಿಸಲು ಮುಂದಾಗಿದೆ.

‘ಕನ್ನಡದಲ್ಲಿ ರಿಷಿ ನಿರ್ವಹಿಸಿದ್ದ ಪಾತ್ರವನ್ನು ತಮಿಳಿನಲ್ಲಿ ವಿಜಯ್‌ ಸೇತುಪತಿ ಮಾಡಲಿದ್ದಾರೆ’ ಎಂದೂ ಸುನಿ ಬಹಿರಂಗಪಡಿಸಿದರು.

ಹೀಗೆ ಒಂದು ಕಡೆ ಬೇರೆ ಭಾಷೆಗಳಲ್ಲಿ ಸುದ್ದಿ ಮಾಡಲು ‘ಅಲಮೇಲಮ್ಮ’ ಸಜ್ಜಾಗುತ್ತಿದ್ದರೆ ನಿರ್ದೇಶಕ ಸಿಂಪಲ್‌ ಸುನಿ ಆಪರೇಷನ್‌ ಮುಂದುವರಿಸುವ ಸುಳಿವನ್ನೂ ನೀಡಿದ್ದಾರೆ. ಇದೇ ಚಿತ್ರದ ಮುಂದಿನ ಭಾಗವನ್ನೂ ತೆರೆಗೆ ತರುವ ಆಲೋಚನೆ ಅವರಿಗಿದೆ. ಮೊದಲ ಭಾಗವನ್ನು ನಿರ್ಮಾಣ ಮಾಡಿದ್ದ ಅಮರೇಶ್‌ ಸೂರ್ಯವಂಶಿ ಅವರೇ ಎರಡನೇ ಭಾಗಕ್ಕೂ ಹಣ ಹೂಡಲಿದ್ದಾರೆ. ಎರಡನೇ ಭಾಗದಲ್ಲಿಯೂ ರಿಷಿ ಅವರೇ ನಾಯಕನಾಗಿ ನಟಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT