ಬೆಂಗಳೂರು: ಕರ್ನಾಟಕದ ಅರ್ಚನಾ ಕಾಮತ್ ಅವರು ನವದೆಹಲಿಯಲ್ಲಿ ನಡೆದ 47ನೇ ಅಖಿಲ ಭಾರತ ಅಂತರ ಸಂಸ್ಥೆಗಳ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನ ತಂಡ ವಿಭಾಗದಲ್ಲಿ ಚಿನ್ನದ ಸಾಧನೆ ಮಾಡಿದ್ದಾರೆ.

ಫೈನಲ್ ಹಣಾಹಣಿಯಲ್ಲಿ ಅರ್ಚನಾ, ಮಧುರಿಕ ಪಾಟ್ಕರ್, ಪೂಜಾ ಸಹಸ್ರಬುದ್ದೆ, ಮಣಿಕಾ ಬಾತ್ರಾ ಮತ್ತು ಪೌಲೊಮಿ ಘಾಟಕ್ ಅವರಿದ್ದ ಪಿಎಸ್‌ಪಿಬಿ ತಂಡ 3–1ರಲ್ಲಿ ಆರ್‌ಬಿಐ ತಂಡವನ್ನು ಸೋಲಿಸಿತು.

ಇದಕ್ಕೂ ಮುನ್ನ ನಡೆದಿದ್ದ ಸೆಮಿಫೈನಲ್ ಹೋರಾಟದಲ್ಲಿ ಪಿಎಸ್‌ಪಿಬಿ ತಂಡ 3–1ರಲ್ಲಿ ಆರ್‌ಎಸ್‌ಪಿಬಿ ತಂಡದ ವಿರುದ್ಧ ಗೆದ್ದಿತ್ತು.

ಯೂತ್ ವಿಭಾಗದಲ್ಲಿ ಬೆಳ್ಳಿ: ಯೂತ್ ಬಾಲಕಿಯರ ವಿಭಾಗದಲ್ಲಿ ಅರ್ಚನಾ, ಯಾಶಿನಿ ಶಿವಶಂಕರ್, ವರುಣಿ ಜೈಸ್ವಾಲ್ ಮತ್ತು ರಿತಿ ಶಂಕರ್ ಅವರಿದ್ದ ಪಿಎಸ್‌ಪಿಬಿ ತಂಡ ಬೆಳ್ಳಿಗೆ ತೃಪ್ತಿಪಟ್ಟಿತು.

ಫೈನಲ್‌ನಲ್ಲಿ ಪಿಎಸ್‌ಪಿಬಿ ತಂಡ 0–3ರಲ್ಲಿ ಆರ್‌ಬಿಐಗೆ ಶರಣಾಯಿತು.

ಇದಕ್ಕೂ ಮುನ್ನ ನಡೆದಿದ್ದ ಪಂದ್ಯಗಳಲ್ಲಿ ಪಿಎಸ್‌ಪಿಬಿ ತಂಡದವರು 3–1ರಲ್ಲಿ ಏರ್ ಇಂಡಿಯಾ ಎದುರೂ, 3–0ರಲ್ಲಿ ಎಎಐ ವಿರುದ್ಧವೂ ಗೆದ್ದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.